ಇಬ್ಬರು ಹಿಂದೂ ಪತ್ನಿಯರಿಂದ ನಟ ಆಮೀರ್‌ ಖಾನ್ ದೂರ – ಈಗ ಮೂರನೆಯಾಕೆ ಮುಸ್ಲಿಂ ಕುಟುಂಬದವರು ಅನ್ನೋದೇ ಅಭಿಮಾನಿಗಳಿಗೆ ಕುತೂಹಲ

ಇಬ್ಬರು ಹಿಂದೂ ಪತ್ನಿಯರಿಂದ ನಟ ಆಮೀರ್‌ ಖಾನ್ ದೂರ – ಈಗ ಮೂರನೆಯಾಕೆ ಮುಸ್ಲಿಂ ಕುಟುಂಬದವರು ಅನ್ನೋದೇ ಅಭಿಮಾನಿಗಳಿಗೆ ಕುತೂಹಲ

ಬಾಲಿವುಡ್ ನಟ ಆಮೀರ್ ಖಾನ್ ಈಗ ಮಗಳ ಮದುವೆ ಸಮಾರಂಭದ ಸಿದ್ಧತೆಯಲ್ಲಿದ್ದಾರೆ. ಹೀಗಿರುವಾಗಲೇ ಆಮೀರ್ ಖಾನ್ ಮೂರನೇ ಮದುವೆಯ ಬಗ್ಗೆ ಚರ್ಚೆ ಶುರುವಾಗಿದೆ. ಈಗಾಗಲೇ ತನ್ನ ಇಬ್ಬರು ಪತ್ನಿಯರಿಗೆ ವಿಚ್ಛೇದನ ನೀಡಿರುವ ಆಮೀರ್ ಖಾನ್ ಮೂರನೇ ಮದುವೆಗೆ ರೆಡಿಯಾಗಿದ್ದಾರೆ ಎನ್ನಲಾಗುತ್ತಿತ್ತು. ಈ ಹಿಂದೆ ಆಮೀರ್ ಖಾನ್ ಮದುವೆಯಾದ ಇಬ್ಬರೂ ಪತ್ನಿಯರೂ ಹಿಂದುವಾಗಿದ್ದರು. ಈಗ ಮೂರನೇ ಮದುವೆ ಮುಸ್ಲಿಂ ಕುಟುಂಬದ ಯುವತಿ ಜೊತೆ ಎಂಬುದೇ ಚರ್ಚೆಯ ವಿಚಾರವಾಗಿದೆ.

ಇದನ್ನೂ ಓದಿ: ಉದಯಪುರದಲ್ಲಿ ವಿವಾಹವಾಗಲಿದ್ದಾರೆ ಇರಾ ಖಾನ್ – ಆಮಿರ್ ಖಾನ್ ಮಗಳ ಮದುವೆಗೆ ಸಕಲ ಸಿದ್ಧತೆ

ಬಾಲಿವುಡ್ ನಟ ಆಮೀರ್ ಖಾನ್ ತನ್ನ ಇಬ್ಬರು ಪತ್ನಿಯರಿಗೂ ವಿಚ್ಛೇದನ ನೀಡಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ  ಹಾಗೂ ಎರಡನೆಯ ಪತ್ನಿ ಕಿರಣ್ ರಾವ್ ಅವರಿಂದ ಆಮೀರ್ ಖಾನ್ ದೂರವಾಗಿದ್ದಾರೆ. 2021ರಲ್ಲಿ ಆಮಿರ್ ಖಾನ್, ಕಿರಣ್ ರಾವ್ ಅವರು 15 ವರ್ಷಗಳ ದಾಂಪತ್ಯ ಜೀವನಕ್ಕೆ ವಿರಾಮ ಇಡುವುದಾಗಿ ಘೋಷಿಸಿದ್ದರು. ಇದಾದ ನಂತರ ನಟಿ ಫಾತಿಮಾ ಸನಾ ಶೇಖ್ ಹೆಸರು ಥಳಕು ಹಾಕಿಕೊಂಡಿತ್ತು. ಇವರಿಂದಲೇ ಕಿರಣ್ ರಾವ್ ಅವರಿಗೆ ಆಮೀರ್ ಖಾನ್ ವಿಚ್ಛೇದನ ನೀಡಿದ್ದಾರೆ ಎನ್ನಲಾಗಿತ್ತು. ಇದಾದ ಬಳಿಕ ಫಾತಿಮಾ ಮತ್ತು ಆಮೀರ್ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಆಮೀರ್ ಖಾನ್ ಮಗಳು ಇರಾ ಖಾನ್ ನಿಶ್ಚಿತಾರ್ಥದಂದು ಫಾತಿಮಾ ಸನಾ ಶೇಖ್ ಕೂಡ ಹಾಜರಿದ್ದರು. ಇದೀಗ ಇವರಿಬ್ಬರು ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಬಲವಾಗಿಯೇ ಕೇಳಿಬರುತ್ತಿದೆ.

