ನಟ ಆಮೀರ್ ಖಾನ್ ಲಿವ್-ಇನ್ ಸಂಬಂಧ ಬಯಲು – ಗೆಳತಿ ಗೌರಿ ಜೊತೆ ಹೃದಯದಲ್ಲಿ ಮದುವೆಯಾದ ನಟ

ಬಾಲಿವುಡ್ ನಟ ಆಮಿರ್ ಖಾನ್ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಜೊತೆಗೆ ಮದುವೆಯಾಗಿದ್ದೀರಾ ಎಂಬ ಪ್ರಶ್ನೆಗೆ ನಾನು ಹೃದಯದಲ್ಲಿ ಮದುವೆಯಾಗಿದ್ದೇನೆ ಎಂಬ ಮೂಲಕ ತನ್ನ ಮತ್ತೊಂದು ಸಂಬಂಧದ ಬಗ್ಗೆ ಬಹಿರಂಗ ಪಡಿಸಿದ್ದಾರೆ.
ಇದನ್ನೂ ಓದಿ:ಗೆದ್ದ ಬೆನ್ನಲ್ಲೇ ಗಿಲ್ಲಿ ಹೊಸ ಹೆಜ್ಜೆ! – ಗಿಲ್ಲಿನಟ ನೆಕ್ಟ್ಸ್ ಪ್ಲ್ಯಾನ್ ರಿವೀಲ್?
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್, ನಟ ಆಮಿರ್ ಖಾನ್ 60ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಖುಷಿಯಲ್ಲಿ ಆಮೀರ್ ಖಾನ್ ತಮ್ಮ ಗೆಳತಿ ಗೌರಿ ಸ್ಪ್ರಾಟ್ ಜೊತೆಗಿನ ಸಂಬಂಧವನ್ನು ಬಹಿರಂಗಪಡಿಸಿದ್ದಾರೆ. 25 ವರ್ಷಗಳ ಪರಿಚಯ ಮತ್ತು ಎರಡೂವರೆ ವರ್ಷಗಳ ಡೇಟಿಂಗ್ ನಂತರ ಇದೀಗ ತನ್ನ ಪ್ರೀತಿಯನ್ನು ಬಹಿರಂಗ ಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ, ಅವರು ತಮ್ಮ ಸಂಬಂಧ ಮತ್ತು ಮದುವೆಯ ಬಗ್ಗೆ ಮಾತನಾಡಿದ್ದಾರೆ. ಆಮಿರ್ ಮತ್ತು ಅವರ ಗೆಳತಿ ಗೌರಿ ಸ್ಪ್ರಾಟ್ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ.
ಗೌರಿ ಬಗ್ಗೆ ಮಾತನಾಡಿದ ಆಮಿರ್ ಖಾನ್ , ಗೌರಿ ಮತ್ತು ನಾನು ಈ ಸಂಬಂಧದ ಬಗ್ಗೆ ತುಂಬಾ ಗಂಭೀರವಾಗಿದ್ದೇವೆ. ನಾವು ಪರಸ್ಪರ ಬದ್ಧರಾಗಿದ್ದೇವೆ. ಒಳ್ಳೆಯ ಮತ್ತು ಕೆಟ್ಟ ಸಮಯಗಳಲ್ಲಿ ನಾವು ಪರಸ್ಪರ ಒಟ್ಟಿಗೆ ಇದ್ದೇವೆ ಎಂದಿದ್ದಾರೆ ಆಮಿರ್. ನಾನು ಗೌರಿಯನ್ನು ನನ್ನ ಹೃದಯದಲ್ಲಿ ಮದುವೆಯಾಗಿದ್ದೇನೆ. ನಾವು ಕಾನೂನುಬದ್ಧವಾಗಿ ಮದುವೆಯಾಗುತ್ತೇವೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಇದು ಸತ್ಯ. ಭವಿಷ್ಯದಲ್ಲಿ ನಾನು ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದಿದ್ದಾರೆ ಆಮಿರ್. ನಾವು ಅನಿರೀಕ್ಷಿತವಾಗಿ ಭೇಟಿಯಾದೆವು. ಅದರ ನಂತರ, ನಾವು ಪರಸ್ಪರ ಸಂಪರ್ಕದಲ್ಲಿದ್ದೆವು ಮತ್ತು ಈಗ ಅದಾಗಿಯೇ ಎಲ್ಲವೂ ನಡೆಯತ್ತಿದೆ ಎಂದಿದ್ದಾರೆ ಆಮಿರ್. ಗೌರಿಗೆ ಈಗ ಆರು ವರ್ಷದ ಮಗನೂ ಇದ್ದಾನೆ. ಆಮಿರ್ ಮೊದಲು ರೀನಾ ದತ್ತಾ ಅವರನ್ನು 1986 ರಲ್ಲಿ ವಿವಾಹವಾದರು. ಈ ದಂಪತಿಗೆ ಜುನೈದ್ ಮತ್ತು ಇರಾ ಎಂಬ ಇಬ್ಬರು ಮಕ್ಕಳಿದ್ದಾರೆ. ರೀನಾ ಮತ್ತು ಆಮಿರ್ 2002 ರಲ್ಲಿ ವಿಚ್ಛೇದನ ಪಡೆದರು. ನಂತರ ಅವರು 2005 ರಲ್ಲಿ ಕಿರಣ್ ರಾವ್ ಅವರನ್ನು ವಿವಾಹವಾದರು. ಈ ದಂಪತಿಗೆ ಆಜಾದ್ ಎಂಬ ಮಗ ಇದ್ದಾರೆ. 2021ರಲ್ಲಿ, ದಂಪತಿಗಳು ತಮ್ಮ ವಿಚ್ಛೇದನ ಘೋಷಿಸಿದರು. ವಿಚ್ಛೇದನದ ನಂತರವೂ, ಆಮಿರ್ ತಮ್ಮ ಮಾಜಿ ಪತ್ನಿಯರೊಂದಿಗೆ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ. ಆಮಿರ್ ರೀನಾ ಮತ್ತು ಕಿರಣ್ ಇಬ್ಬರೊಂದಿಗೂ ಸ್ನೇಹ ಸಂಬಂಧವನ್ನು ಉಳಿಸಿಕೊಂಡಿದ್ದಾರೆ.
ಗೌರಿ ಅವರು ಬೆಂಗಳೂರಿನವರು. ಬ್ಲೂ ಮೌಂಟೇನ್ ಶಾಲೆಯಲ್ಲಿ ಅಧ್ಯಯನ ಮಾಡಿದರು. ನಂತರ, ಅವರು ಲಂಡನ್‌ನಲ್ಲಿ FDA ಸ್ಟೈಲಿಂಗ್ ಮತ್ತು ಛಾಯಾಗ್ರಹಣ ಫ್ಯಾಷನ್‌ನಲ್ಲಿ ಕೋರ್ಸ್ ಮಾಡಿದರು. ಅವರು ಮುಂಬೈನಲ್ಲಿ ‘ಬಿ ಬ್ಲಂಟ್’ ಎಂಬ ಸಲೂನ್ ಅನ್ನು ಸಹ ಹೊಂದಿದ್ದಾರೆ. ಗೌರಿಗೆ ಆರು ವರ್ಷದ ಮಗನೂ ಇದ್ದಾನೆ. ಆಮಿರ್ ಮತ್ತು ಗೌರಿ ನಡುವೆ ದೊಡ್ಡ ವಯಸ್ಸಿನ ಅಂತರವಿದೆ. ಆಮಿರ್ 60 ವರ್ಷ ಮತ್ತು ಗೌರಿಗೆ 46 ವರ್ಷ.

ನೋಡಿರಿ

