ನಟ ಚಿಯಾನ್ ವಿಕ್ರಮ್ ಪಕ್ಕೆಲುಬಿಗೆ ಏಟು – ‘ತಂಗಲಾನ್’ ಚಿತ್ರೀಕರಣ ಸ್ಥಗಿತ..!

ನಟ ಚಿಯಾನ್ ವಿಕ್ರಮ್ ಪಕ್ಕೆಲುಬಿಗೆ ಏಟು – ‘ತಂಗಲಾನ್’ ಚಿತ್ರೀಕರಣ ಸ್ಥಗಿತ..!

ತಮಿಳಿನ ಖ್ಯಾತ ನಟ ಚಿಯಾನ್ ವಿಕ್ರಮ್ ತಂಗಲಾನ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಶೂಟಿಂಗ್‌ನಲ್ಲಿರುವ ಚಿಯಾನ್ ವಿಕ್ರಮ್ ಗಾಯಗೊಂಡಿದ್ದಾರೆ. ರಿಹರ್ಸಲ್ ವೇಳೆ ನಟ ಚಿಯಾನ್ ವಿಕ್ರಮ್ ಗಾಯಗೊಂಡಿದ್ದು, ತಂಗಲಾನ್ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ.  ಹೀಗಾಗಿ ವಿಕ್ರಮ್ ಇನ್ನು ಒಂದು ತಿಂಗಳು ಶೂಟಿಂಗ್‌ನಲ್ಲಿ ಭಾಗವಹಿಸಬಾರದು ಎಂದು ವೈದ್ಯರು ಕೂಡಾ ಸೂಚಿಸಿದ್ದಾರೆ.

ಇದನ್ನೂ ಓದಿ:  ಇದು ಚಿಯಾನ್ ವಿಕ್ರಮ್ ಹೌದಾ?… – ‘ತಂಗಲಾನ್’ ಸಿನಿಮಾದಲ್ಲಿ ನೆಚ್ಚಿನ ನಟನ ಲುಕ್ ನೋಡಿ ತಲೆಕೆಡಿಸಿಕೊಂಡ ಫ್ಯಾನ್ಸ್..!

ತಂಗಲಾನ್ ಸಿನಿಮಾದ ಪೂರ್ವಾಭ್ಯಾಸ ನಡೆಯುತ್ತಿತ್ತು. ಈ ವೇಳೆ ವಿಕ್ರಮ್ ಪಕ್ಕೆಲುಬಿಗೆ ಏಟುಬಿದ್ದಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ತಂಗಲಾನ್ ಸಿನಿಮಾದ ಶೂಟಿಂಗ್ ಸ್ಥಗಿತಗೊಳಿಸಲಾಗಿದೆ. ಸುಮಾರು ಒಂದು ತಿಂಗಳ ಕಾಲ  ಚಿಯಾನ್ ವಿಕ್ರಮ್ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಕ್ರಮ್ ಬಗ್ಗೆ ಅವರ ವಕ್ತಾರರು, ‘ಆದಿತ್ಯಾ ಕರಿಕಾಳನ್ ಚಿಯಾನ್ ವಿಕ್ರಮ್ ಸ್ವೀಕರಿದ ಎಲ್ಲಾ ಪ್ರೀತಿ ಮತ್ತು ಮೆಚ್ಚುಗೆಗೆ ಧನ್ಯವಾದಗಳು. ಜಗತ್ತಿನಾದ್ಯಂತ ಪೊನ್ನಿಯಿನ್ ಸೆಲ್ವನ್-2 ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಿಹರ್ಸಲ್ ಸಮಯದಲ್ಲಿ ಚಿಯಾನ್ ವಿಕ್ರಮ್ ಗಾಯಗೊಂಡಿದ್ದು ಪಕ್ಕೆಲುಬು ಮುರಿದಿದೆ. ತಂಗಲಾನ್ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ನಿಮ್ಮ ಪ್ರೀತಿಗೆ ಧನ್ಯವಾದಗಳು. ಬೇಗನೆ ಹಿಂದಿರುಗುತ್ತಾರೆ’ ಎಂದು ಹೇಳಿದ್ದಾರೆ. ಈ ಸಿನಿಮಾಗೆ ಪಿ ರಂಜಿತ್ ಆಕ್ಷನ್ ಕಟ್  ಹೇಳುತ್ತಿದ್ದಾರೆ. ಮೇಕಿಂಗ್ ವಿಡಿಯೋ ನೋಡಿದ ಅಭಿಮಾನಿಗಳು ಸಿನಿಮಾಗಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಸಿನಿಮಾದಲ್ಲಿ ನಟಿ ಪಾರ್ವತಿ ಮತ್ತು ಮಾಳವಿಕಾ ಮೋಹನನ್ ನಟಿಸುತ್ತಿದ್ದಾರೆ

suddiyaana