ನಿತೇಶ್ ತಿವಾರಿ ನಟನೆಯ ದಂಗಲ್ ಸಿನಿಮಾ ಮೂಲಕ ಫಾತಿಮಾ ಸನಾ ಶೇಖ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಆ ನಂತರದಲ್ಲಿ ಆಮೀರ್, ಫಾತಿಮಾ ಅವರು ಡೇಟ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆಮೀರ್ ಖಾನ್ ಡಿವೋರ್ಸ್‌ಗೂ ಇದೇ ಕಾರಣ ಎನ್ನಲಾಗಿತ್ತು. ಆಮೀರ್ ಖಾನ್ ಈ ಮೊದಲು ಮದುವೆಯಾಗಿದ್ದು ಇಬ್ಬರೂ ಹಿಂದು ಯುವತಿಯರನ್ನೇ. ಈಗ ಫಾತಿಮಾ ಅವರ ಜೊತೆಗಿನ ಸಂಬಂಧದ ವಿಷಯ ತಿಳಿಯುತ್ತಲೇ ನೆಟ್ಟಿಗರು ಫಾತಿಮಾ ಅವರ ಮೂಲವನ್ನು ಕೆದಕಿದ್ದಾರೆ. ಅದರ ಪ್ರಕಾರ, ಮಾಹಿತಿ ಪ್ರಕಾರ ಫಾತಿಮಾ ಹುಟ್ಟಿದ್ದು ಹೈದರಾಬಾದ್ನಲ್ಲಿ. ಬೆಳೆದದ್ದು ಮುಂಬೈನಲ್ಲಿ. ಫಾತಿಮಾ ಅವರ ತಂದೆ ವಿಪಿನ್ ಶರ್ಮಾ ಜಮ್ಮುವಿನ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದರೆ, ತಾಯಿ ತಬಸ್ಸುಮ್ ಶ್ರೀನಗರದ ಮುಸ್ಲಿಂ ಕುಟುಂಬಕ್ಕೆ ಸೇರಿದವರು. ಫಾತಿಮಾ ಅವರ ತಂದೆಯ ಧರ್ಮ ಪಾಲಿಸದೇ ತಾಯಿಯ ಧರ್ಮ ಫಾಲೋ ಮಾಡುತ್ತಿದ್ದಾರೆ. ಇಸ್ಲಾಂ ಧರ್ಮದಲ್ಲಿ ನಂಬಿಕೆ ಇಟ್ಟಿದ್ದಾರೆ. ಆಮೀರ್ ಖಾನ್ ಮತ್ತು ಫಾತಿಮಾ ಸನಾ ಶೇಖ್ ಎರಡು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಜೋಡಿ ದಂಗಲ್ ಮತ್ತು ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಆಮೀರ್ ಖಾನ್ ಶೀಘ್ರದಲ್ಲೇ ಮತ್ತೊಂದು ಚಿತ್ರದಲ್ಲಿ ಕೆಲಸ ಮಾಡಬಹುದು ಮತ್ತು ಈ ಚಿತ್ರದಲ್ಲಿ ನಟ ತನ್ನ ದಂಗಲ್  ಸಹನಟಿ ಫಾತಿಮಾ ಸನಾ ಶೇಖ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Sulekha