‘ಏನ್ರೀ ಮೀಡಿಯಾ’ ಅನ್ನಂಗಿಲ್ಲ ದಾಸ – D ಫ್ಯಾನ್ಸ್ ಈಗಲೇ ಖುಷಿಪಡಬೇಡಿ
42 ದಿನದ ಬಳಿಕ ದರ್ಶನ್ ಕತೆಯೇನು?

 ‘ಏನ್ರೀ ಮೀಡಿಯಾ’ ಅನ್ನಂಗಿಲ್ಲ ದಾಸ – D ಫ್ಯಾನ್ಸ್ ಈಗಲೇ ಖುಷಿಪಡಬೇಡಿ42 ದಿನದ ಬಳಿಕ ದರ್ಶನ್ ಕತೆಯೇನು?

ನಿಜಕ್ಕೂ ದರ್ಶನ್ ಮತ್ತು ಅವರ ಅಭಿಮಾನಿಗಳಿಗೆ ದೀಪಾವಳಿಯ ಭರ್ಜರಿ ಗಿಫ್ಟ್ ಸಿಕ್ಕಿದೆ. ದಾಸ,ಕರಿಯ, ಡಿಬಾಸ್‌, ಹೀಗೆ ನಾನಾ ಹೆಸರುಗಳಿಂದ ಕರುನಾಡಿನಲ್ಲಿ ಅಪಾರ ಅಭಿಮಾನಿಗಳನ್ನ ಗಳಿಸಿರೋ ದರ್ಶನ್‌ ಜೀವನದಲ್ಲಿ ಬೆಳಕು ಮೂಡಿದೆ. ಮರ್ಡರ್‌ ಕೇಸ್‌ನಲ್ಲಿ 131 ದಿನಗಳಿಂದ ದರ್ಶನ್‌ ಜೈಲಿನಲ್ಲಿ ಕತ್ತಲೇ ಕೋಣೆಯಲ್ಲಿ ಕಳೆದಿದ್ದರು.. ಆದ್ರೆ ಅವರಿಗೆ ಮಂಧ್ಯತರ ಜಾಮೀನು ಸಿಕ್ಕಿದೆ. ಹಾಗಿದ್ರೆ ಜೈಲಿನ ಹೊರ ಬರೋ ದರ್ಶನ್‌ ಮುಂದೆ ಇರೋ ಸಾವಲುಗಳೇನು? ಕೋರ್ಟ್‌ ನೀಡಿದ ಷರತ್ತುಗಳೇನು? ದರ್ಶನ್‌ ಹೆಗೆಲ್ಲಾ ಇರಬೇಕು? ಈ ಗ್ಯಾಪ್‌ನಲ್ಲಿ ದರ್ಶನ್ ಸಿನಿಮಾ ಶೂಟಿಂಗ್‌ಗೆ  ಹೋಗಬಹುದಾ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:3 ವರ್ಷ.. 4 ಕ್ಯಾಪ್ಟನ್.. 8 ಕೋಚ್‌! – ಬದಲಾವಣೆಯಲ್ಲೂ ಪಾತಾಳಕ್ಕಿಳಿದ PAK

ಹೊರ ಬಿಂದಾಸ್ ಆಗಿದ್ದ ದಾಸ ಕೊಲೆ ಆರೋಪದಲ್ಲಿ ಜೈಲಿನಲ್ಲಿ ಕಾಲ ಕಳೆಬೇಕಾದ ಪರಿಸ್ಥಿತಿ ಉಂಟಾಗಿದೆ. ರೇಣುಕಾಸ್ವಾಮಿ ಮರ್ಡರ್‌ ಕೇಸ್‌ನಲ್ಲಿ ಅಂದರ್ ಆಗಿ ಜೈಲಿನಲ್ಲಿ ಬಳಲಿ ಬೆಂಡಾಗಿದ್ರು.. ಅವರ ಅಭಿಮಾನಿಗಳು ಇವತ್ತು ಹೊರ ಬರ್ತಾರೆ ಇವತ್ತು ಬರ್ತಾರೆ ಅಂತಾ ಕಾತುರದಿಂದ ಕಾಯುತ್ತಿದ್ದರು..131 ದಿನಗಳ ಕಾಲ  ಜೈಲಿನಲ್ಲಿದ್ದ  ದರ್ಶನ್ ಚಿಕ್ಕ ಬ್ರೇಕ್ ಸಿಕ್ಕಿದೆ. ದೀಪಾವಳಿ ಹಬ್ಬಕ್ಕೆ ನಟ ದರ್ಶನ್‌ಗೆ ಕೋರ್ಟ್‌ ಭರ್ಜರಿ ಗುಡ್‌ನ್ಯೂಸ್ ನೀಡಿದ್ದು, ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿ ಆದೇಶ ಪ್ರಕಟಿಸಿದ್ದು. ದರ್ಶನ್ ಜೈಲಿನಿಂದ ಹೊರ ಬಂದಿದ್ದಾರೆ.. ಇದ್ರಿಂದ ಅವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಸಂಭ್ರಮಿಸುತ್ತಿದ್ದಾರೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಡಿವಿಲ್ ಈಸ್ ಬ್ಯಾಕ್ ಅಂತಾ ಪೋಸ್ಟ್ ಹಾಕಿ, ಪಾಟಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.

