ಟೊಮ್ಯಾಟೊ ತಿನ್ನುವುದನ್ನು ಕಡಿಮೆ ಮಾಡಿದ್ದೇನೆ ಎಂದ ಬೆನ್ನಲ್ಲೇ ಕ್ಷಮೆ ಕೇಳಿದ ನಟ ಸುನೀಲ್‌ ಶೆಟ್ಟಿ!

ಟೊಮ್ಯಾಟೊ ತಿನ್ನುವುದನ್ನು ಕಡಿಮೆ ಮಾಡಿದ್ದೇನೆ ಎಂದ ಬೆನ್ನಲ್ಲೇ ಕ್ಷಮೆ ಕೇಳಿದ ನಟ ಸುನೀಲ್‌ ಶೆಟ್ಟಿ!

ದೇಶದಾದ್ಯಂತ ಟೊಮ್ಯಾಟೊ ಬೆಲೆ ಗಗನಕ್ಕೇರಿದೆ. ಟೊಮ್ಯಾಟೊ ಬೆಲೆ ಏರಿಕೆಯಿಂದಾಗಿ ಬಡ, ಮಧ್ಯಮವರ್ಗಕ್ಕೆ ಮಾತ್ರದವಲ್ಲದೇ ಶ್ರೀಮಂತವರ್ಗಕ್ಕೂ ಇದರ ಬಿಸಿ ತಟ್ಟಿದೆ. ಅನಿಯಮಿತ ಹವಾಮಾನ ಮತ್ತು ಪೂರೈಕೆಯ ಕೊರತೆಯಿಂದಾಗಿ ಕಳೆದ ಕೆಲವು ವಾರಗಳಿಂದ ಟೊಮ್ಯಾಟೊ ಬೆಲೆ ಹೆಚ್ಚಳವಾಗುತ್ತಿದೆ. ಪ್ರತಿ ಕೆಜಿಗೆ 150 ರೂ.ಗಿಂತ ಹೆಚ್ಚಿದೆ. ಗಗನಕ್ಕೇರಿದ ಟೊಮ್ಯಾಟೊ ಬೆಲೆ ಕುರಿತಾಗಿ ಈ ಹಿಂದೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಹೇಳಿಕೆಯೊಂದನ್ನು ನೀಡಿದ್ದರು. ಇದೀಗ ಈ ಹೇಳಿಕೆಗೆ ಸುನೀಲ್‌ ಶೆಟ್ಟಿ ಕ್ಷಮೆಯಾಚಿಸಿದ್ದಾರೆ.

ಇದನ್ನೂ ಓದಿ: ಟೊಮ್ಯಾಟೊಗೆ ಈಗ ಚಿನ್ನದ ಬೆಲೆ – ಕೆಂಪು ರಾಜನಿಂದಲೇ ಮಗಳಿಗೆ ತುಲಾಭಾರ ಮಾಡಿಸಿದ ಪೋಷಕರು!

ನಟ ಸುನೀಲ್‌ ಶೆಟ್ಟಿ ಖಾಸಗಿ ಮಾದ್ಯಮವೊಂದರ ಸಂದರ್ಶನದ ವೇಳೆ ಟೊಮ್ಯಾಟೊ ಬೆಲೆ ಏರಿಕೆ ವಿಚಾರವಾಗಿ ಮಾತನಾಡಿದ್ದರು. ನನ್ನ ಮನೆಯಲ್ಲಿ ಯಾವಾಗಲೂ ನಾವು ತಾಜಾ ತರಕಾರಿಯನ್ನೇ ತಂದು ಬಳಸುತ್ತೇವೆ. ದಿನಕ್ಕೆ ಎರಡ್ಮೂರು ರೀತಿಯ ತರಕಾರಿಗಳನ್ನು ನನ್ನ ಪತ್ನಿ ಖರೀದಿಸುತ್ತಾರೆ. ಅದರಲ್ಲೂ ಇತ್ತೀಚೆಗೆ ಟೊಮ್ಯಾಟೊ ದರ ಗಗನಕ್ಕೇರಿದೆ. ಹಾಗಾಗಿ ನಾನು ಟೊಮ್ಯಾಟೊ ತಿನ್ನುವುದನ್ನು ಕಡಿಮೆ ಮಾಡಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ಸುನೀಲ್‌ ಶೆಟ್ಟಿ ಹೇಳಿಕೆ ಬೆನ್ನಲ್ಲೇ ಅವರ ಮಾತಿಗೆ ವಿರೋಧ ವ್ಯಕ್ತವಾಗಿದೆ. ಈ ಹೇಳಿಕೆಯನ್ನು ಇಟ್ಟುಕೊಂಡು ಟ್ರೋಲ್ ಕೂಡ ಮಾಡಿದ್ದರು. ಸುನೀಲ್ ಶೆಟ್ಟಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಟೊಮ್ಯಾಟೊ ಬೆಲೆಯಿಂದ ರೈತರಿಗೆ ಲಾಭವಾಗಿದೆ. ಇವರು ರೈತ ವಿರೋಧಿ. ರೈತರಿಗೆ ಕೊಂಚ ಸಹಾಯವಾಗುತ್ತದೆ ಎಂದರೆ, ಇವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಅನೇಕರು ಟೀಕಿಸಿದ್ದರು. ಈ ಕುರಿತು ಸ್ವತ: ಸುನೀಲ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.

ನಾನು ಕೂಡ ರೈತ ಕುಟುಂಬದಿಂದ ಬಂದವನು. ರೈತನ ಕಷ್ಟ ನಷ್ಟಗಳು ನನಗೆ ಗೊತ್ತಿದೆ. ನಾನು ರೈತ ವಿರೋಧಿ ಮಾತುಗಳನ್ನು ಆಡಿಲ್ಲ. ನನಗೂ ರೈತನ ಬಗ್ಗೆ ಕಾಳಜಿ ಇದೆ. ನನ್ನ ಮಾತುಗಳಿಂದ ಬೇಸರವಾಗಿದ್ದರೆ ಕ್ಷಮೆ ಇರಲಿ ಎಂದು ಅವರು ಹೇಳಿಕೊಂಡಿದ್ದಾರೆ.

suddiyaana