ರಾವಣನಾಗಿ ಮಿಂಚಲು ರಾಕಿಂಗ್‌ ಸ್ಟಾರ್‌ ರೆಡಿ – ಸೆಟ್‌ನಲ್ಲಿ ರಾಕಿ ಬಾಯ್‌ ಹೊಸ ಲುಕ್

ರಾವಣನಾಗಿ ಮಿಂಚಲು ರಾಕಿಂಗ್‌ ಸ್ಟಾರ್‌ ರೆಡಿ – ಸೆಟ್‌ನಲ್ಲಿ ರಾಕಿ ಬಾಯ್‌ ಹೊಸ ಲುಕ್

ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅಭಿನಯದ ಬಹು ಕೋಟಿ ವೆಚ್ಚದ ಸಿನಿಮಾ ರಾಮಾಯಣ. ಈ‌ ಸಿನಿಮಾದಲ್ಲಿ ನಟನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ಯಶ್ ಭಾಗಿಯಾಗಿದ್ದಾರೆ. ಇತ್ತೀಚೆಗಷ್ಟೆ ನಟ ಯಶ್ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಇದೀಗ ಶೂಟಿಂಗ್‌ ಸೆಟ್‌ನಲ್ಲಿರುವ ಯಶ್‌ ಫೋಟೋ ವೈರಲ್‌ ಆಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ವರುಣನ ಆರ್ಭಟ – ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಧಾರಾಕಾರ ಮಳೆ ಸಾಧ್ಯತೆ

ಹೌದು, ರಾಮಾಯಣ ಸಿನಿಮಾದಲ್ಲಿ ಯಶ್ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಯಶ್ ಅವರು ಆಕ್ಷನ್ ದೃಶ್ಯವೊಂದರಲ್ಲಿ ಪಾಲ್ಗೊಂಡಿದ್ದು, ಹಾಲಿವುಡ್​ನ ಖ್ಯಾತ ಆಕ್ಷನ್ ನಿರ್ದೇಶಕ ಈ ಸಿನಿಮಾಕ್ಕೆ ಆಕ್ಷನ್ ನಿರ್ದೇಶಿಸುತ್ತಿದ್ದಾರೆ. ನಟ ಯಶ್, ರಾವಣನ ಪಾತ್ರಕ್ಕಾಗಿ ಭಿನ್ನ ಲುಕ್ ಮಾಡಿಕೊಂಡಿದ್ದಾರೆ. ಸಿನಿಮಾದ ಚಿತ್ರೀಕರಣದಲ್ಲಿ ಯಶ್ ಭಾಗಿ ಆಗಿದ್ದು, ಸಿನಿಮಾ ಸೆಟ್​ನಲ್ಲಿ ಯಶ್ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಚಿತ್ರಗಳು ಇದೀಗ ಬಹಿರಂಗವಾಗಿವೆ.

ಆಕ್ಷನ್ ಸೀನ್ ಒಂದಕ್ಕೂ ಮುನ್ನ, ಆಕ್ಷನ್ ನಿರ್ದೇಶಕರು ನೀಡುತ್ತಿರುವ ಸಲಹೆ, ಸೂಚನೆಗಳನ್ನು ಕೇಳುತ್ತಾ ನಿಂತಿದ್ದಾರೆ ನಟ ಯಶ್. ಸಿನಿಮಾಕ್ಕೆ ಕೆಲ ವಿದೇಶಿ ಆಕ್ಷನ್ ಕೊರಿಯೋಗ್ರಾಫರ್​ಗಳು ಆಕ್ಷನ್ ನಿರ್ದೇಶನ ಮಾಡುತ್ತಿದ್ದಾರೆ. ಹಾಲಿವುಡ್​ನ ಆಸ್ಕರ್ ವಿಜೇತ ಸಿನಿಮಾ ಮ್ಯಾಡ್​ಮ್ಯಾಕ್ಸ್​ನ ಸ್ಟಂಟ್ ನಿರ್ದೇಶಕ ಗೈ ನೋರಿಸ್ ಅವರು ಈ ಸಿನಿಮಾಕ್ಕೆ ಆಕ್ಷನ್ ಕೊರಿಯೋಗ್ರಫಿ ಮಾಡುತ್ತಿದ್ದು, ನಟ ಯಶ್ ಅವರು ಗೈ ನೋರಿಸ್ ಅವರ ಮಾರ್ಗದರ್ಶನದಲ್ಲಿ ಸ್ಟಂಟ್ ಮಾಡುತ್ತಿದ್ದಾರೆ.

ರಾಮಾಯಣ ಸಿನಿಮಾವು ಭಾರತದ ಅತಿದೊಡ್ಡ ಬಜೆಟ್​ನ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ರಣ್​ಬೀರ್ ಕಪೂರ್ ರಾಮನ ಪಾತ್ರದಲ್ಲಿ, ಸಾಯಿ ಪಲ್ಲವಿ ಸೀತಾದೇವಿಯ ಪಾತ್ರದಲ್ಲಿ, ನಟ ಯಶ್ ರಾವಣನ ಪಾತ್ರದಲ್ಲಿ ಕಾಜೊಲ್ ಅಗರ್ವಾಲ್ ಮಂಡೋದರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈಗ ಚಿತ್ರೀಕರಣವಾಗುತ್ತಿರುವ ಯಶ್ ಅವರ ಆಕ್ಷನ್ ದೃಶ್ಯಗಳನ್ನು ಗ್ರೀನ್ ಸ್ಕ್ರೀನ್ ಬಳಸಿ ಚಿತ್ರೀಕರಣ ಮಾಡಲಾಗುತ್ತಿದೆ. ಈ ಸಿನಿಮಾಕ್ಕೆ ಹಾಲಿವುಡ್​ನ ಬಲು ಜನಪ್ರಿಯ ವಿಎಫ್​ಎಕ್ಸ್​ ಸ್ಟುಡಿಯೋಗಳು ಕೆಲಸ ಮಾಡುತ್ತಿವೆ.

Shwetha M