ವಿಚ್ಛೇದನ ವದಂತಿ ಬೆನ್ನಲ್ಲೇ ನಿಗೂಢಾರ್ಥದಲ್ಲಿ ಪೋಸ್ಟ್ – ‘ಕಳೆದು ಹೋಗಿದ್ದೇನೆ’ ಎಂದು ನಯನತಾರಾ ಹೇಳಿದ್ದೇಕೆ?

ವಿಚ್ಛೇದನ ವದಂತಿ ಬೆನ್ನಲ್ಲೇ ನಿಗೂಢಾರ್ಥದಲ್ಲಿ ಪೋಸ್ಟ್ – ‘ಕಳೆದು ಹೋಗಿದ್ದೇನೆ’ ಎಂದು ನಯನತಾರಾ ಹೇಳಿದ್ದೇಕೆ?

ನಟಿ ನಯನತಾರಾ ಅವರು ವೈಯಕ್ತಿಕ ವಿಚಾರಕ್ಕೆ ಹೆಚ್ಚು ಸುದ್ದಿಯಲ್ಲಿ ಇದ್ದಾರೆ. ನಯನತಾರಾ ಹಾಗೂ ಪತಿ ವಿಘ್ನೇಶ್ ಶಿವನ್ ಜೊತೆ ಯಾವುದೂ ಸರಿ ಇಲ್ಲ. ಇವರಿಬ್ಬರ ಸಂಬಂಧ ಮುರಿಯುವ ಹಂತಕ್ಕೆ ಬಂದಿದೆ. ನಯನತಾರಾ, ವಿಘ್ನೇಶ್ ಶಿವನ್‌ಗೆ ಡಿವೋರ್ಸ್ ನೀಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ನಯನತಾರಾ ಇನ್​ಸ್ಟಾಗ್ರಾಮ್ ನಲ್ಲಿ ಸ್ಟೇಟಸ್​ವೊಂದನ್ನು ಹಾಕಿದ್ದಾರೆ. ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ಸಿಗರ ವಿರುದ್ಧ ರೊಚ್ಚಿಗೆದ್ದ ಸಂಸದೆ ಸುಮಲತಾ – ಮಂಡ್ಯದಲ್ಲಿ ಶುರುವಾಯ್ತು ಕ್ರೆಡಿಟ್ ವಾರ್

ನಯನತಾರ ಹಾಗೂ ಪತಿ ವಿಘ್ನೇಶ್ ಶಿವನ್ ಕಳೆದ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇದಾದ ಬಳಿಕ ಇಬ್ಬರೂ ಖುಷಿಯಾಗಿದೆ ಸಂಸಾರ ನಡೆಸುತ್ತಾ ಬಂದಿದ್ದರು. ಆದರೆ, ಇತ್ತೀಚೆಗೆ ಯಾಕೋ ಅವರ ಮಧ್ಯೆ ವೈಮನಸ್ಸು ಇದೆ ಎಂದು ಹೇಳಲಾಗುತ್ತಿದೆ. ಹಿಗಿರುವಾಗಲೇ ನಯನತಾರಾ ಅವರು ಇನ್​ಸ್ಟಾಗ್ರಾಮ್ ಸ್ಟೇಟಸ್​ನಲ್ಲಿ ‘ಹೌದು, ಕಳೆದು ಹೋಗಿದ್ದೇನೆ’ ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನ ನೋಡಿ ಅಭಿಮಾನಿಗಳು ನಯನತಾರಾ ಸಂಸಾರದಲ್ಲಿ ಬಿರುಕು ಕಾಣಿಸಿದ್ದು ಸತ್ಯ ಅಂತಿದ್ದಾರೆ.

ನಯನತಾರಾ ಮಾಡಿದ ನಿಗೂಢ ಪೋಸ್ಟ್​ನ ಅರ್ಥವೇನು ಎಂದು ಫ್ಯಾನ್ಸ್ ಚಿಂತೆಗೆ ಒಳಗಾಗಿದ್ದಾರೆ. ‘ನಯನತಾರಾ ಜೊತೆ ಯಾರಾದರೂ ಮಾತನಾಡಿ. ಅವರು ಮೊದಲಿನಂತಾಗಬೇಕು’ ಎಂದು ಕೆಲವರು ಪೋಸ್ಟ್ ಮಾಡಿದ್ದಾರೆ. ಇನ್ನೂ ಕೆಲವರು ‘ಇದು ಸಿನಿಮಾ ಪ್ರಚಾರವೋ ಅಥವಾ ನಿಜಕ್ಕೂ ನಯನತಾರಾಗೆ ತೊಂದರೆ ಆಗಿದೆಯೇ’ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದಾರೆ.

Shwetha M