ಅಣ್ಣಯ್ಯ ಧಾರಾವಾಹಿಗೆ ಜಿಮ್ ಸೀನ ಪಾತ್ರಧಾರಿ ಗುಡ್ ಬೈ – ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಡ್ತಾರಾ ಸುಷ್ಮಿತ್ ಜೈನ್

ಅಣ್ಣಯ್ಯ ಧಾರಾವಾಹಿಗೆ ಜಿಮ್ ಸೀನ ಪಾತ್ರಧಾರಿ ಗುಡ್ ಬೈ – ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಡ್ತಾರಾ ಸುಷ್ಮಿತ್ ಜೈನ್

ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಜಿಮ್ ಸೀನ ಪಾತ್ರ ನೋಡೋದೇ ವೀಕ್ಷಕರಿಗೆ ಖುಷಿ. ಪಿಂಕಿ ಬೇಬಿ ಹಿಂದೆ ಸುತ್ತಿ, ಗುಂಡಮ್ಮನ ಮದುವೆಯಾಗಿ ತನ್ನ ಪಾತ್ರಕ್ಕೆ ನ್ಯಾಯ ಕೊಟ್ಟಿರುವ ಜಿಮ್ ಸೀನ ವೀಕ್ಷಕರಿಗೆ ಇಷ್ಟವಾಗಿರುವ ಪಾತ್ರ. ಇದೀಗ ಜಿಮ್ ಸೀನನ ಪಾತ್ರದಿಂದ ಸುಷ್ಮಿತ್ ಜೈನ್ ಹೊರಬಂದಿದ್ದಾರೆ. ಜಿಮ್ ಸೀನ ಪಾತ್ರಕ್ಕೆ ಹೊಸ ನಟನ ಎಂಟ್ರಿಯಾಗಿದೆ.

ಇದನ್ನೂ ಓದಿ:ಬ್ರಹ್ಮಗಂಟು ಧಾರಾವಾಹಿ ಅಂತ್ಯ – ಕಲಾವಿದರು ಭಾವುಕ.. ದೀಪಾ ವಿದಾಯ ಹೇಳಿದ್ದು ಹೇಗೆ?

ಅಣ್ಣಯ್ಯ ಧಾರಾವಾಹಿಯ ಜಿಮ್ ಸೀನಾ ಪಾತ್ರಧಾರಿ ಸುಷ್ಮಿತ್ ಜೈನ್ ಧಾರಾವಾಹಿಯಿಂದ ಹೊರ ಬಂದ್ದಿದ್ದಾರೆ. ಇದೀಗ ಜಿಮ್ ಸೀನನ  ಪಾತ್ರಕ್ಕೆ ರಂಗಭೂಮಿ ಕಲಾವಿದರೊಬ್ಬರು ಬಣ್ಣ ಹಚ್ಚಿದ್ದಾರೆ. ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಶಿವು ರೀತಿಯೇ ಜಿಮ್ ಸೀನ ಮತ್ತು ಗುಂಡಮ್ಮನ ಜೋಡಿ ವೀಕ್ಷಕರ ಮನಗೆಲ್ಲುವಲ್ಲಿ ಸಕ್ಸಸ್ ಆಗಿದ್ದರು. ಮೂಟೆ ಮೂಟೆ ಅಂತಾ ರಶ್ಮಿನ ಸೀನ ಕರೆದರೆ, ಊದುಗಡ್ಡಿ ಎಂದು ಸೀನನ ರಶ್ಮಿ ಕರೆಯುವುದು.. ಮಿಲಿಟ್ರಿ ಮಾದಪ್ಪನ ಜೊತೆ ಸೀನ ಕಿರಿಕ್ ಮಾಡಿದರೂ ನೋಡೋಕೇ ಮನರಂಜನೆ ಕೊಡುತ್ತಿತ್ತು. ಇನ್ನು ಸೀನ ಮತ್ತು ಪಿಂಕಿ ಎಪಿಸೋಡ್‌ಗಳು ಕೂಡಾ ವೀಕ್ಷಕರಿಗೆ ಹಿಡಿಸಿದ್ದವು. ಜಿಮ್ ಸೀನನ ಪಾತ್ರದಲ್ಲಿ ಸುಷ್ಮಿತ್ ಜೈನ್ ಸೂಪರ್ ಆಗಿಯೇ ನಟಿಸುತ್ತಿದ್ದರು. ಇದೀಗ ಅಣ್ಣಯ್ಯ ಧಾರಾವಾಹಿ ವೀಕ್ಷಕರಿಗೆ ಜಿಮ್ ಸೀನ ಖ್ಯಾತಿಯ ಸುಷ್ಮಿತ್ ಜೈನ್ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

