ನಟ ದರ್ಶನ್‌ ಜೈಲಿನಲ್ಲಿದ್ರೂ ಮರೆತಿಲ್ಲ ಮೈಸೂರು ನಂಟು! – ದಸರಾ ಆನೆ ಮಾವುತರಿಗೆ ಉಡುಗೊರೆ ಕೊಟ್ಟ ದಚ್ಚು ಪತ್ನಿ ವಿಜಯಲಕ್ಷ್ಮೀ!

ನಟ ದರ್ಶನ್‌ ಜೈಲಿನಲ್ಲಿದ್ರೂ ಮರೆತಿಲ್ಲ ಮೈಸೂರು ನಂಟು! – ದಸರಾ ಆನೆ ಮಾವುತರಿಗೆ ಉಡುಗೊರೆ ಕೊಟ್ಟ ದಚ್ಚು ಪತ್ನಿ ವಿಜಯಲಕ್ಷ್ಮೀ!

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಆ್ಯಂಡ್‌‌ ಗ್ಯಾಂಗ್ ಜೈಲಿಗೆ ಸೇರಿ ಬರೋಬ್ಬರಿ ಎರಡು ವಾರ ಕಳೆದಿದೆ. ಇದೀಗ ಸೆಂಟ್ರಲ್ ಜೈಲ್ ಪರಪ್ಪನ ಅಗ್ರಹಾರದಲ್ಲಿನ ಕ್ವಾರಂಟೈನ್ ಸೆಲ್ ನಲ್ಲಿದ್ದಾರೆ. ದರ್ಶನ್ ಜೈಲು ಪಾಲಾಗಿದ್ರೂ ಅವರ ಪತ್ನಿ ವಿಜಯಲಕ್ಷ್ಮೀ ದಸರಾ ಆನೆ ಮಾವುತರ ಕುಟುಂಬಕ್ಕೆ ವಿಶೇಷ ಉಡುಗೊರೆ ನೀಡಿದ್ದಾರೆ.

ಇದನ್ನೂ ಓದಿ: 5 ರಿಂದ 15 ವರ್ಷ ವಯಸ್ಸಿನ ಮಕ್ಕಳ ಆಧಾರ್ ಬಯೋಮೆಟ್ರಿಕ್‌ ಕಡ್ಡಾಯ!

ಹೌದು, ನಟ ದರ್ಶನ್‌ ಜೈಲಿನಲ್ಲಿದ್ರೂ ಕೂಡ  ಮೈಸೂರು ನಂಟನ್ನ ಅವರ ಪತ್ನಿ ವಿಜಯಲಕ್ಷ್ಮಿ ಮರೆತಿಲ್ಲ. ದರ್ಶನ್ ಅನುಪಸ್ಥಿತಿಯಲ್ಲೂ ಅವರ ಪತ್ನಿ ವಿಜಯಲಕ್ಷ್ಮಿ ದಸರಾ ಆನೆ ಮಾವುತರ ಕುಟುಂಬಕ್ಕೆ ಉಡುಗೊರೆ ಕೊಟ್ಟಿದ್ದಾರೆ. ಮಾವುತರ 60 ಕುಟುಂಬಕ್ಕೆ ವಿಜಯಲಕ್ಷ್ಮಿ ಕುಕ್ಕರ್ ಉಡುಗೊರೆ ನೀಡಿದ್ದಾರೆ. ಜೊತೆಗೆ ಭೋಜನದ ವ್ಯವಸ್ಥೆ ಮಾಡಿಸಿದ್ದರು.

ಹಿಂದೆ ದರ್ಶನ್ ಅನೇಕ ಬಾರಿ ಮೈಸೂರಿಗೆ ಭೇಟಿ ಕೊಟ್ಟು ಮಾವುತರಿಗೆ ಸಹಾಯ ಮಾಡಿದ್ದರಂತೆ. ಇದೀಗ ಆ ಪರಂಪರೆಯನ್ನ ವಿಜಯಲಕ್ಷ್ಮಿ ಮುಂದುವರಿಸಿದ್ದಾರೆ ಎನ್ನಲಾಗ್ತಿದೆ. ಮೈಸೂರಿನ ದಸರಾ ಆನೆ ನೋಡಿ ಖುಷಿಪಟ್ಟ ವಿಜಯಲಕ್ಷ್ಮಿ ಮಾವುತರಿಗೆ ಕೈಯ್ಯಾರೆ ಕುಕ್ಕರ್ ಕೊಟ್ಟಿದಾರೆ. ವಿಜಯಲಕ್ಷ್ಮಿಯವರ ಈ ಕೆಲಸಕ್ಕೆ ನಟ ಧನ್ವಿರ್. ಹಾಗೂ ದರ್ಶನ್‌ ತಾಯಿ ಜೊತೆಯಾಗಿದ್ರು.

ಸೆಪ್ಟೆಂಬರ್ 22 ರಿಂದ ಅಕ್ಟೋಬರ್‌ 2ರ ವರೆಗೆ ಈ ಬಾರಿಯ ಮೈಸೂರು ದಸರಾ ಮಹೋತ್ಸವ ನಡೆಯಲಿದೆ. ದಸರಾ ಮೆರವಣಿಗೆಯಲ್ಲಿ ಭಾಗಿಯಾಗುವ 2 ತಂಡದ 14 ಆನೆಗಳು ಈಗಾಗಳೇ ಅರಮನೆ ಅಂಗಳದಲ್ಲಿ ಬೀಡುಬಿಟ್ಟಿವೆ.

Shwetha M