ನಟಿ ಆಲಿಯಾ ಭಟ್ ‘ಬ್ಲೌಸ್’ ಹಾಕಿಲ್ವಾ ? –ಈ ‘ಅಶ್ಲೀಲ’ ಫೋಟೋದ ಅಸಲಿ ವಿಚಾರ ಏನು ಗೊತ್ತಾ?

ನಟಿ ಆಲಿಯಾ ಭಟ್ ‘ಬ್ಲೌಸ್’ ಹಾಕಿಲ್ವಾ ? –ಈ ‘ಅಶ್ಲೀಲ’ ಫೋಟೋದ ಅಸಲಿ ವಿಚಾರ ಏನು ಗೊತ್ತಾ?

ಬಾಲಿವುಡ್‌ನ ಸಿಂಪಲ್ ಬ್ಯೂಟಿ ಆಲಿಯಾ ಭಟ್ ತಮ್ಮ ಸಹಜ ಸೌಂದರ್ಯದಿಂದಲೇ ಅಭಿಮಾನಿಗಳ ಮನಗೆದ್ದ ನಟಿ. ಮೇಕಪ್ ಇಲ್ಲದೇ ಚೆಂದವಾಗಿ ಕಾಣುವ ಈ ನಟಿಯೆಂದರೆ ಅಭಿಮಾನಿಗಳಿಗೂ ತುಂಬಾ ಇಷ್ಟ. ಆದರೆ, ಅಭಿಮಾನಿಗಳು ಆಲಿಯಾ ಭಟ್ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಯಾಕೆಂದರೆ, ಆಲಿಯಾ ಭಟ್ ಫೋಟೋವೊಂದು ಅಭಿಮಾನಿಗಳ ನಿದ್ದೆಗೆಡಿಸಿದೆ. ಬಾಲಿವುಡ್ ನಟ ರಣವೀರ್‌ಸಿಂಗ್ ಜೊತೆ ನಟಿ ಆಲಿಯಾ ಭಟ್ ಬ್ಲೌಸ್ ಇಲ್ಲದೆ, ಸೀರೆಯಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಒಂದು ಮಗುವಾದ ಮೇಲೂ ಎದೆಭಾಗ ಕಾಣಿಸುವ ಈ ರೀತಿಯ ಭಂಗಿಯಲ್ಲಿ ಫೋಟೋ ಬೇಕಿತ್ತಾ ಎಂದು ಆಲಿಯಾ ಭಟ್ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದಾರೆ. ಪರರ ಪತಿ ಜೊತೆ ಇಷ್ಟು ಅಸಹ್ಯವಾಗಿ ಫೋಟೋ ತೆಗಿಸಿಕೊಳ್ಳುವ ಅಗತ್ಯ ಏನಿತ್ತು ಆಲಿಯಾ ಎಂದು ಪ್ರಶ್ನಿಸಿದ್ದಾರೆ. ಆದರೆ, ಈ ಅಶ್ಲೀಲ ಫೋಟೋದ ಹಿಂದಿರುವ ರಹಸ್ಯ ಈಗ ಬಯಲಾಗಿದೆ.

ಇದನ್ನೂ ಓದಿ: ‘ನಾನು ನೋವಿನಿಂದ ಬಳಲುತ್ತಿದ್ದೇನೆ, ಅದರಿಂದ ಹೊರಬರಲಾರದ ಸ್ಥಿತಿಗೆ ತಲುಪಿದ್ದೇನೆ’ – ದುಲ್ಕರ್ ಸಲ್ಮಾನ್‌ಗೆ ಏನಾಗಿದೆ?

ಕಪೂರ್ ಕುಟುಂಬದ ಸೊಸೆ ಆಲಿಯಾ ಈಗ ಏನು ಮಾಡಿದರೂ ದೊಡ್ಡ ಸುದ್ದಿಯಾಗುತ್ತದೆ. ಹೀಗಿರುವಾಗ ಆಲಿಯಾ ಭಟ್ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಪತಿ ರಣವೀರ್ ಕಪೂರ್ ಜೊತೆ ತೆಗೆಸಿಕೊಂಡಿರೋ ಫೋಟೋ ಸುದ್ದಿಯಾಗದೇ ಇರುತ್ತಾ. ಆದರೆ, ಇದರಲ್ಲಿ ಆಲಿಯಾ ತಿಳಿ ಹಸಿರು ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಆ ಚಿತ್ರದಲ್ಲಿ ಅವರು ಬ್ಲೌಸ್ ಧರಿಸಿಲ್ಲ. ಒಳ ಉಡುಪು ಕೂಡ ಇಲ್ಲ. ಆಕೆಯನ್ನು ರಣವೀರ್ ಬಳಸಿ ಹಿಡಿದುಕೊಂಡಿದ್ದಾರೆ. ಈ ಚಿತ್ರದಲ್ಲಿ ಆಕೆಯ ಎದೆಯ ಭಾಗ ಎದ್ದು ಕಾಣಿಸುತ್ತಿದೆ. ಆದರೆ ಅಸಲಿಗೆ ಈ ರೀತಿ ಅಶ್ಲೀಲ ಎನಿಸುವ ಬಟ್ಟೆಯನ್ನು ಆಲಿಯಾ ಹಾಕಿಕೊಂಡಿಲ್ಲ. ತನ್ನ ದೇಹಸಿರಿಯನ್ನು ಪ್ರದರ್ಶನ ಮಾಡಲೂ ಇಲ್ಲ.

ಇದು ಎಡಿಟ್ ಮಾಡಿರುವ ಫೋಟೋ. ಬಿಳಿ-ಕೇಸರಿ ಬಣ್ಣದ ಸ್ಲೀವ್ಲೆಸ್ ಬ್ಲೌಸ್ ಧರಿಸಿರುವ ಆಲಿಯಾ ಈ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಆದರೆ ಬ್ಲೌಸ್ ಧರಿಸಿರುವ ಭಾಗವನ್ನು ಎಡಿಟ್ ಮಾಡಲಾಗಿದ್ದು, ಎದೆ ಭಾಗವನ್ನು ಪ್ರದರ್ಶಿಸಲಾಗಿದೆ. ಇದನ್ನು ಅನೇಕರು ಸುಮ್ಮೆನೆ ಟ್ರೋಲ್ ಮಾಡುತ್ತಿದ್ದಾರೆ.

suddiyaana