ಸ್ವಾಮಿ ನಿತ್ಯಾನಂದನ ‘ಕೈಲಾಸ’ಕ್ಕೆ ನಟಿ ರಂಜಿತಾ ಪ್ರಧಾನಿಯಾಗಿ ನೇಮಕ…!

ಸ್ವಾಮಿ ನಿತ್ಯಾನಂದನ ‘ಕೈಲಾಸ’ಕ್ಕೆ ನಟಿ ರಂಜಿತಾ ಪ್ರಧಾನಿಯಾಗಿ ನೇಮಕ…!

ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ತಾನು ಸ್ಥಾಪನೆ ಮಾಡಿರುವ ಕೈಲಾಸ ದೇಶಕ್ಕೆ ಮಾಜಿ ನಟಿ ರಂಜಿತಾರನ್ನು ಪ್ರಧಾನಿಯಾಗಿ ನೇಮಿಸಿದ್ದಾರೆ. 2010ರಲ್ಲಿ ನಟಿ ರಂಜಿತಾ ಜೊತೆಗಿನ ಅಶ್ಲೀಲ ವಿಡಿಯೋದಿಂದಾಗಿ ನಿತ್ಯಾನಂದನ ಒಂದೊಂದೇ ರಾಸಲೀಲೆಗಳು ಹೊರಬಂದಿದ್ದವು. ಆ ಮಟ್ಟಿಗೆ ನಿತ್ಯಾನಂದ ಮತ್ತು ರಂಜಿತಾ ವಿಚಾರ ಸಾಕಷ್ಟು ಪ್ರಚಾರವೂ ಆಗಿತ್ತು.  ನಿತ್ಯಾನಂದನಿಗೆ ನಟಿ ರಂಜಿತಾ ತಮ್ಮ ನೆಚ್ಚಿನ ಶಿಷ್ಯೆ ಮಾತ್ರವಲ್ಲ, ನಿತ್ಯಾನಂದನಿಗೆ ಪರಮಾಪ್ತ ಶಿಷ್ಯೆಯಾಗಿದ್ದಳು.

ಇದನ್ನೂ ಓದಿ: ವಿಶ್ವಸಂಸ್ಥೆ ಮಹಾಸಭೆಯಲ್ಲಿ ಭಾಗವಹಿಸಿದ ‘ಕೈಲಾಸ’ದ ಪ್ರತಿನಿಧಿ – ನಿತ್ಯಾನಂದನಿಗೆ ರಕ್ಷಣೆ ಕೋರಿದ ಶಿಷ್ಯೆ..!

ಸ್ವಯಂಘೋಷಿತ ದೇವಮಾನವ ನಿತ್ಯಾನಂದನ ವಿರುದ್ಧ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ, ಅಪಹರಣ ಕೇಸ್‌ ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಜಾಮೀನುರಹಿತ ವಾರಂಟ್‌ಗಳು ಜಾರಿಯಾಗಿದೆ. ಇದರ ನಡುವೆ 2019ರಲ್ಲಿ ಭಾರತದಿಂದ ಓಡಿಹೋಗಿದ್ದ ನಿತ್ಯಾನಂದ ಕೆಲ ದಿನಗಳಲ್ಲೇ ತಾನು ಕೈಲಾಸ ಎನ್ನುವ ದೇಶವನ್ನು ರಚನೆ ಮಾಡಿದ್ದು, ಅದಕ್ಕೆ ನಾನೇ ಅಧ್ಯಕ್ಷ ಎಂದಿದ್ದ. ಹೀಗಿರುವಾಗ ನಿತ್ಯಾನಂದ, ಮಾಜಿ ನಟಿ ರಂಜಿತಾರನ್ನು ತನ್ನ ಕೈಲಾಸ ದೇಶದ ಪ್ರಧಾನಿಯಾಗಿ ನೇಮಿಸಿದ್ದಾನೆ ಎಂದು ವರದಿಯಾಗಿದೆ. ನಿತ್ಯಾನಂದನಿಗೆ ನಟಿ ರಂಜಿತಾ ತಮ್ಮ ನೆಚ್ಚಿನ ಶಿಷ್ಯೆ ಮಾತ್ರವಲ್ಲ, ಆರಂಭದಿಂದಲೂ ನಿತ್ಯಾನಂದ ಜೊತೆಯಲ್ಲಿ ಇದ್ದ ಪರಮಾಪ್ತೆ ಕೂಡಾ ಹೌದು. ರಂಜಿತಾ ತೆಲುಗು, ತಮಿಳು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಕೆರಿಯರ್ ಉತ್ತುಂಗದಲ್ಲಿರುವಾಗಲೇ ನಿತ್ಯಾನಂದನ ಜೊತೆ ಸೇರಿಕೊಂಡಿದ್ದರು.

suddiyaana