ಉಪೇಂದ್ರ, ಪ್ರಿಯಾಂಕ ಮೊಬೈಲ್‌ ಹ್ಯಾಕ್‌ ಕೇಸ್!‌ – ಆರೋಪಿ ಅರೆಸ್ಟ್‌ ಆಗ್ತಿದ್ದಂತೆ ರಿವೀಲ್‌ ಆಯ್ತು ಶಾಕಿಂಗ್‌ ವಿಚಾರ!

ಉಪೇಂದ್ರ, ಪ್ರಿಯಾಂಕ ಮೊಬೈಲ್‌ ಹ್ಯಾಕ್‌ ಕೇಸ್!‌ – ಆರೋಪಿ ಅರೆಸ್ಟ್‌ ಆಗ್ತಿದ್ದಂತೆ ರಿವೀಲ್‌ ಆಯ್ತು ಶಾಕಿಂಗ್‌ ವಿಚಾರ!

ಸ್ಯಾಂಡಲ್‌ವುಡ್‌ ನಟ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಅವರ ಮೊಬೈಲ್‌ ಹ್ಯಾಕ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನ್ನ ಅರೆಸ್ಟ್‌ ಮಾಡಲಾಗಿದೆ. ಬಿಹಾರ ಮೂಲದ ಆರೋಪಿ ವಿಕಾಸ್ ಕುಮಾರ್ ಅರೆಸ್ಟ್‌ ಮಾಡಲಾಗಿದೆ.

ಇದನ್ನೂ ಓದಿ: RCBಗೆ ಯಶ್ ದಯಾಳ್ ಕನ್ಫ್ಯೂಷನ್ – ರಿಲೀಸ್ ಮಾಡಿದ್ರೂ ಕಷ್ಟ.. ಇದ್ರೂ ಕಷ್ಟ

ಸೆಪ್ಟೆಂಬರ್15  ಪ್ರಿಯಾಂಕ ಉಪೇಂದ್ರ ಅವರು ಆನ್‌ಲೈನ್‌ನಲ್ಲಿ ಕೆಲ ವಸ್ತುಗಳನ್ನು ಬುಕ್ ಮಾಡಿದ್ದರು. ಇದಾದ ನಂತರ ಪ್ರಿಯಾಂಕ ಅವರಿಗೆ ಮೊಬೈಲ್‌ಗೆ ಲಿಂಕ್ ಬಂದಿತ್ತು. OTP ಹೇಳುವಂತೆ ಸೈಬರ್ ಖದೀಮರು ಹೇಳಿದ್ದರು. ಪ್ರಿಯಾಂಕ ಉಪೇಂದ್ರ ಆ ಲಿಂಕ್‌ವನ್ನು ಕ್ಲಿಕ್‌ ಮಾಡಿದ್ದರು. ಆ ಕೂಡಲೇ ಪ್ರಿಯಾಂಕ ಅವರ ವಾಟ್ಸ್‌ಆಪ್‌ ಹ್ಯಾಕ್ ಮಾಡಿದ್ದಾರೆ. ಬಳಿಕ ಇದೇ ಲಿಂಕ್‌ ಅನ್ನ ಉಪೇಂದ್ರ ಅವರು ಕೂಡ ತಮ್ಮ ಫೋನ್‌ ನಲ್ಲಿ ಓಪನ್‌ ಮಾಡಿದ್ರು. ಈ ಬೆನ್ನಲ್ಲೇ ಪ್ರಿಯಾಂಕಾ ಕಾಂಟೆಕ್ಟ್‌ನಲ್ಲಿದ್ದವರಿಗೆ 55 ಸಾವಿರ ರೂ ಹಣ ಕಳಿಸುವಂತೆ ಮೇಸೆಜ್ ಮಾಡಿದ್ದಾರೆ ಖದೀಮರು. ಈ ವೇಳೆ ಮ್ಯಾನೇಜರ್ ಹಾಗೂ ಉಪೇಂದ್ರ ಮೊಬೈಲ್ ಕೂಡ ಹ್ಯಾಕ್‌ ಮಾಡಿದ್ದರು. ಹಣ ಅಗತ್ಯವಿದೆ ಎಂದು ಪ್ರಿಯಾಂಕ ವಾಟ್ಸ್‌ ಅಪ್‌ ನಿಂದ ಹಲವರಿಗೆ ಮೆಸೇಜ್ ಹಾಕಿ ಲಕ್ಷಾಂತರ ರೂಪಾಯಿ ಹಣ ದೋಚಿದ್ದರು. ಈ ವಿಚಾರ ಗೊತ್ತಾಗ್ತಿದ್ದಂತೆ  ಸದಾಶಿವನಗರ ಠಾಣೆಗೆ ಪ್ರಿಯಾಂಕ ಉಪೇಂದ್ರ ದೂರು ನೀಡಿದ್ದಾರೆ. ಪೊಲೀಸರು ತನಿಖೆ ವೇಳೆ ಬಿಹಾರದ ದಶರತಪುರದ ನಿವಾಸಿಗಳು ಅನ್ನೋದು ಗೊತ್ತಾಗಿತ್ತು. 20 ರಿಂದ 25 ವಯಸ್ಸಿನ ಯುವಕರು ಇದೇ ದಂದೆಯಲ್ಲಿ ನಿರತರಾಗಿರೋದು ತಿಳಿದು ಬಂದಿದೆ. ಬಿಹಾರಕ್ಕೆ ಹೋಗಿದ್ದ ಪೊಲೀಸರೇ ಶಾಕ್ ಆಗಿದ್ದಾರೆ.

ಊರಿನ 150 ಮಂದಿ ಯುವಕರು ಸೈಬರ್ ಅಪರಾಧದಲ್ಲೇ ನಿರತರಾಗಿರೋದು ವಿಚಾರಣೆ ವೇಳೆ ತಿಳಿದು ಬಂದಿದೆ. ಕೊನೆಗೆ ಪೊಲೀಸರು ಆರೋಪಿ ವಿಕಾಸ್ ಕುಮಾರ್ ಬಂಧಿಸಿ ಕರೆತಂದಿದ್ದಾರೆ .ಸದ್ಯ ಕಸ್ಟಡಿಗೆ ಆರೋಪಿ ವಿಕಾಸ್ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಕೇಂದ್ರ ವಿಭಾಗದ ಸೈಬರ್ ಹಾಗೂ ಸದಾಶಿವನಗರ ಪೊಲೀಸರಿಂದ ತನಿಖೆ ಮುಂದುವರಿದಿದೆ.

Shwetha M