‘ಸಂಪತ್ ಸಾವಿನ ಬಗ್ಗೆ ಗಾಳಿ ಸುದ್ದಿ ಬೇಡ’ – ಗೆಳೆಯನ ಸಾವಿನ ರಹಸ್ಯ ಬಿಚ್ಚಿಟ್ಟ ನಟ ರಾಜೇಶ್ ಧ್ರುವ

‘ಸಂಪತ್ ಸಾವಿನ ಬಗ್ಗೆ ಗಾಳಿ ಸುದ್ದಿ ಬೇಡ’ – ಗೆಳೆಯನ ಸಾವಿನ ರಹಸ್ಯ ಬಿಚ್ಚಿಟ್ಟ ನಟ ರಾಜೇಶ್ ಧ್ರುವ

ಅವಕಾಶ ಸಿಗಲಿಲ್ಲ ಎಂದು ಕೆಲವರು, ಏನೋ ಮಾಡಲು ಹೋಗಿ ಇನ್ನೇನೋ ಆಗಿದೆ ಎಂದು ಇನ್ನು ಕೆಲವರು. ಆದರೆ, ಒಬ್ಬ ಪ್ರತಿಭಾವಂತ ನಟನ ಜೀವ ಉಳಿಯಲಿಲ್ಲ ಅನ್ನೋದು ಮಾತ್ರವೇ ಕಟುಸತ್ಯ. ಹೌದು. ಕಿರುತೆರೆಯಲ್ಲಿ ದಾಖಲೆ ಬರೆದ ಅಗ್ನಿಸಾಕ್ಷಿ ಸೀರಿಯಲ್ ಸನ್ನಿಧಿಯ ಅಣ್ಣನ ಪಾತ್ರದಲ್ಲಿ ಮಿಂಚಿದ್ದ ಸಂಪತ್, ನಂತರ ಕೆಲ ಸೀರಿಯಲ್‌ಗಳಲ್ಲೂ ಮಿಂಚಿದ್ದರು. ನಟ ರಾಜೇಶ್ ಧ್ರುವ ಜೊತೆ ‘ಶ್ರೀ ಬಾಲಾಜಿ ಸ್ಟುಡಿಯೋ’ ಸೇರಿದಂತೆ ಒಂದಿಷ್ಟು ಸಿನಿಮಾಗಳಲ್ಲೂ ನಟಿಸಿದ್ದರು. ಆದರೆ, ಅದೇನಾಗಿತ್ತೋ.. ಸ್ನೇಹಿತರೆಲ್ಲರಿಗೂ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಸಂಪತ್ ಜಯರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ನಿಜಕ್ಕೂ ಆಘಾತ ತಂದಿತ್ತು.

ಇದನ್ನೂ ಓದಿ: ಮರೆಯಾಯ್ತು ಸೀರಿಯಲ್ ಜಗತ್ತಿನ ‘ಸಂಪತ್ತು’ – ಸಂಪತ್ ಜಯರಾಮ್ ಆತ್ಮಹತ್ಯೆಗೆ ಕಾರಣವೇನು?

ಸಂಪತ್ ಜಯರಾಮ್, ಸಾವಿನ ಬೆನ್ನಲ್ಲೇ ಸಾಕಷ್ಟು ಅಂತೆ ಕಂತೆ ಗಾಸಿಪ್‌ಗಳು ಶುರುವಾದವು. ಸಂಪತ್ ಸಾವಿನ ನೆಗೆಟಿವ್ ಸುದ್ದಿಗಳಿಗೆ ನಟ ರಾಜೇಶ್ ಧ್ರುವ ಸ್ಪಷ್ಟನೆ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಶೇರ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಇದರ ಜೊತೆಗೆ ಅಗಲಿದ ಗೆಳೆಯನ ಬಗ್ಗೆ ಗಾಳಿ ಸುದ್ದಿ ಹಬ್ಬಿಸಬೇಡಿ ಅಂತಾನು ಮನವಿ ಮಾಡಿಕೊಂಡಿದ್ದಾರೆ.

