ಅಶ್ಲೀಲ ಮೆಸೇಜ್ ಮಾಡೋ ಮುಂಚೆ ಹುಷಾರ್‌ – ಅಕೌಂಟ್ ಡಿಲೀಟ್ ಮಾಡಿದ್ರೂ ಆಗ್ತೀರಾ ಲಾಕ್

ಅಶ್ಲೀಲ ಮೆಸೇಜ್ ಮಾಡೋ ಮುಂಚೆ ಹುಷಾರ್‌ –  ಅಕೌಂಟ್ ಡಿಲೀಟ್ ಮಾಡಿದ್ರೂ  ಆಗ್ತೀರಾ ಲಾಕ್

ನಟಿ ರಮ್ಯಾ ಅವರಿಗೆ ಅಶ್ಲೀಲ  ಕಾಮೆಂಟ್‌ಗಳನ್ನು ಮಾಡಿದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ರಮ್ಯಾ ಮಾಡಿದ್ದ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಅಶ್ಲೀಲವಾಗಿ ಮೆಸೇಜ್  ಮಾಡಿದ್ರು. ಈ ಸಂಬಂಧ ಪೊಲೀಸರಿಗೆ ರಮ್ಯಾ ದೂರು ನೀಡಿದ್ರು, ಈಗ ಐಪಿ ಅಡ್ರೆಸ್ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ.

ಇದನ್ನೂ ಓದಿ: ಮಗುವನ್ನ ಏರ್‌ಪೋರ್ಟ್‌ನಲ್ಲೇ ಬಿಟ್ಟು ಫಾರಿನ್‌ ಟ್ರಿಪ್‌ ಹೋದ ದಂಪತಿ!

ನಟ ದರ್ಶನ್ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಕಳಿದ್ದಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ದರ್ಶನ್ ಅಂಡ್ ಗ್ಯಾಂಗ್‌ನಿಂದ ಕೊಲೆ ಮಾಡಲಾಗಿದೆ. ಈ ಪ್ರಕರಣ ಕುರಿತು ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲೆಂದು ನಟಿ ರಮ್ಯಾ ಪೋಸ್ಟ್ ಹಂಚಿಕೊಂಡಿದ್ದರು. ಆದರೆ, ಈ ಪೋಸ್ಟ್‌ಗೆ ನಟಿ ರಮ್ಯಾಗೆ 46 ಜನ ದರ್ಶನ್ ಅಭಿಮಾನಿಗಳು ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು, ಈ ಕೇಸಿನಲ್ಲಿ ಅಶ್ಲೀಲವಾಗಿ ಮೆಸೇಜ್ ಮಾಡಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಫೋಸ್ಟ್ ಹಾಕಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ  ನಟಿ ಹಾಗೂ ಮಾಜಿ ಸಂಸದ ರಮ್ಯಾ ಅವರಿಗೆ ಅಶ್ಲೀಲ ಮತ್ತು ಅವಹೇಳನಕಾರಿ ಭಾಷೆ ಬಳಸಿ ಕಾಮೆಂಟ್ ಮೂಲಕ ನಿಂದನೆ ಮಾಡಿದ್ದ ಯುವಕರನ್ನು ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. . ನಟಿ ರಮ್ಯಾಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದ 46 ಜನರ ವಿರುದ್ದ  ರಮ್ಯಾ ದೂರು ನೀಡಿದ್ದರು. ಇದರ ಬೆನ್ನಲ್ಲಿಯೇ ಕೆಲವರು ಅಕೌಂಟ್ ಡಿಲೀಟ್ ಮಾಡಿದ್ದರು. ಆದರೆ, ಪೊಲೀಸರು ಐಪಿ ಅಡ್ರೆಸ್ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿ ಆಗಿದ್ದಾರೆ. ಇದೀಗ ಚಿಕ್ಕಬಳ್ಳಾಪುರದ ಗಂಗಾಧರ್ (18) ಹಾಗೂ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಓಬಣ್ಣ (25) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

IP  ಅಡ್ರೆಸ್ ಹಾಗೂ ID ಮೂಲಕ ಪತ್ತೆ

ಸೈಬರ್ ವಿಶೇಷ ತಂತ್ರಜ್ಞಾನದ ನೆರವಿನಿಂದ ಆರೋಪಿಗಳ ಸೋಷಿಯಲ್ ಮೀಡಿಯಾ ಖಾತೆಗಳ ವಿಶ್ಲೇಷಣೆ ನಡೆಸಿದ ಪೊಲೀಸರು, ಅವರ ಐಪಿ ಅಡ್ರೆಸ್ ಆಧರಿಸಿ ಸ್ಥಳ ನಿಖರವಾಗಿ ಪತ್ತೆಹಚ್ಚಿದ್ದಾರೆ. ಬಂಧಿತ ಮೂವರು ಯುವಕರು ಕೋಲಾರ ಮತ್ತು ಚಿತ್ರದುರ್ಗ ಜಿಲ್ಲೆಗಳ ಮೂಲದವರಾಗಿದ್ದಾರೆ.

Kishor KV