ಮಧ್ಯಂತರ ಜಾಮೀನು  ಸಿಗೋಕೆ ಕಾರಣವೇನು?

ದರ್ಶನ್‌ಗೆ ಬೇಲ್ ಸಿಗೋಕೆ ಕಾರಣವೇನು ಅಂದ್ರೆ ಬೆನ್ನು ನೋವು.. ಹೌದು ದರ್ಶನ್ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಹೋದ ಮೇಲೆ ಅವರನ್ನ ಬೆನ್ನು ನೋವು ಬಿಟ್ಟು ಬಿಡದೆ ಕಾಡುತಿತ್ತು. ಒಂದು ಬ್ಯಾಗ್ ಎತ್ತೋಕೆ ಕಷ್ಟ ಪಡುತ್ತಿದ್ದ ದೃಶ್ಯಗಳನ್ನ ನೀವು ಈಗಾಗಲೇ ನೋಡಿ ಇರ್ತಿರಾ.. ಹೀಗಾಗಿ ನಟ ದರ್ಶನ್‌ಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ದರ್ಶನ್ ಪರ ವಕೀಲರು ವಾದ ಮಾಡಿದ್ದರು. ಚಿಕಿತ್ಸೆ ಪಡೆಯದೆ ಇದ್ದರೆ, ಮುಂದೆ ಮೂತ್ರಪಿಂಡ ಸಮಸ್ಯೆ ಅಥವಾ ಗಂಭೀರ ಅರೋಗ್ಯ ಸಮಸ್ಯೆಗೆ ಈಡಾಗುವ ಸಾಧ್ಯತೆ ಇದೆ ಎಂದು ವಾದ ಮಾಡಿದ್ದರು. ಮಧ್ಯಂತರ ಜಾಮೀನು ಕೊಡಬೇಕೆಂದು ಸಿವಿ ನಾಗೇಶ್ ಅವರು ಮನವಿ ಮಾಡಿದ್ದರು. ಅದೇ ರೀತಿ ನಟನ ಆರೋಗ್ಯ ಸಮಸ್ಯೆಗಳ ಬಗ್ಗೆಯೂ ಅವರು ಹೇಳಿದ್ದರು. ಆತನ ಸಮಸ್ಯೆ ಆತನಿಗೆ ಗೊತ್ತು..? ಕೂರೋಕು ಆಗಲ್ಲ, ನಿಲ್ಲೋಕು ಆಗಲ್ಲ, ನಡೆಯೋಕು ಆಗಲ್ಲ ಎಂದು ಸಿವಿ ನಾಗೇಶ್ ಜಡ್ಜ್‌ ಮುಂದೆ ಹೇಳಿದ್ದರು. ಬೆನ್ನು ನೋವಿನಿಂದ ಜೈಲಿನಲ್ಲಿ ನರಕಯಾತನೆ ಅನುಭವಿಸುತ್ತಿರುವ ದಾಸನಿಗೆ ಹೈಕೋರ್ಟ್ ರಿಲೀಫ್​ ನೀಡಿದ್ದು. 6 ವಾರಗಳ ಕಾಲ ಬೇಲ್ ಮೇಲೆ ಹೊರಗೆ ಇರಲಿದ್ದಾರೆ.

ದಾಸನಿಗೆ ಕೋರ್ಟ್​ ಷರತ್ತು

  • ಆರು ವಾರ ಮಾತ್ರ ಷರತ್ತುಬದ್ದ ಜಾಮೀನು ಮಂಜೂರು
  • ಚಿಕಿತ್ಸೆಗಾಗಿ ಮಾತ್ರ ಜಾಮೀನು ಮಂಜೂರು
  • ದರ್ಶನ್ ಆಯ್ಕೆಯ​ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವಕಾಶ
  • ಪಾಸ್​ಪೋರ್ಟ್​ನ್ನು ಕೋರ್ಟ್​ ವಶಕ್ಕೆ ನೀಡಬೇಕು
  • ಸಾಕ್ಷಿಗಳಿಗೆ ಪ್ರತ್ಯಕ್ಷ & ಪರೋಕ್ಷ ಬೆದರಿಕೆ ಹಾಕುವಂತಿಲ್ಲ, ಸಂಪರ್ಕ ಮಾಡುವಂತಿಲ್ಲ
  • ಜಾಮೀನಿನ ದುರುಪಯೋಗ ಆಗಬಾರದು
  • ಇಬ್ಬರು ಶ್ಯೂರಟಿ ಜೊತೆ 2 ಲಕ್ಷದ ಬಾಂಡ್ ಸಲ್ಲಿಸಬೇಕು
  • ಒಂದು ವಾರದಲ್ಲಿ ಚಿಕಿತ್ಸೆ ವಿವರ ಕೋರ್ಟ್‌ಗೆ ನೀಡಬೇಕು
  • ಮೀಡಿಯಾ & ಸೋಷಿಯಲ್‌ ಮೀಡಿಯಾದಲ್ಲಿ ತನ್ನ ಆರೋಗ್ಯದ ಬಗ್ಗೆ ಯಾವುದೇ ಹೇಳಿಕೆ ನೀಡುವಂತಿಲ್ಲ.

