ಡೈವೋರ್ಸ್, ಕಾಯಿಲೆ, ಮಾನಸಿಕಯಾತನೆ ಬಗ್ಗೆ ಮನಬಿಚ್ಚಿ ಮಾತಾಡಿದ ನಟಿ ಸಮಂತಾ
ಟಾಲಿವುಡ್ ನಟಿ ಸಮಂತಾ ತನ್ನ ಆರೋಗ್ಯ ಮತ್ತು ತನ್ನ ಜೀವನದ ಕಠಿಣ ವರ್ಷದ ಕುರಿತು ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. ನಾಗ ಚೈತನ್ಯರಿಂದ ದೂರವಾದ ವರ್ಷ ಜೀವನದ ಅತ್ಯಂತ ಕಷ್ಟದ ವರ್ಷವಾಗಿತ್ತು ಎಂದು ನೋವಿನಿಂದ ನುಡಿದಿದ್ದಾರೆ.
ಇದನ್ನೂ ಓದಿ: ವಿಮಾನ ದುರಂತದಿಂದ ಪಾರಾದ ಮಾರ್ಟಿನ್ ಚಿತ್ರ ತಂಡ – ಮೊದಲ ಬಾರಿಗೆ ಸಾವನ್ನು ಹತ್ತಿರ ನೋಡಿ ವಾಪಸ್ ಬಂದೆ ಎಂದ ನಟ ಧ್ರುವ ಸರ್ಜಾ
ನಟಿ ಸಮಂತಾ ತಾನು ಇಷ್ಟಪಟ್ಟು ಮದುವೆಯಾಗಿದ್ದು, ನಂತರ ಡೈವೋರ್ಸ್ ಆಗಿರುವ ಬಗ್ಗೆ ಇದುವರೆಗೂ ಮೌನವಾಗಿಯೇ ಇದ್ದರು. ಇದೇ ಮೊದಲ ಬಾರಿಗೆ ನಟಿ ಸಮಂತಾ ತನ್ನ ಮನದಾಳದ ಮಾತನ್ನು ಹೇಳಿಕೊಂಡಿದ್ದಾರೆ.
‘ಈ ಸಮಸ್ಯೆಯನ್ನು (ಮಯೋಸೈಟಿಸ್) ಎದುರಿಸುವ ಹಿಂದಿನ ವರ್ಷದ ಘಟನೆಯನ್ನು ನಾನು ಹೇಳುತ್ತೇನೆ. ಅದು ನನಗೆ ಅತ್ಯಂತ ಕಷ್ಟಕರವಾದ ವರ್ಷವಾಗಿತ್ತು’ ಎಂದು ಸಮಂತಾ ಹೇಳಿದ್ದಾರೆ. ಈ ಮೂಲಕ ಅದು ವಿಚ್ಛೇದನದ ಬಗ್ಗೆ ಇರಬಹುದು ಎಂದು ಫ್ಯಾನ್ಸ್ ಊಹಿಸಿದ್ದಾರೆ. ‘ನನ್ನ ಮ್ಯಾನೇಜರ್ ಹಿಮಾಂಕ್ ಮತ್ತು ನಾನು ಮುಂಬೈನಿಂದ ಹಿಂತಿರುಗುತ್ತಿದ್ದ ದಿನ ಅದು. ನನಗೆ ಬಹಳ ಸಮಯದಿಂದ ಶಾಂತಿ ಎಂಬುದೇ ಇರಲಿಲ್ಲ. ಅಂತಿಮವಾಗಿ ನಾನು ಹಾಯಾಗಿ ನಿದ್ರೆ ಮಾಡಬಹುದು ಎಂದು ನನಗೆ ಅನಿಸಿತ್ತು. ಹೀಗೆ ಎಂದುಕೊಳ್ಳುವಾಗಲೇ ನನಗೆ ಮಯೋಸೈಟಿಸ್ ಕಾಣಿಸಿಕೊಂಡಿತು’ ಎಂದು ಸಮಂತಾ ಹೇಳಿದ್ದಾರೆ.
ನಟಿ ಸಮಂತಾ ತಾನು ಈ ಕಾಯಿಲೆಯಿಂದ ಎಷ್ಟೆಲ್ಲಾ ತೊಂದರೆ ಅನುಭವಿಸಿದ್ದೇನೆ ಅನ್ನೋದನ್ನು ಹೇಳಿದ್ದಾರೆ. ಜೊತೆಗೆ ತಾನು ಪತಿ ನಾಗಚೈತನ್ಯ ಅವರಿಂದ ದೂರವಾದ ವರ್ಷ ತುಂಬಾ ಕಷ್ಟಕರವಾಗಿತ್ತು ಎಂಬುದನ್ನು ಬಹಳ ನೋವಿನಿಂದ ಹೇಳಿಕೊಂಡಿದ್ದಾರೆ.
ಸಮಂತಾ ಹಾಗೂ ನಾಗ ಚೈತನ್ಯ ಕೆಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಇವರದ್ದು ಹಿಟ್ ಕಾಂಬಿನೇಷನ್. ಹಲವು ವರ್ಷಗಳ ಕಾಲ ಪ್ರೀತಿಸಿದ ಈ ಜೋಡಿ 2017ರಲ್ಲಿ ವಿವಾಹ ಆಗಿದ್ದರು. ಮದುವೆ ಬಳಿಕ ಇವರು ನಾಲ್ಕು ವರ್ಷಗಳ ಕಾಲ ಸಂಸಾರ ನಡೆಸಿದರು. 2021ರಲ್ಲಿ ಇವರು ಬೇರೆ ಆಗುವ ನಿರ್ಧಾರ ಘೋಷಣೆ ಮಾಡಿದರು. ವಿಚ್ಛೇದನದ ಬಳಿಕ ಸಮಂತಾ ಸಾಕಷ್ಟು ಅಧ್ಯಾತ್ಮ ಕೇಂದ್ರಗಳಿಗೆ ಭೇಟಿ ನೀಡಿ ಬಂದಿದ್ದಾರೆ.