ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಕಿಚ್ಚ ಸುದೀಪ್ ಗೆ ಪತ್ರ – ಲೆಟರ್ ನಲ್ಲಿ ಬರೆದಿರೋದೇನು?

ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಕಿಚ್ಚ ಸುದೀಪ್ ಗೆ ಪತ್ರ – ಲೆಟರ್ ನಲ್ಲಿ ಬರೆದಿರೋದೇನು?

ರಾಜ್ಯ ರಾಜಕೀಯದಲ್ಲಿ ಈಗ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಹೆಸರು ಭಾರೀ ಸಂಚಲನ ಮೂಡಿಸಿದೆ. ಬಾದ್ ಶಾ ಸುದೀಪ್ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಇವತ್ತು ಸಿಎಂ ಬೊಮ್ಮಾಯಿ ಪ್ರೆಸ್ ಮೀಟ್ ಕರೆದಿರೋದು ಕುತೂಹಲಕ್ಕೆ ಕಾರಣವಾಗಿದೆ. ಇದರ ನಡುವೆ ಕಿಚ್ಚ ಸುದೀಪ್ (Kichcha Sudeep) ಅವರಿಗೆ ಎರಡು ಬೆದರಿಕೆ ಪತ್ರಗಳು ಬಂದಿವೆ.

ಪತ್ರದಲ್ಲಿ ಕಿಚ್ಚ ಸುದೀಪ್ ಅವರ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ. ಈ ಸಂಬಂಧ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಪತ್ರ ಕಳುಹಿಸಿದ್ದು ಯಾರು ಎನ್ನುವ ಹುಡುಕಾಟ ನಡೆಯುತ್ತಿದೆ. ಸುದೀಪ್ ಅವರ ಮ್ಯಾನೇಜರ್ ಜಾಕ್ ಮಂಜುಗೆ ಈ ಪತ್ರ ಸಿಕ್ಕಿದೆ ಎನ್ನಲಾಗಿದೆ. ಈ ಪತ್ರದಲ್ಲಿ ಸುದೀಪ್ ಬಗ್ಗೆ ಕೆಟ್ಟ ಪದಗಳ ಬಳಕೆ ಆಗಿದೆ. ಸುದೀಪ್ ಅವರ ಖಾಸಗಿ ವಿಡಿಯೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಲಾಗಿದೆ. ಇದರಿಂದ ಸುದೀಪ್​ಗೆ ಮಾನಸಿಕ ಕಿರುಕುಳ ಆಗಿದೆ. ನಟನ ಘನತೆಗೆ ಧಕ್ಕೆ ತರಲು ಮಾಡಿರೋ ಸಂಚು ಎಂದು ಮಂಜು ಅವರು ದೂರಿದ್ದಾರೆ.

ಇದನ್ನೂ ಓದಿ : ಬಿಜೆಪಿ ಸೇರ್ಪಡೆಯಾಗಲಿದ್ದಾರಾ ಸುದೀಪ್? – ಕುತೂಹಲ ಮೂಡಿಸಿದ ಕಿಚ್ಚನ ನಡೆ!

ಬೆದರಿಕೆ ಪತ್ರ ಪ್ರಕರಣ ಸಂಬಂಧ ಪುಟ್ಟೇನಹಳ್ಳಿ ಪೊಲೀಸರು ಐಪಿಸಿ ಸೆಕ್ಷನ್ 506, ಸೆಕ್ಷನ್ 504 ಅಡಿಯಲ್ಲಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಈ ಪತ್ರ ಎಲ್ಲಿಂದ ಬಂತು, ಯಾರು ಕಳುಹಿಸಿದ್ದು ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಸುದೀಪ್ ಬಿಜೆಪಿ ಸೇರ್ಪಡೆಯಾಗುತ್ತಾರೋ ಅಥವಾ ಸ್ಟಾರ್ ಪ್ರಚಾರಕರಾಗುತ್ತಾರೋ ಅನ್ನುವ ಗೊಂದಲ ಇದೆ. ನಟ ಕಿಚ್ಚ ಸುದೀಪ್ (Sudeep) ಅವರು ಈ ವರ್ಷ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಲು ರೆಡಿ ಆಗಿದ್ದಾರೆ. ಸ್ಟಾರ್ ಪ್ರಚಾರಕನಾಗಿ ಕಮಲ ಪಾಳಯದ ಪರ ಅವರು ಕ್ಯಾಂಪೇನ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ವಿವಿಧ ಕ್ಷೇತ್ರಗಳಿಗೆ ತೆರಳಿ ಅವರು ಮತ ಕೇಳಲಿದ್ದಾರೆ. ಹೀಗಿರುವಾಗಲೇ ಸುದೀಪ್​ಗೆ ಬೆದರಿಕೆ ಪತ್ರ ಬಂದಿದ್ದು, ಕೇಸ್ ಸಿಸಿಬಿಗೆ ವರ್ಗಾವಣೆ ಆಗಿದೆ. ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ (Pratap Reddy) ಆದೇಶ ಹೊರಡಿಸಿದ್ದಾರೆ. ಪತ್ರಬರೆದ ವರಿಗಾಗಿ ತಲಾಶ್ ನಡೆಸಲಾಗುತ್ತಿದೆ.

suddiyaana