ಇಷ್ಟು ಷರತ್ತುಗಳನ್ನ ಹಾಕಿ ದರ್ಶನ್‌ಗೆ ಹೈಕೋರ್ಟ್‌ ಬೇಲ್ ನೀಡಿದೆ..ಈಗ ದರ್ಶನ್‌ ಕೂಡ ಹೊರ ಬಂದಿದ್ದಾರೆ.. ಇವರು ಕೇವಲ ಚಿಕಿತ್ಸೆ ಮಾತ್ರ ಪಡೆಯಬೇಕು.. ಅದು ಸಿನಿಮಾ ಶೂಟಿಂಗ್ ಅದು ಇದು ಅಂತಾ ಬೇಕಾಬಿಟ್ಟಿಯಾಗಿ ಕೋರ್ಟ್ ರೂಲ್ಸ್ ಬ್ರೇಕ್ ಮಾಡೋ ಹಾಗಿಲ್ಲ.. ಒಂದು ವೇಳೆ ದರ್ಶನ್ ಶೂಟಿಂಗ್, ಪಬ್‌ ಕ್ಲಬ್ ಅಂತಾ ಓಡಾಡಿಕೊಂಡಿರೋದು ಕೋರ್ಟ್ ಗಮನಕ್ಕೆ ಬಂದ್ರೆ ಮಂಧ್ಯತರ ಜಾಮೀನು ಕ್ಯಾನ್ಸಲ್ ಕೂಡ ಆಗಬಹುದು. 6 ವಾರ ಅಂದ್ರೆ ಒಂದೂವರೆ ತಿಂಗಳು ದರ್ಶನ್ ಜೈಲಿನಿಂದ ಹೊರ ಬರಲಿದ್ದಾರೆ. ಅವಧಿ ಮುಗಿದ ಮೇಲೆ ಮತ್ತೆ ದರ್ಶನ್ ಜೈಲಿಗೆ ಹೋಗಲೇ ಬೇಕು. 6 ವಾರಗಳ ನಂತ್ರ ಅವರು ಕೋರ್ಟ್‌ ಮುಂದೆ ಹಾಜರಾಗಬೇಕು. ಹಾಗೇ 6 ವಾರ ಪಡೆದ ಎಲ್ಲಾ ಚಿಕಿತ್ಸೆಯ ಎಲ್ಲಾ ರಿಪೋರ್ಟ್ ಕೋರ್ಟ್‌ಗೆ ದರ್ಶನ್ ಸಲ್ಲಿಸಬೇಕು. ಒಂದು ವೇಳೆ ಬೆನ್ನು  ನೋವಿನ ಶಸ್ತ್ರ ಚಿಕಿತ್ಸೆಗೆ ಮತ್ತಷ್ಟು ದಿನಗಳ ಬೇಕು ಅಂದ್ರೆ ಮತ್ತೆ ಕೋರ್ಟ್‌ನಿಂದ ಅನುಮತಿ ಪಡಯಬೇಕು.. ಅಭಿಮಾನಿಗಳು ಮಾತ್ರವಲ್ಲೇ ಸ್ಟಾರ್ ನಟ ನಟಿಯರು ದರ್ಶನ್‌ಗೆ ಬೇಲ್ ಸಿಕ್ಕಿದ್ದಕ್ಕೆ ಖುಷಿ ಪಡುತ್ತಿದ್ದಾರೆ. ದರ್ಶನ್ ಬೆಂಗಳೂರಿನ ಖಾಸಗಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಯಾಕಂದ್ರೆ ಇವರು ಈ ಹಿಂದೆ ಪಡೆದಿದ್ದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಅಂದ್ರೆ ಕೋರ್ಟ್ ಅನುಮತಿ ಮತ್ತೆ ಪಡೆಯಬೇಕು.. ಹೀಗಾಗಿ ಅವರು ಎಲ್ಲಿ ಚಿಕಿತ್ಸೆ ಪಡೆಯತ್ತಾರೆ ಅನ್ನೋದು ಸಾಕಷ್ಟು ಕುತೂಹಲ ಮೂಡಿಸಿದೆ.

Shwetha M

Leave a Reply

Your email address will not be published. Required fields are marked *