ದೇಶದಲ್ಲಿ ಹೆಚ್ಚಾಯ್ತು ಕೊರೊನಾ ಪಾಸಿಟಿವ್  – 20 ಸಾವಿರ ಗಡಿದಾಟಿದ ಸಕ್ರಿಯ ಪ್ರಕರಣ

ದೇಶದಲ್ಲಿ ಹೆಚ್ಚಾಯ್ತು ಕೊರೊನಾ ಪಾಸಿಟಿವ್  – 20 ಸಾವಿರ ಗಡಿದಾಟಿದ ಸಕ್ರಿಯ ಪ್ರಕರಣ

ನವದೆಹಲಿ: ದೇಶದಲ್ಲಿ ಕಳೆದ ಕೆಲವು ದಿನದಿಂದ ಕೊರೊನಾ ಪಾಸಿಟಿವ್ ಕೇಸ್ ಹೆಚ್ಚಾಗುತ್ತಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,641 ಹೊಸ ಪ್ರಕರಣಗಳು ಪತ್ತೆಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 20,219ಕ್ಕೆ ತಲುಪಿದೆ.

ಇನ್ನು ಕರ್ನಾಟಕದಲ್ಲೂ ಕೊರೊನಾ ಪಾಸಿಟಿವ್ ಕೇಸ್ ಹೆಚ್ಚಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,400ಕ್ಕೆ ತಲುಪಿದೆ. ಇದರಲ್ಲಿ ಶೇಕಡಾ 59 ರಷ್ಟು ಪಾಸಿಟಿವ್ ಕೇಸ್ ಬೆಂಗಳೂರಿನಲ್ಲಿ ಪತ್ತೆಯಾಗಿದೆ ಅಂತಾ ವರದಿಯಾಗಿದೆ.

ಇದನ್ನೂ ಓದಿ: ಲವ್ ಮಾಡಲು 1 ವಾರ ರಜೆ ನೀಡಿದ 9 ಕಾಲೇಜುಗಳು! –  ಕಾರಣ ಏನು ಗೊತ್ತಾ?

ಇದರೊಂದಿಗೆ ದೇಶದಲ್ಲಿ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 4,47,26,246ಕ್ಕೆ ಏರಿಕೆಯಾಗಿದೆ. ಅಲ್ಲದೇ, ಕೋವಿಡ್ ನಿಂದ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ 5,30,892ಕ್ಕೆ ಏರಿಕೆಯಾಗಿದೆ. ಒಟ್ಟು ಚೇತರಿಸಿಕೊಂಡವರ ಸಂಖ್ಯೆ 4,41,75,135ಕ್ಕೆ ತಲುಪಿದೆ.

ಇನ್ನು ದೇಶದಲ್ಲಿ ಒಂದೇ 1,33,153 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ  92,18,09,525 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

suddiyaana