ಥೈಲಾಂಡ್ನಲ್ಲಿ ದಾಸ ಫುಲ್ ಜಾಲಿ – ಇತ್ತ ಡೆವಿಲ್ ಸಂಭ್ರಮಕ್ಕೆ ಸಜ್ಜಾದ ಡಿಬಾಸ್ ಫ್ಯಾನ್ಸ್!

ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಪಾಲಾಗಿದ್ದ ನಟ ದರ್ಶನ್ 6 ತಿಂಗಳ ಕಾಲ ಸೆರೆವಾಸದಲ್ಲಿದ್ರು. ಜಾಮೀನು ಮೂಲಕ ಹೊರ ಬಂದ ಬೆನ್ನಲ್ಲೇ ದರ್ಶನ್ ಡೆವಿಲ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ರು. ಇದೀಗ ಥೈಲಾಂಡ್ ನಲ್ಲಿ ಸಿನಿಮಾ ಸಾಂಗ್ ಶೂಟ್ ಆಗ್ತಿದೆ. ಅತ್ತ ದರ್ಶನ್ ಥಾಯ್ಲೆಂಡ್ನಲ್ಲಿ ಬೀಡುಬಿಟ್ಟಿದ್ದರೆ, ಇತ್ತ ಅಭಿಮಾನಿಗಳು ಮೋಷನ್ ಪೋಸ್ಟರ್ ರಿಲೀಸ್ ಸಂಭ್ರಮಾಚರಣೆ ಮಾಡಲು ಸಜ್ಜಾಗಿದ್ದಾರೆ.
ಇದನ್ನೂ ಓದಿ:ಅರಿಶಿನ ಮಿಶ್ರಿತ ಹಾಲು ಕುಡಿಯುತ್ತಿದ್ದೀರಾ? – ಅಪಾಯ ಖಂಡಿತ!
ಸಾಕಷ್ಟು ಏಳುಬೀಳುಗಳ ನಡುವೆ ದರ್ಶನ್ ನಟನೆಯ ಡೆವಿಲ್ ಶೂಟಿಂಗ್ ಮುಕ್ತಾಯವಾಗಿದೆ. ಇನ್ನೂ ಕೆಲವೇ ತಿಂಗಳಲ್ಲಿ ಬಿಡುಗಡೆಗೂ ಸಜ್ಜಾಗಿದೆ, ದಸರಾ ವೇಳೆಗೆ ಸಿನಿಮಾ ರಿಲೀಸ್ ಮಾಡೋ ಸಾಧ್ಯತೆ ಇದೆ. ಇಂದು ರಾತ್ರಿ 8 ಗಂಟೆಗೆ ಡೆವಿಲ್ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಲಿದೆ. ಇದೇ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಡೇಟ್ ಕೂಡ ಘೋಷಿಸುವ ಸಾಧ್ಯತೆಯಿದೆ.
ಒಂದ್ಕಡೆ ಥಾಯ್ಲೆಂಡ್ನಲ್ಲಿ ಶೂಟಿಂಗ್ ಮಾಡ್ತಿರುವ ದರ್ಶನ್ ಪಾರ್ಟಿ ಮೂಡ್ನಲ್ಲೂ ಇದ್ದಾರೆ. ಇನ್ನೊಂದ್ಕಡೆ ದರ್ಶನ್ಗೆ ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯ ಆದೇಶ ಮಂಗಳವಾರ ಹೊರಬೀಳಲಿದ್ದು, ಏನಾಗುತ್ತೋ ಅನ್ನೋ ಆತಂಕ ಅಭಿಮಾನಿಗಳಲ್ಲಿದೆ. ಈ ನಡುವೆಯೂ ದರ್ಶನ್ ಅಭಿಮಾನಿಗಳು ಬೆಂಗಳೂರಿನ ಅತ್ತಿಬೆಲೆಯಲ್ಲಿ ಒಂದೆಡೆ ಸೇರಿ ಡೆವಿಲ್ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಸಂಭ್ರಮಾಚರಣೆ ಮಾಡಲು ಸಜ್ಜಾಗಿದ್ದಾರೆ.

ನೋಡಿರಿ

