ಸ್ಟಾರ್ ಕ್ರಿಕೆಟರ್ ಜೊತೆ ನಟಿ ಪೂಜಾ ಹೆಗ್ಡೆ ಲವ್ – ಸದ್ಯದಲ್ಲೇ ಮದುವೆಯಾಗುತ್ತಿದ್ದಾರೆ ಅಂತಾ ಬಾಲಿವುಡ್‌ನಲ್ಲಿ ಪುಕಾರು

ಸ್ಟಾರ್ ಕ್ರಿಕೆಟರ್ ಜೊತೆ ನಟಿ ಪೂಜಾ ಹೆಗ್ಡೆ ಲವ್ – ಸದ್ಯದಲ್ಲೇ ಮದುವೆಯಾಗುತ್ತಿದ್ದಾರೆ ಅಂತಾ ಬಾಲಿವುಡ್‌ನಲ್ಲಿ ಪುಕಾರು

ಮಂಗಳೂರು ಮೂಲದ ನಟಿ ಪೂಜಾ ಹೆಗ್ಡೆ ಬಾಲಿವುಡ್‌ನಲ್ಲಿ ಮಿಂಚು ಹರಿಸುತ್ತಿದ್ದಾರೆ. ಟಾಲಿವುಡ್‌ನಲ್ಲೂ ಪೂಜಾ ಹೆಗ್ಡೆ ಹವಾ ಜೋರಾಗಿಯೇ ಇದೆ. ಈ ನಡುವೆ ಪೂಜಾ ಹೆಗ್ಡೆ ಲವ್ ಅಫೇರ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಸ್ಟಾರ್ ಕ್ರಿಕೆಟಿಗನ ಜೊತೆ ಪೂಜಾ ಹೆಗ್ಡೆ ಲವ್‌ಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಜೋರಾಗಿಯೇ ಕೇಳಿಬರುತ್ತಿದೆ.

ಇದನ್ನೂ ಓದಿ: ಸರೋವರದ ಮಧ್ಯೆ ಸಪ್ತಪದಿ ತುಳಿದ ಪರಿಣಿತಿ ಚೋಪ್ರಾ ಮತ್ತು ಎಎಪಿ ಮುಖಂಡ ರಾಘವ್ ಚಡ್ಡಾ

ಪೂಜಾ ಹೆಗ್ಡೆ ಇನ್ ಲವ್ ಅಂತಿದ್ದವರು ಸದ್ಯದಲ್ಲೇ ಮದುವೆಯೂ ಗ್ಯಾರಂಟಿ ಅಂತಿದ್ದಾರೆ. ಪೂಜಾ ಹೆಗ್ಡೆ ಸ್ಟಾರ್ ಕ್ರಿಕೆಟಿಗನ ಜೊತೆ ಬರೀ ಅಫೇರ್ ನಲ್ಲಿ ಇಲ್ಲ. ಮದುವೆಯಾಗುವ ಬಗ್ಗೆಯೂ ಸೀರಿಯಸ್ ಆಗಿ ಯೋಚಿಸುತ್ತಿದ್ದಾರಂತೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟಿ ಮುಂಬೈ ಮೂಲದ ಸ್ಟಾರ್ ಕ್ರಿಕೆಟಿಗನ ಜೊತೆಗೆ ಬಂದಿದ್ದಾರೆ. ಇದನ್ನು ನೋಡಿದವರು ಸುದ್ದಿ ಪಕ್ಕಾ ಅಂತಿದ್ದಾರೆ.  ಬಿಟೌನ್ ಸ್ಟಾರ್‌ಗಳು ಕ್ರಿಕೆಟಿಗರ ಜೊತೆ ಅಫೇರ್ ಇಟ್ಟುಕೊಳ್ಳುವುದು ಸಾಮಾನ್ಯ ಸಂಗತಿಯೇ. ಆದರೆ, ಈಗ ಪೂಜಾ ಹೆಗ್ಡೆ ತನ್ನ ಕ್ರಿಕೆಟರ್ ಬಾಯ್ ಫ್ರೆಂಡ್ ಜೊತೆ ಮದುವೆಗೆ ಸಜ್ಜಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಹಾಗಂತ ಪೂಜಾ ಹೆಗ್ಡೆ ಡೇಟಿಂಗ್ ಸುದ್ದಿ ವೈರಲ್ ಆಗಿರುವುದು ಇದು ಮೊದಲೇನಲ್ಲ. ಸಲ್ಮಾನ್ ಖಾನ್ ಜೊತೆ ಕಿಸೀ ಕಾ ಭಾಯ್, ಕಿಸೀ ಕಾ ಜಾನ್ ಚಿತ್ರೀಕರಣದ ಸಮಯದಲ್ಲಿ ಪೂಜಾ ಹೆಗ್ಡೆ ಹಾಗೂ ಸಲ್ಮಾನ್ ಖಾನ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಅದಕ್ಕೆ ಕಾರಣ ಏನೆಂದರೆ, ಆ ಸಮಯದಲ್ಲಿ ಸಲ್ಮಾನ್ ಖಾನ್ ಹಾಗೂ ಪೂಜಾ ಹೆಗ್ಡೆ ಬಹುತೇಕ ಚಿತ್ರದ ಹೊರತಾದ ಎಲ್ಲಾ ಸಮಾರಂಭಗಳಲ್ಲೂ ಜೊತೆಯಾಗಿ ಭಾಗವಹಿಸಿದ್ದರು. ಆದರೆ, ಕೊನೆಗೆ ಸ್ವತಃ ಪೂಜಾ ಹೆಗ್ಡೆ ಈ ಗಾಸಿಪ್ಅನ್ನು ನಿರಾಕರಿಸಿದ್ದರು.

Sulekha