ಕೈ ಮುಗಿತೀನಿ ಬಿಟ್ಬಿಡಿ.. – ಜಾಸ್ತಿ ಪ್ರಶ್ನೆ ಕೇಳಿದ್ದಕ್ಕೆ ಪೊಲೀಸರ ಕಾಲಿಗೆ ಬಿದ್ದ ದರ್ಶನ್!

ಕೈ ಮುಗಿತೀನಿ ಬಿಟ್ಬಿಡಿ.. – ಜಾಸ್ತಿ ಪ್ರಶ್ನೆ ಕೇಳಿದ್ದಕ್ಕೆ ಪೊಲೀಸರ ಕಾಲಿಗೆ ಬಿದ್ದ ದರ್ಶನ್!

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿರೋ ನಟ ದರ್ಶನ್ ಪೊಲೀಸರ ವಿಚಾರಣೆಗೆ ತಬ್ಬಿಬ್ಬಾಗಿದ್ದಾರೆ.  ವಿಚಾರಣೆ ವೇಳೆ ನಟ ದರ್ಶನ್​ ಪೊಲೀಸ್ರ ಕಾಲಿಗೆ ಬಿದ್ದಿದ್ದಾರಂತೆ.

ಸಿಕ್ಕ ಸಾಕ್ಷಿಗಳ ಮುಂದಿಟ್ಟು ದರ್ಶನ್​ಗೆ ತನಿಖಾಧಿಕಾರಿಗಳು ಪ್ರಶ್ನೆ ಮಾಡುತ್ತಿದ್ರು. ಜಾಸ್ತಿ ಪ್ರಶ್ನೆ ಕೇಳ್ತಿದ್ದಂತೆ ದರ್ಶನ್ ಕಾಲಿಗೆ ಬಿದ್ದಿದ್ದಾರೆ. ನನ್ನದು ತಪ್ಪಾಗಿದೆ, ದಯವಿಟ್ಟು ಏನೂ ಕೇಳಬೇಡಿ. ಕೈ ಮುಗಿತೀನಿ ಬಿಟ್ಬಿಡಿ ಎಂದು ಮನವಿ ಮಾಡಿದ್ದು, ದರ್ಶನ್​​ ಮಾತಿಗೆ ಮಣಿಯದ ಪೊಲೀಸ್ರು ನಾನ್​ ಸ್ಟಾಪ್​​ ವಿಚಾರಣೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ದ.ಆಫ್ರಿಕಾ ಸದ್ದಡಗಿಸಿದ RCB ಕ್ವೀನ್ಸ್ – ಸ್ಮೃತಿ ಸೆಂಚುರಿ.. ಆಶಾ ಆರ್ಭಟ

ಮತ್ತೊಂದೆಡೆ ರೇಣುಕಾಸ್ವಾಮಿ ಹತ್ಯೆಯ ವೇಳೆ ದರ್ಶನ್ ಧರಿಸಿದಂತಹ ಬಟ್ಟೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರೇಣುಕಾಸ್ವಾಮಿ ಹತ್ಯೆಯ ದಿನ ದರ್ಶನ್ ಧರಿಸಿದಂತ ಬಟ್ಟೆಗಳು ಪತ್ನಿ ವಿಜಯಲಕ್ಷ್ಮಿ ಫ್ಲಾಟ್​ನಲ್ಲಿ ಪತ್ತೆಯಾಗಿವೆ. ಮತ್ತೊಂದೆಡೆ ದರ್ಶನ್ ಅಂಡ್ ಟೀಂ ಶನಿವಾರ ಮಧ್ಯಾಹ್ನದಿಂದ ವಿನಯ್ ಒಡೆತನದ ಸ್ಟೋನಿಬ್ರೂಕ್ ನಲ್ಲಿ ಪಾರ್ಟಿ ಮಾಡ್ತಿದ್ದರು. ಈ ವೇಳೆ ದರ್ಶನ್ ಜೊತೆ ಪಾರ್ಟಿಯಲ್ಲಿ ಹಾಸ್ಯ ನಟ ಚಿಕ್ಕಣ್ಣ ಕೂಡ ಭಾಗಿಯಾಗಿದ್ದರು ಎನ್ನಲಾಗುತ್ತಿದೆ. ಹೀಗಾಗಿ ಚಿಕ್ಕಣ್ಣಗೂ ಕೂಡ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ.

Shwetha M

Leave a Reply

Your email address will not be published. Required fields are marked *