ದೊಡ್ಮನೆ ದೊರೆ ಶಿವಣ್ಣಗೆ ಕ್ಯಾನ್ಸರ್ – ಅಭಿಮಾನಿಗಳಿಗೆ ಸತ್ಯ ಗೊತ್ತಾಗ್ಲಿ ಎಂದಿದ್ದೇಕೆ?
ಅಮೆರಿಕದಲ್ಲಿ ಚಿಕಿತ್ಸೆ.. ಅಪಾಯ ಕಾದಿದ್ಯಾ?
ಸ್ಯಾಂಡಲ್ವುಡ್ನ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್. ಕನ್ನಡ ಚಿತ್ರರಂಗದ ಎವರ್ಗ್ರೀನ್ ಯಂಗ್ ಆ್ಯಂಡ್ ಎನೆರ್ಜಿಟಿಕ್ ಹೀರೋ. ಅರವತ್ತು ಪ್ಲಸ್ ವಯಸ್ಸಾಗಿದ್ರೂ ಶಿವಣ್ಣ ಅವರ ಎನರ್ಜಿಗೆ ಮ್ಯಾಚ್ ಮಾಡೋಕೆ ಯಂಗ್ ಹೀರೋಗಳಿಗೂ ಸಾಧ್ಯ ಇಲ್ಲ. ಅವ್ರ ಡ್ಯಾನ್ಸ್, ಡೈಲಾಗ್, ಮಾಸ್ ಲುಕ್ ನಲ್ಲಿ ಶಿವಣ್ಣಗೆ ಶಿವಣ್ಣನೇ ಸರಿ ಸಾಟಿ. ಸಾಲು ಸಾಲು ಸಿನಿಮಾಗಳು, ಕಿರುತೆರೆ ಶೋಗಳು, ಸಿನಿಮಾ ಇವೆಂಟ್ಸ್ ಹೀಗೆ ಸದಾ ಬ್ಯುಸಿ ಆಗೇ ಇರುವ ಮೇರು ನಟ. ಅದೆಲ್ಲಕ್ಕಿಂತ ಹೆಚ್ಚಾಗಿ ಅಣ್ಣಾವ್ರು ಬಾಳಿ ಬದುಕಿದ ದೊಡ್ಮನೆಯ ಮಹಾರಾಜ. ಒಂದ್ಕಡೆ ರಾಘಣ್ಣನಿಗೆ ಅನಾರೋಗ್ಯ. ಮತ್ತೊಂದೆಡೆ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿಕೆ. ಇಂಥಾ ಟೈಮಲ್ಲಿ ಚಂದನವನಕ್ಕೆ ಒಂದು ಭರವಸೆಯ ನೆರಳಾಗಿ ಕಾಯ್ತಿರೋದೇ ಶಿವಣ್ಣ. ಆದ್ರೆ ಆ ಭರವಸೆ ನುಚ್ಚು ನೂರಾಗುವಂಥ ಆಘಾತಕಾಗಿ ಸುದ್ದಿಯೊಂದು ಹೊರಬಿದ್ದಿದೆ. ದೊಡ್ಮನೆಗೆ ಮತ್ತೊಂದು ಬರಸಿಡಿಲು ಬಡಿದಂತಾಗಿದ್ದಾರೆ. ನಮ್ಮ ನಿಮ್ಮೆಲ್ಲರ ನೆಚ್ಚಿನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೂತ್ರಕೋಶ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಅಷ್ಟಕ್ಕೂ ಮೂತ್ರಕೋಶದ ಕ್ಯಾನ್ಸರ್ ಲಕ್ಷಣಗಳೇನು? ಆರೋಗ್ಯ ಸಮಸ್ಯೆ ಬಗ್ಗೆ ಶಿವಣ್ಣ ಹೇಳಿದ್ದೇನು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಅಪ್ಪ ಗ್ಯಾಸ್ ಸಪ್ಲೈ ಮಾಡ್ತಿದ್ದ ಏರಿಯಾದಲ್ಲೇ ಬಂಗಲೆ – ರಿಂಕು ಸಿಂಗ್ ಐಷಾರಾಮಿ ಮನೆ ಹೇಗಿದೆ?
ಶಿವಣ್ಣಗೆ ಮೂತ್ರಕೋಶ ಕ್ಯಾನ್ಸರ್!
