ಮುದ್ದಿನ ನಾಯಿ ನಾಪತ್ತೆಯಾಗಿದ್ದಕ್ಕೆ ನಟಿ ರಮ್ಯಾ ಕಣ್ಣೀರು – ಶ್ವಾನವನ್ನು ಹುಡುಕಿಕೊಡುವಂತೆ ಮನವಿ ಮಾಡಿದ ಮೋಹಕತಾರೆ..!

ಮುದ್ದಿನ ನಾಯಿ ನಾಪತ್ತೆಯಾಗಿದ್ದಕ್ಕೆ ನಟಿ ರಮ್ಯಾ ಕಣ್ಣೀರು – ಶ್ವಾನವನ್ನು ಹುಡುಕಿಕೊಡುವಂತೆ ಮನವಿ ಮಾಡಿದ ಮೋಹಕತಾರೆ..!

ನಟಿ ರಮ್ಯಾ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ, ನಟಿ ರಮ್ಯಾ ಅವರ ಮುದ್ದಿನ ನಾಯಿ ಚಾಂಪ್ ಕಾಣೆಯಾಗಿದ್ದು, ಆತಂಕದಲ್ಲಿದ್ದಾರೆ. ನನ್ನ ನಾಯಿ ಕಾಣೆಯಾಗಿದೆ. ಹುಡುಕಲು ದಯವಿಟ್ಟು ನನಗೆ ಸಹಾಯ ಮಾಡಿ ಎಂದು ನಟಿ ಮನವಿ ಮಾಡಿದ್ದಾರೆ. ಮುದ್ದಿನ ನಾಯಿ ಕಾಣಿಸುತ್ತಿಲ್ಲ ಎಂದು ಗೊತ್ತಾದ ತಕ್ಷಣ ನಟಿ ರಮ್ಯಾ ಕಣ್ಣೀರು ಹಾಕಿದರು. ನಾಯಿಯನ್ನು ಹುಡುಕಿಕೊಡಿ ಎಂದು ಕೂಡಲೇ ಟ್ವಿಟರ್‌ನಲ್ಲಿ ಬರೆೆದುಕೊಂಡು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ:  ಸಕ್ಕರೆನಗರಿಯಲ್ಲಿ ಪ್ರಿಯಾಂಕಾ, ರಮ್ಯಾ ಮೋಡಿ – ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ಮತಬೇಟೆ

ಚಾಂಪ್ ಹೆಸರಿನ ನಾಯಿ ಇದಾಗಿದ್ದು ಕಪ್ಪು ಬಣ್ಣದಲ್ಲಿದೆ. ಇದಕ್ಕೆ ಭಾಗಶಃ ಕಣ್ಣು ಕಾಣಿಸುವುದಿಲ್ಲ. ಸುರಕ್ಷಿತವಾಗಿ ನಾಯಿಯನ್ನು ಮರಳಿಸುವವರಿಗೆ ಬಹುಮಾನ ನೀಡಲಾಗುತ್ತದೆ ಎಂದು ನಟಿ ಬರೆದಿದ್ದಾರೆ. ಮೇ 6ರಂದು ಕೊನೆಯಬಾರಿಗೆ ನೋಡಲಾಗಿದೆ. ತಾಜ್ ವೆಸ್ಟ್ ಎಂಡ್, ರೇಸ್ ಕೋರ್ಸ್ ರೋಡ್ ಬೆಂಗಳೂರಿನಿಂದ ನಾಪತ್ತೆಯಾಗಿದೆ. ನಿಮಗೆ ಮಾಹಿತಿ ಸಿಕ್ಕಿದರೆ 7012708137 ಇಲ್ಲಿ ಸಂಪರ್ಕಿಸಿ ಎಂದು ನಟಿ ಟ್ವಿಟರ್‌ನಲ್ಲಿ ಬರೆೆದುಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾಗ ಈ ಮಾಹಿತಿ ಸಿಗುತ್ತಿದ್ದಂತೆ ತೀವ್ರ ನೊಂದುಕೊಂಡಿದ್ದಾರೆ.

ರಮ್ಯಾ ಅವರಿಗೆ ನಾಯಿ ಅಂದರೆ ಎಲ್ಲಿಲ್ಲದ ಪ್ರೀತಿ. ನಾಯಿ ಕಥೆಯನ್ನು ಇಟ್ಟುಕೊಂಡೇ ಅವರೊಂದು ಸಿನಿಮಾ ಕೂಡ ಮಾಡಿದ್ದಾರೆ. ‘ನಾನು ಏನ್ ಮಾಡ್ಲಿ ಸ್ವಾಮಿ.. ನನ್ನ ಹುಡುಗಿ ನಾಯಿ ಪ್ರೇಮಿ’ ಎನ್ನುವ ಹಾಡು ಕೂಡ ಸಖತ್ ಫೇಮಸ್ ಆಗಿತ್ತು. ಇದೀಗ ನಾಯಿಯನ್ನು ಕಳೆದುಕೊಂಡು ದುಃಖ ಪಡುತ್ತಿದ್ದಾರೆ ರಮ್ಯಾ.

suddiyaana