ಗೆಳೆಯನ ಜೊತೆ ನಟಿ ಪೂಜಾಗಾಂಧಿ ಮದುವೆಗೆ ಸಿದ್ಧತೆ – ಮಂತ್ರಮಾಂಗಲ್ಯ ಪದ್ಧತಿಯಲ್ಲಿ ವಿವಾಹ

ಗೆಳೆಯನ ಜೊತೆ ನಟಿ ಪೂಜಾಗಾಂಧಿ ಮದುವೆಗೆ ಸಿದ್ಧತೆ – ಮಂತ್ರಮಾಂಗಲ್ಯ ಪದ್ಧತಿಯಲ್ಲಿ ವಿವಾಹ

ನಟಿ ಪೂಜಾ ಗಾಂಧಿ ಮದುವೆಗೆ ಕೌಂಟ್‌ಡೌನ್ ಶುರುವಾಗಿದೆ. ಒಂದು ದಶಕದ ಹಿಂದೆ ನಟಿ ಪೂಜಾ ಗಾಂಧಿ ಕನ್ನಡದಲ್ಲಿ ಬಹುಬೇಡಿಕೆ ನಟಿಯಾಗಿದ್ದರು. ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿ ಸಿಂಪಲ್ ಆಗಿಯೇ ಮದುವೆ ಆಗುತ್ತಿದ್ದಾರೆ.

ಇದನ್ನೂ ಓದಿ:ಕ್ಯಾಪ್ಟನ್ ಆಗಿರುವಾಗಲೇ ಬಿಗ್ ಬಾಸ್ ಮನೆಯಿಂದ ನೀತು ಔಟ್ – ಇಬ್ಬರು ಸೆಲೆಬ್ರಿಟಿಗಳು ವೈಲ್ಡ್ ಕಾರ್ಡ್ ಎಂಟ್ರಿ

ಮುಂಗಾರು ಮಳೆ ಬೆಡಗಿ ಪೂಜಾ ಗಾಂಧಿ ಸರಳವಾಗಿ ಮದುವೆಯಾಗಲಿದ್ದಾರೆ. ಬೆಂಗಳೂರಿನಲ್ಲಿ ಲಾಜೆಸ್ಟಿಕ್ ಕಂಪನಿ ಓನರ್ ವಿಜಯ್ ಎಂಬವರನ್ನು ಪೂಜಾ ಗಾಂಧಿ ವರಿಸಲಿದ್ದಾರೆ. ನವೆಂಬರ್ 29ರಂದು ಬೆಂಗಳೂರಿನ ಯಲಹಂಕದಲ್ಲಿ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿರುವ ನಟಿ ಪೂಜಾ ಗಾಂಧಿಗೆ ಕನ್ನಡ ಕಲಿಸಿದ್ದು ಇದೇ ವಿಜಯ್ ಎಂದು ಹೇಳಲಾಗುತ್ತಿದೆ. ಅವರಿಬ್ಬರೂ ಕಳೆದ ಕೆಲವು ವರ್ಷಗಳಿಂದ ಪ್ರೇಮಿಗಳಾಗಿದ್ದವರು ಎನ್ನಲಾಗಿದೆ.

ಬೆಂಗಾಲಿ ಮೂಲದ ನಟಿ ಕನ್ನಡ ಸಿನಿಮಾಗಳಲ್ಲಿ ನಟಿಸಿ, ಕನ್ನಡ ಕಲಿತು ಇದೀಗ ಕನ್ನಡಿಗನನ್ನು ಮದುವೆಯಾಗಿ ಕರ್ನಾಟಕದ ಸೊಸೆಯೇ ಆಗಲಿದ್ದಾರೆ. ಇದು ನಿಜವಾಗಿಯೂ ಕನ್ನಡಿಗರು ಹೆಮ್ಮೆ ಪಡುವ ಸಂಗತಿಯೇ ಆಗಿದೆ.

Sulekha