ನಟಿ ಭಾವನಾ ರಾಮಣ್ಣಗೆ ಅವಧಿ ಪೂರ್ವ ಹೆರಿಗೆ – ಒಂದು ಮಗು ನಿಧನ, ಇನ್ನೊಂದು ಮಗು ಕ್ಷೇಮ!

ನಟಿ ಭಾವನಾ ರಾಮಣ್ಣಗೆ ಅವಧಿ ಪೂರ್ವ ಹೆರಿಗೆ – ಒಂದು ಮಗು ನಿಧನ, ಇನ್ನೊಂದು ಮಗು ಕ್ಷೇಮ!

ನಟಿ ಭಾವನಾ ರಾಮಣ್ಣಗೆ ಅವಧಿ ಪೂರ್ವ ಹೆರಿಗೆಯಾಗಿದೆ.  ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಒಂದು ಮಗು ಮೃತಪಟ್ಟಿದ್ದು, ಇನ್ನೊಂದು ಮಗು ಕ್ಷೇಮವಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮನೆಯಲ್ಲಿ ಮಲಗಿದ್ದ ಮಗುವನ್ನ ನೀರಿನ ಡ್ರಮ್‌ನಲ್ಲಿ ಮುಳುಗಿಸಿ ಕೊಂದ ಕೋತಿಗಳು!

ಭಾವನಾ ರಾಮಣ್ಣ ಅವರು ಮದುವೆಗೂ ಮುನ್ನವೇ ತಾಯಿಯಾಗಿದ್ದಾರೆ. 40ನೇ ವಯಸ್ಸಿನಲ್ಲಿ ಭಾವನಾ ಐವಿಎಫ್ ಚಿಕಿತ್ಸೆ  ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ವೈದ್ಯರ ಸಲಹೆ ಮೂಲಕ ಎರಡು ವಾರಗಳ ಹಿಂದೆಯೇ ಹೆರಿಗೆ ಮಾಡಿಸಲಾಗಿದೆ. ಆದರೆ ದುರಾದೃಷ್ಟವಶತ್‌ ಇಬ್ಬರು ಮಕ್ಕಳ ಪೈಕಿ ಒಂದು ಮಗು ಸಾವನ್ನಪ್ಪಿದೆ. ಇನ್ನೊಂದು ಹೆಣ್ಣು ಮಗು ಬದುಕುಳಿದಿದ್ದು, ತಾಯಿ ಹಾಗೂ ಶಿಶು ಕ್ಷೇಮವಾಗಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚೆಗಷ್ಟೇ ಭಾವನಾ ಸೀಮಂತ ಮಾಡಿಕೊಂಡಿದ್ದರು. ಆದರೆ ಏಳನೇ ತಿಂಗಳಿನಲ್ಲಿರುವಾಗ ನಟಿಗೆ ಕೆಲವು ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಹೀಗಾಗಿ ವೈದ್ಯರು ಎಂಟನೇ ತಿಂಗಳಿಗೆ ಹೆರಿಗೆ ಮಾಡಿಸುವ ಸೂಚನೆ ನೀಡಿದ್ದರು. ಎರಡು ವಾರಗಳ ಹಿಂದೆ ಹೆರಿಗೆ ಮಾಡಿಸಲಾಗಿತ್ತು. ಆದರೆ ಒಂದು ಮಗು ಮೃತಪಟ್ಟಿದೆ.

ತಾಯಿ ಆಗುವ ಆಸೆ ಇತ್ತು, ಅದೀಗ ನೆರವೇರುತ್ತಿದೆ. ತುಂಬ ಸಮಯದಿಂದ ಮಹಿಳೆಯರು ಸಿಂಗಲ್‌ ಪೇರೆಂಟ್‌ ಆಗೋದನ್ನು ಕಾನೂನು ಬೆಂಬಲಿಸಿರಲಿಲ್ಲ. ಕಾನೂನು ಕೆಲಸ ಆದಬಳಿಕ ನಾನು ಈ ನಿರ್ಧಾರಕ್ಕೆ ಬಂದೆ. ಐವಿಎಫ್‌ ಕ್ಲಿನಿಕ್‌ ಹೋಗಿ ನಾನು ಈ ಬಗ್ಗೆ ವಿಚಾರಿಸಿದೆ ಎಂದು ಈ ಹಿಂದೆ ಭಾವನಾ ಹೇಳಿದ್ದರು. ನಾನು ನನ್ನ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿದ್ದು, ಅದಕ್ಕೆ ತಯಾರಿ ಮಾಡಿಕೊಂಡಿದ್ದೇನೆ. ನನ್ನ ತಾಯಿ ಬದುಕಿದ್ದಿದ್ದರೆ ಈ ವಿಷಯ ಕೇಳಿ ಫುಲ್‌ ಖುಷಿಯಾಗುತ್ತಿದ್ದಳು. ತಂದೆಯಿಲ್ಲದೆ ಮಕ್ಕಳನ್ನು ಬೆಳೆಸಿದರೆ ಸಮಾಜವು ಅವರಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳುತ್ತದೆ ಎನ್ನೋದು ನನಗೆ ಗೊತ್ತಿದೆ. ನಾನು ಪುರುಷ ವಿರೋಧಿಯಲ್ಲ, ಆದರೆ ಪುರುಷನಿಲ್ಲದೆ ಬದುಕೋದು ಸರಿ ಅಂತ ಕೂಡ ಹೇಳುತ್ತಿಲ್ಲ. ಜೀವನದಲ್ಲಿ ಪ್ರೀತಿ ಮುಖ್ಯ, ಪ್ರಾಮಾಣಿಕತೆ ಇರಬೇಕು ಎನ್ನೋದನ್ನು ನನ್ನ ಮಕ್ಕಳಿಗೆ ಕಲಿಸಿಕೊಡ್ತೀನಿ ಎಂದು ಅವರು ಹೇಳಿದ್ದಾರೆ.

Shwetha M