ಸುಷ್ಮಿತ್ ಜೈನ್ ಈ ಧಾರಾವಾಹಿಯಿಂದ ಹೊರಬಂದಿದ್ದಾರೆ. ಈ ಕುರಿತು ಸ್ವತಃ ಅವರೇ ವೀಡಿಯೊ ಸಂದೇಶದ ಮೂಲಕ ಅಧಿಕೃತವಾಗಿ ತಿಳಿಸಿದ್ದಾರೆ. “ಎಲ್ಲರಿಗೂ ನಮಸ್ಕಾರ, ನಾನು ನಿಮ್ಮ ಜಿಮ್ ಸೀನಾ ಮಾತಾಡ್ತಾ ಇದ್ದೀನಿ. ಇನ್ನು ಮುಂದೆ ಈ ಜಿಮ್ ಸೀನಾ ಅನ್ನೋ ಪಾತ್ರವನ್ನು ನಾನು ಮುಂದುವರಿಸುವುದಕ್ಕೆ ಆಗುತ್ತಿಲ್ಲ. ಕೆಲವು ಕಾರಣಾಂತರಗಳಿಂದ ಈ ನಿರ್ಧಾರ ತಗೆದುಕೊಳ್ಳಬೇಕಾಯಿತು. ನನ್ನ ಮನವಿ ಏನೆಂದರೆ, ಇಷ್ಟು ದಿನ ನನಗೆ ಹೇಗೆ ಬೆಂಬಲ ಹಾಗೂ ಪ್ರೀತಿ ಕೊಟ್ಟಿರೋ, ಹಾಗೆಯೇ ಇನ್ನು ಮುಂದೆ ಈ ಪಾತ್ರವನ್ನು ಅಭಿನಯಿಸಲು ಬರುವ ಹೊಸ ಕಲಾವಿದರಿಗೂ ಅದೇ ಪ್ರೀತಿ ಮತ್ತು ಸಪೋರ್ಟ್ ನೀಡಿ. ನಿಮ್ಮೆಲ್ಲರ ಪ್ರೀತಿಗೆ ನಾನು ಸದಾ ಚಿರಋಣಿ‘ ಎಂದು ಅವರು ಪ್ರೇಕ್ಷಕರಲ್ಲಿ ವಿನಂತಿಸಿಕೊಂಡಿದ್ದಾರೆ.

ಜಿಮ್ ಸೀನಾ ಪಾತ್ರಕ್ಕೆ ಹೊಸ ನಟ ಎಂಟ್ರಿಕೊಟ್ಟಿದ್ದಾರೆ. ಅವರ ಹೆಸರು ನಿರ್ದರ್ಶನ್. ಇವರು ರಂಗಭೂಮಿ ಕಲಾವಿದರು. ಇದೇ ಮೊದಲ ಬಾರಿಗೆ ನಿದರ್ಶನ್ ಕಿರುತೆರೆಗೆ ಎಂಟ್ರಿಕೊಟ್ಟಿದ್ದಾರೆ. ಜಿಮ್ ಸೀನನ ಪಾತ್ರದ ಮೂಲಕ ಸೀರಿಯಲ್ ಲೋಕಕ್ಕೆ ಕಾಲಿಟ್ಟಿದ್ದಾರೆ ನಿದರ್ಶನ್.

ಸುಷ್ಮಿತ್ ಜೈನ್ ಬಿಗ್ ಬಾಸ್ ಗೆ ಹೋಗಲಿದ್ದಾರೆ. ಹೀಗಾಗಿಯೇ ಸೀರಿಯಲ್ ಬಿಟ್ಟಿದ್ದಾರೆ ಎಂಬ ಮಾತು ಕೇಳಿಬಂದಿದೆ.

Sulekha

Leave a Reply

Your email address will not be published. Required fields are marked *