ಡಬ್ಬಿಂಗ್ ಮಾಡುವಾಗಲೇ ಕುಸಿದು ಬಿದ್ದ ನಟ – ಹೃದಯಾಘಾತದಿಂದ ‘ಜೈಲರ್’ ನಟ ಮಾರಿಮುತ್ತು ನಿಧನ

ಡಬ್ಬಿಂಗ್ ಮಾಡುವಾಗಲೇ ಕುಸಿದು ಬಿದ್ದ ನಟ – ಹೃದಯಾಘಾತದಿಂದ ‘ಜೈಲರ್’ ನಟ ಮಾರಿಮುತ್ತು ನಿಧನ

ಜೈಲರ್‌ ಸಿನಿಮಾದಲ್ಲಿ ವಿಲನ್‌ನ ಸಹಚರ ಪಾತ್ರದಲ್ಲಿ ನಟಿಸಿದ್ದ ತಮಿಳು ನಾಡಿನ ಖ್ಯಾತ ನಟ ಮಾರಿಮುತ್ತು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅವರಿಗೆ 58 ವರ್ಷ ವಯಸ್ಸಾಗಿತ್ತು.

ಇತ್ತೀಚೆಗೆ ರಿಲೀಸ್ ಆದ ‘ಜೈಲರ್’ ಸಿನಿಮಾದಲ್ಲಿ ಮಾರಿಮುತ್ತು ಅವರು ವಿಲನ್ ಸಹಚರನ ಪಾತ್ರ ಮಾಡಿದ್ದರು. ಶುಕ್ರವಾರ ಬೆಳಿಗ್ಗೆ ಮಾರಿಮುತ್ತು ಅವರು ಟಿವಿ ಶೋ ಒಂದರ ಡಬ್ಬಿಂಗ್​ನಲ್ಲಿ ಭಾಗಿ ಆಗಿದ್ದರು. ಚೆನ್ನೈನ ಸ್ಟುಡಿಯೋದಲ್ಲಿ ಈ ಡಬ್ಬಿಂಗ್ ಕೆಲಸ ನಡೆಯುತ್ತಿತ್ತು. ಅವರು ಡಬ್ ಮಾಡುತ್ತಿರುವಾಗಲೇ ಕುಸಿದು ಬಿದ್ದಿದ್ದಾರೆ. ಅಲ್ಲಿರುವ ಖಾಸಗಿ ಆಸ್ಪತ್ರೆಗೆ ಅವರನ್ನು ತೆಗೆದುಕೊಂಡು ಹೋಗಲಾಯಿತು. ಆದರೆ, ಆಗಲೇ ಅವರು ಮೃತಪಟ್ಟಿದ್ದರು. ಅವರ ಸಾವಿಗೆ ಸೆಲೆಬ್ರಿಟಿಗಳು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಚೆನ್ನೈನಲ್ಲಿರುವ ಅವರ ನಿವಾಸಕ್ಕೆ ಮೃತದೇಹವನ್ನು ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ: ಫ್ಯಾಮಿಲಿ ಸಮೇತ ‘ಜವಾನ್’ ಸಿನಿಮಾ ನೋಡುವೆ ಎಂಬ ಟಾಲಿವುಡ್ ಪ್ರಿನ್ಸ್ ಮಹೇಶ್‌ಬಾಬು – ನಾನೂ ಬರುವೆ, ಧನ್ಯವಾದ ಗೆಳೆಯ ಎಂದ ಶಾರುಖ್ ಖಾನ್

‘ಜೈಲರ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 650 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಈ ಚಿತ್ರದಲ್ಲಿ ವಿಲನ್ ವರ್ಮಾನ (ವಿನಾಯಕನ್) ಸಹಚರನಾಗಿ ಮಾರಿಮುತ್ತು ಕಾಣಿಸಿಕೊಂಡಿದ್ದರು. ಅವರ ಪಾತ್ರ ಕೂಡ ಗಮನ ಸೆಳೆದಿತ್ತು. ಸಿನಿಮಾ ಹಿಟ್ ಆದ ಖುಷಿಯಲ್ಲಿದ್ದಾಗಲೇ ಅವರು ಮೃತಪಟ್ಟಿರೋದು ಬೇಸರದ ಸಂಗತಿ.

ಮಾರಿಮುತ್ತು ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 1999ರಲ್ಲಿ. ಅಜಿತ್ ಕುಮಾರ್ ನಟನೆಯ ‘ವಾಲಿ’ ಅವರ ನಟನೆಯ ಮೊದಲ ಸಿನಿಮಾ. ಬಳಿಕ ಅವರು ಹಲವು ಪೋಷಕ ಪಾತ್ರದಲ್ಲಿ ನಟಿಸಿದರು. ‘ತೇರಿ’ ಸಿನಿಮಾದಲ್ಲಿ ಅವರು ರಾಜಕಾರಣಿಯ ಪಾತ್ರ ಮಾಡಿದ್ದರು. ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಚಿತ್ರದಲ್ಲಿ ಅವರು ನಟಿಸುತ್ತಿದ್ದರು. ಸಿನಿಮಾ ಶೂಟಿಂಗ್​ ಪ್ರಗತಿಯಲ್ಲಿರುವಾಗಲೇ ‘ಅವರು ಕೊನೆಯುಸಿರು ಎಳೆದಿದ್ದಾರೆ.

suddiyaana