‘ನಿನ್ನೆ ರಾತ್ರಿ 2 ಗಂಟೆಗೆ ರವಿ ಅವರಿಂದ ನನಗೆ ಕರೆ ಬರುತ್ತೆ. ನಾನು ಕೂಡ ನಿದ್ರೆಯಲ್ಲಿದ್ದೆ. ರಿಂಗ್ ಆಗಿದಕ್ಕೆ ಪಿಕ್ ಮಾಡಿ ಮಾತನಾಡಿದೆ. ಸಂಪತ್‌ಗೆ ತುಂಬಾ ಸೀರಿಯಸ್ ಅಂತ ಹೇಳಿದರು ಎದ್ದೋ ಬಿದ್ನೋ ಅಂತ ಓಡಿ ಹೋದೆ. ಅಷ್ಟರಲ್ಲಿ ಸಂಪತ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಯಾಕೆ ಸಂಪತ್ ಈ ರೀತಿ ಮಾಡಿಕೊಂಡರು ಅಂತ ವಿಚಾರಿಸಿದಾಗ ಅಲ್ಲಿ ಬಂದಂತ ಕಾಮನ್ ಉತ್ತರ, ಇತ್ತೀಚಿಗೆ ಮದುವೆ ಮಾಡಿಕೊಂಡಿದ್ದ, ಒಂದು ವರ್ಷ ಕೂಡ ಆಗಿರಲಿಲ್ಲ, ಪತ್ನಿ ಚೈತನ್ಯ 5 ತಿಂಗಳ ಗರ್ಭಿಣಿ. 11 ಅಥವಾ 12 ವರ್ಷಗಳ ಕಾಲ ಪ್ರೀತಿಸಿ ಇಬ್ಬರೂ ಮನೆಯಲ್ಲಿ ಒಪ್ಪಿಸಿ, ಇಂಟರ್ ಕಾಸ್ಟ್ ಮದುವೆ ಮಾಡಿಕೊಂಡಿದ್ದರು. ತುಂಬಾ ಚೆನ್ನಾಗಿ ಜೀವನ ಲೀಡ್ ಮಾಡುತ್ತಿದ್ದರು. ಅವರಿಬ್ಬರ ಜೀವನದಲ್ಲಿ ಒಂದು ಹುಳುಕು ಇರಲಿಲ್ಲ. ಅವರ ಮದುವೆ ಪ್ರೀ-ವೆಡ್ಡಿಂಗ್ ಶೂಟ್‌ ನಾನೇ ಮಾಡಿಕೊಟ್ಟಿದ್ದು. ಅವರ ಮದುವೆ ಸಂಭ್ರಮದಲ್ಲಿ ಭಾಗಿಯಾಗಿರುವೆ. ಅವರ ಲವ್ ಸ್ಟೋರಿ ಪ್ರತಿಯೊಂದು ನನಗೆ ಗೊತ್ತು ಎಂದು ರಾಜೇಶ್ ಮಾತನಾಡಿದ್ದಾರೆ. ಸಂಪತ್ ಹೇಗೆ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತು ಅಷ್ಟು ಸಿಂಪಲ್ ವ್ಯಕ್ತಿ. ಆತ್ಮಹತ್ಯೆ ಮಾಡಿಕೊಳ್ಳುವ ವೀಕ್ ಮೈಂಡ್ ಹುಡುಗ ಅಲ್ಲ. ಏಕೆಂದರೆ ಸಂಪತ್ ಅನೇಕರಿಗೆ ತಿದ್ದಿ ಬುದ್ಧಿ ಹೇಳಿದ್ದಾರೆ. ಚಾನ್ಸ್ ಇರಲಿಲ್ಲ ನಿಜ ಆದರೆ ನಮ್ಮ ತಂಡದಲ್ಲಿ ನಮಗೆ ನಾವೇ ಚಾನ್ಸ್ ಸೃಷ್ಠಿ ಮಾಡಿಕೊಳ್ಳುತ್ತಿದ್ವಿ. ಸ್ವಲ್ಪ ವರ್ಷದಲ್ಲಿ ಒಂದೊಳ್ಳೆ ನಟ ಅಂತ ಹೆಸರು ಮಾಡುವ ಸಾಮರ್ಥ್ಯ ಅವನಲ್ಲಿ ಇತ್ತು. ‘ಅಗ್ನಿಸಾಕ್ಷಿ’ ಧಾರಾವಾಹಿ ನೋಡಿ ಅನೇಕರು ಆತನ ನಟನೆ ಮೆಚ್ಚಿಕೊಂಡಿದ್ದರು. ಸಂಪತ್ ಎಂದಿಗೂ ಸೋಲು ಒಪ್ಪಿಕೊಳ್ಳುತ್ತಿರಲಿಲ್ಲ ತುಂಬಾ ಪ್ರಯತ್ನ ಮಾಡುತ್ತಿದ್ದರು. ಸಂಸಾರದಲ್ಲಿ ಸಣ್ಣ ಪುಟ್ಟ ಮಾತುಕತೆ ಅಂತಾ ಬಂದಾಗ ಹುಡುಗಾಟ ಮಾಡಿಕೊಳ್ಳಲು ಹೋಗಿ ಈ ರೀತಿ ಪರಿಣಾಮ ಬೀರಿದೆ. ದಯವಿಟ್ಟು ಕೆಟ್ಟ ಗಾಸಿಪ್ ಮಾಡಬೇಡಿ. ಗಂಡ-ಹೆಂಡತಿ ನಡುವೆ ಆದ ಚಿಕ್ಕ ಜಗಳಕ್ಕೆ ನಾನು ಸತ್ತು ಹೋಗುತ್ತೀನಿ ಹಾಗೆ ಹೀಗೆ ಎಂದು ಹೆದರಿಸಿದ್ದಾನೆ ಆಗ ಕುತ್ತಿಗೆ ಲಾಕ್ ಆಗಿದೆ. ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಹೀಗೆ ಮಾಡಿರೋದು ಅಲ್ಲ, ಹೆದರಿಸಲು ಹೋಗಿ ಅಚಾನಕ್ ಆಗಿ ಹೀಗೆ ಎಂದು ನಟ ರಾಜೇಶ್ ಧ್ರುವ ಸ್ಪಷ್ಟನೆ ನೀಡಿದ್ದಾರೆ.

suddiyaana