ಶಿವಣ್ಣ ಅಂದ್ರೇನೇ ಎನರ್ಜಿ ಬೂಸ್ಟರ್. ಎಲ್ಲರ ಜೊತೆಗೂ ಮಿಂಗಲ್ ಆಗಿ ನಗುನಗುತ್ತಾ ಜೋಶ್ನಲ್ಲೇ ಇರ್ತಾರೆ. ಆದ್ರೆ ಇಂಥಾ ಶಿವಣ್ಣನ ಒಳಗೊಂದು ಗಂಭೀರ ಆರೋಗ್ಯ ಸಮಸ್ಯೆ ಇದೆ ಅನ್ನೋದು ಕರ್ನಾಟಕದ ಜನರಿಗೆ ಗೊತ್ತೇ ಇರಲಿಲ್ಲ. ಅಸಲಿಗೆ ಶಿವಣ್ಣಗೆ ಕಾಡ್ತಿರೋದು ಮೂತ್ರಕೋಶ ಕ್ಯಾನ್ಸರ್. ತಮಗಿರೋ ಸಮಸ್ಯೆ ಬಗ್ಗೆ ಸ್ವತಃ ಶಿವಣ್ಣ ಅವರೇ ಬಹಿರಂಗ ಪಡಿಸಿದ್ದಾರೆ. ಅದ್ರಲ್ಲೂ ಅಭಿಮಾನಿಗಳಿಗೆ ಈ ವಿಚಾರ ಗೊತ್ತಿರಬೇಕು ಎಂದಿದ್ದು ಅದಕ್ಕೆ ಕ್ಲಾರಿಟಿ ಕೂಡ ಕೊಟ್ಟಿದ್ದಾರೆ. ನನ್ನ ಆರೋಗ್ಯ ಸಮಸ್ಯೆ ಬಗ್ಗೆ ಇಂಡಸ್ಟ್ರಿಯಲ್ಲಿ ಎಲ್ಲರಿಗೂ ಗೊತ್ತು. ಸುದೀಪ್, ಯಶ್, ರಕ್ಷಿತ್ ಎಲ್ಲರಿಗೂ ಇದು ಗೊತ್ತು. ಅದ್ರಲ್ಲೂ ಈ ವಿಚಾರ ಜನರಿಗೆ ಗೊತ್ತಾಗಬೇಕು. ಅಭಿಮಾನಿಗಳು ಫೋಟೋಗೇನಾದ್ರೂ ಬಂದರೆ ಅವರನ್ನು ತಡೆದ್ರೆ ಯಾಕಪ್ಪಾ ಶಿವಣ್ಣ ತಡೆದರು ಅನಿಸುತ್ತದೆ. ಹಾಗಾಗಿ ಅವರಿಗೆ ಗೊತ್ತಾಗಬೇಕು, ಇನ್ಫೆಕ್ಷನ್ ಆಗಬಹುದು. ಸಮಸ್ಯೆ ಆಗಬಹುದು ಎಂದು ಜನಕ್ಕೆ ಅರ್ಥವಾಗುತ್ತೆ ಎಂದಿದ್ದಾರೆ. ಅಲ್ದೇ ಮೊದ್ಲೆಲ್ಲಾ ಇಷ್ಟು ಬ್ಯುಸಿಯಾಗಿದ್ದ ನಾನು ಚಿಕಿತ್ಸೆಗಾಗಿ ಗ್ಯಾಪ್ ತೆಗೆದುಕೊಂಡಿದ್ದೇನೆ. ಸಿನಿಮಾ ಶೂಟಿಂಗ್ ಸ್ವಲ್ಪ ಪೋಸ್ಟ್ಪೋನ್ ಆಗಿದೆ. ರಾಮ್ ಚರಣ್ ಸಿನಿಮಾ ಇತ್ತು, ಬಂದ ಮೇಲೆ ಡೇಟ್ ಕೊಡುತ್ತೇನೆ, ಅಲ್ಲಿವರೆಗೆ ಆಗಲ್ಲ ಎಂದು ಅವರಿಗೂ ಹೇಳಿದ್ದೇನೆ ಎಂದಿದ್ದಾರೆ. ಅಸಲಿಗೆ ಶಿವಣ್ಣ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಲಿದ್ದಾರೆ. ಹೀಗಾಗಿ ಒಂದೆರಡು ತಿಂಗಳು ಎಲ್ಲದರಿಂದಲೂ ಬ್ರೇಕ್ ತೆಗೆದುಕೊಳ್ಳೋಕೆ ಮುಂದಾಗಿದ್ದಾರೆ. ಇನ್ನು ಈ ಮೂತ್ರಕೋಶದ ಕ್ಯಾನ್ಸರ್ ಬಗ್ಗೆ ನೋಡೋದಾದ್ರೆ, ಮೂತ್ರಕೋಶದ ಒಳಗೆ ಅಸಹಜ ಕೋಶಗಳು ಬೆಳೆದು ಕ್ರಮೇಣ ಇವುಗಳು ಕ್ಯಾನ್ಸರ್ಗಳಾಗಿ ಪರಿವರ್ತನೆಗೊಳ್ಳುತ್ತದೆ. ಮೂತ್ರಕೋಶಗಳಲ್ಲಿ ಗಡ್ಡೆಗಳ ರೀತಿಯಲ್ಲಿ ಕ್ಯಾನ್ಸರ್ ಬೆಳೆಯುತ್ತಾ ಹೋಗುತ್ತದೆ. ಮೂತ್ರಕೋಶದ ಕ್ಯಾನ್ಸರ್ಗೆ ಒಳಗಾದ ವ್ಯಕ್ತಿ ಬಹುಬೇಹ ತೂಕವನ್ನ ಕಳ್ಕೊಳ್ತಾರೆ. ಮೂಳೆಗಳಲ್ಲಿ ನೋವು ಕಾಣಿಸಿಕೊಳ್ಳೋಕೆ ಆರಂಭಿಸುತ್ತೆ. ಮೂತ್ರಕೋಶದ ಕ್ಯಾನ್ಸರನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿದಲ್ಲಿ ಅಪಾಯದಿಂದ ಪಾರಾಗಬಹುದು. ಮೂತ್ರ ವಿಸರ್ಜನೆಯ ಸಂದರ್ಭದಲ್ಲಿ ನಿಮಗೆ ಸೊಂಟದ ಭಾಗದಲ್ಲಿ ವಿಪರೀತವಾದ ನೋವು ಕಾಣಿಸಿಕೊಳ್ಳಲು ಆರಂಭಿಸಿದರೆ ನೀವು ಕೂಡಲೇ ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತೆ. ಕಾಯಿಲೆಯು ಯಾವ ಹಂತದಲ್ಲಿ ಇದೆ ಅನ್ನೋದ್ರ ಮೇಲೆ ವೈದ್ಯರು ಚಿಕಿತ್ಸೆ ನೀಡಲು ಪ್ರಾರಂಭ ಮಾಡ್ತಾರೆ.
ಸದ್ಯ ಶಿವಣ್ಣ ತಮ್ಮ ಆರೋಗ್ಯದ ಜೊತೆ ಜೊತೆಗೆ ಇಂಡಸ್ಟ್ರಿಯಲ್ಲೂ ಬ್ಯುಸಿ ಇದ್ದಾರೆ. ಶಿವಣ್ಣ ಭೈರತಿ ರಣಗಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಮಫ್ತಿ ಸಿನಿಮಾದ ಪ್ರೀಕ್ವೆಲ್. ಮಫ್ತಿ ಸಿನಿಮಾದಲ್ಲಿ ಶಿವಣ್ಣ ಹಾಗೂ ಮುರುಳಿ ನಟಿಸಿದ್ದರು. ಈಗ ಈ ಸಿನಿಮಾದಲ್ಲಿ ಶಿವಣ್ಣ ಮತ್ತೆ ಭೈರತಿ ರಣಗಲ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೆ ನರ್ತನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚೆಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಸಿನಿಮಾ ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಮತ್ತೊಮ್ಮೆ ಶಿವಣ್ಣನನ್ನ ಮಾಸ್ ಲುಕ್ನಲ್ಲಿ ನೋಡೋಕೆ ಫ್ಯಾನ್ಸ್ ಕಾಯ್ತಿದ್ದಾರೆ. ಇದೇ ತಿಂಗಳ 15ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಒಟ್ನಲ್ಲಿ ಶಿವಣ್ಣ ಅಂದ್ರೆ ಕನ್ನಡ ಇಂಡಸ್ಟ್ರಿಗೆ ಆಸ್ತಿ ಇದ್ದಂತೆ. ಆದಷ್ಟು ಬೇಗ ಗುಣಮುಖರಾಗಲಿ ಅನ್ನೋದೇ ಅಭಿಮಾನಿಗಳ ಆಶಯ ಕೂಡ.