ನಟಿ ಅದಿತಿ ಪ್ರಭುದೇವ ಸೀಮಂತ ಶಾಸ್ತ್ರ ಸಂಭ್ರಮ – ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳಿಂದ ಶುಭಹಾರೈಕೆ

ನಟಿ ಅದಿತಿ ಪ್ರಭುದೇವ ಸೀಮಂತ ಶಾಸ್ತ್ರ ಸಂಭ್ರಮ – ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳಿಂದ ಶುಭಹಾರೈಕೆ

ನಟಿ ಅದಿತಿ ಪ್ರಭುದೇವ ಸದ್ಯದಲ್ಲೇ ತಾಯಿ ಆಗಲಿದ್ದಾರೆ. ಹೊಸ ವರ್ಷದ ಸಂಭ್ರಮದಲ್ಲಿ ಗರ್ಭಿಣಿಯಾಗಿರುವ ಬಗ್ಗೆ ಅಭಿಮಾನಿಗಳಿಗೆ ಅದಿತಿ ಪ್ರಭುದೇವ ಗುಡ್ ನ್ಯೂಸ್ ಕೊಟ್ಟಿದ್ದರು. ಇದೀಗ ಚಂದನವನದ ಚೆಂದದ ತಾರೆ ಅದಿತಿ ಪ್ರಭುದೇವ ಅವರ ಸೀಮಂತ ಶಾಸ್ತ್ರ ನೆರವೇರಿಸಲಾಗಿದೆ. ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಅದಿತಿ ಪ್ರಭುದೇವ ಹಾಗೂ ಯಶಸ್ ದಂಪತಿಗೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: ‘2024ಕ್ಕೆ ನಾನು ಅಮ್ಮನಾಗುವೆ’ – ಫೋಟೋ ಸಮೇತ ತಾಯಿಯಾಗುವ ಖುಷಿ ಹಂಚಿಕೊಂಡ ನಟಿ ಅದಿತಿ ಪ್ರಭುದೇವ

ನಗುಮೊಗದ ಚೆಲುವೆ, ಚಂದನವನದ ಚೆಂದದ ತಾರೆ ಅದಿತಿ ಪ್ರಭುದೇವ ಅವರಿಗೆ ತಾಯಿಯಾಗುವ ಸಂಭ್ರಮ. ನಟಿ ಅದಿತಿ ಪ್ರಭುದೇವ ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಸ್ಯಾಂಡಲ್‌ವುಡ್‌ನ ಈ ಸುಂದರ ಮೊಗದ ಚೆಲುವೆಗೆ ಸೀಮಂತ ಶಾಸ್ತ್ರ ನೆರವೇರಿಸಲಾಗಿದೆ.

ಅದಿತಿ ಪ್ರಭುದೇವ ಅವರ ಸೀಮಂತ ಶಾಸ್ತ್ರಕ್ಕೆ ಅನೇಕ ಸೆಲೆಬ್ರಿಟಿಗಳು ಆಗಮಿಸಿ ಶುಭ ಕೋರಿದ್ದಾರೆ. ಅದಿತಿ ಪ್ರಭುದೇವ ಹಾಗೂ ಯಶಸ್ ಪಾಟ್ಲಾ ದಂಪತಿಗೆ ಸಿನಿಮಾ ಗಣ್ಯರು ಶುಭ ಹಾರೈಸಿದರು. ನಟ ಶರಣ್, ಸಂಗೀತ ನಿರ್ದೇಶಕ ಗುರುಕಿರಣ್ ದಂಪತಿ ಸೇರಿದಂತೆ ಅನೇಕರು ಸೀಮಂತ ಶಾಸ್ತ್ರದಲ್ಲಿ  ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆಯ ನಟಿಯಾಗಿ ಮೆರೆಯುತ್ತಿರುವಾಗಲೇ ಅದಿತಿ ಪ್ರಭುದೇವ ಅವರು ಮದುವೆ ಆದರು. 2022ರ ನವೆಂಬರ್‌ನಲ್ಲಿ ಉದ್ಯಮಿ ಯಶಸ್ ಜೊತೆ ಅವರ ವಿವಾಹ ನೆರವೇರಿತ್ತು. ಮದುವೆಯಾದ ಮೇಲೂ ನಾಯಕಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದರು. ಇದೀಗ ತಾಯಿ ಆಗುತ್ತಿರುವ ಸಂಭ್ರಮದಲ್ಲಿ ಅದಿತಿ ಪ್ರಭುದೇವ ಇದ್ದಾರೆ. ಸಿನಿಮಾ ಕೆಲಸಗಳಿಂದ ಸದ್ಯಕ್ಕೆ ಅಂತರ ಕಾಯ್ದಕೊಂಡಿದ್ದಾರೆ.

ಅದಿತಿ ಪ್ರಭುದೇವ ಅವರು ಮೂಲತಃ ದಾವಣಗೆರೆಯವರು. ಕಿರುತೆರೆಯಿಂದ ಬಣ್ಣದ ಬದುಕು ಆರಂಭಿಸಿದ ಅವರು ‘ಗುಂಡ್ಯಾನ್ ಹೆಂಡ್ತಿ’ ಸೀರಿಯಲ್ನಲ್ಲಿ ನಟಿಸಿರು. ಬಳಿಕ ‘ನಾಗ ಕನ್ನಿಕೆ’ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ಕಿತು. ಈ ಸಂದರ್ಭದಲ್ಲಿ ಅವರಿಗೆ ಸ್ಯಾಂಡಲ್ವುಡ್ಗೆ ಎಂಟ್ರಿ ಸಿಕ್ಕಿತು. ಅಜಯ್ ರಾವ್ ನಟನೆಯ ‘ಧೈರ್ಯಂ’ ಸಿನಿಮಾಗೆ ನಾಯಕಿಯಾಗಿ ಅದಿತಿ ಪ್ರಭುದೇವ ಅವರು ಚಂದನವನಕ್ಕೆ ಕಾಲಿಟ್ಟರು. ಆ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಅವರು ಅಭಿನಯಿಸಿದರು. ಬಜಾರ್, ಸಿಂಗ, ರಂಗನಾಯಕಿ, ಓಲ್ಡ್ ಮಾಂಕ್, ತೋತಾಪುರಿ ಮುಂತಾದ ಸಿನಿಮಾಗಳಲ್ಲಿ ನಟಿಸುವ ಮೂಲಕ ಅದಿತಿ ಪ್ರಭುದೇವ ಅವರು ಪ್ರಸಿದ್ಧಿ ಪಡೆದಿದ್ದಾರೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಬಿಡುಗಡೆಯಾದ ‘ಲವ್ ಯೂ ಅಭಿ’ ವೆಬ್ ಸರಣಿಯಲ್ಲೂ ಅವರು ಅಭಿನಯಿಸಿದ್ದಾರೆ.

Sulekha