ಸೂಪರ್ ಸ್ಟಾರ್ ರಜನಿಕಾಂತ್ ಗೆ ಜೊತೆಯಾದ ಜ್ಞಾನವೇಲ್ – 171ನೇ ಚಿತ್ರಕ್ಕೆ ಜೈ ಭೀಮ್ ಖ್ಯಾತಿಯ ನಿರ್ದೇಶಕನಿಂದ ಆ್ಯಕ್ಷನ್ ಕಟ್

ಸೂಪರ್ ಸ್ಟಾರ್ ರಜನಿಕಾಂತ್ ಗೆ ಜೊತೆಯಾದ ಜ್ಞಾನವೇಲ್ – 171ನೇ ಚಿತ್ರಕ್ಕೆ ಜೈ ಭೀಮ್ ಖ್ಯಾತಿಯ ನಿರ್ದೇಶಕನಿಂದ ಆ್ಯಕ್ಷನ್ ಕಟ್

ಸೂಪರ್ ಸ್ಟಾರ್ ರಜನಿಕಾಂತ್ ಅವ್ರಿಗೆ ಸೂಪರ್ ಹಿಟ್ ಚಿತ್ರ ಜೈ ಭೀಮ್ ಖ್ಯಾತಿಯ ಟಿ ಜೆ ಜ್ಞಾನವೇಲ್‌ ಆ್ಯಕ್ಷನ್ ಕಟ್ ಹೇಳುವುದು ಬಹುತೇಕ ಖಚಿತವಾಗಿದೆ. ಅದೂ ಕೂಡಾ ತಲೈವಾ ನಟನೆಯ 171ನೇ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಕುತೂಹಲ ಇತ್ತು. ಹೀಗಿರುವಾಗಲೇ ಸೂಪರ್ ಸ್ಟಾರ್ ರಜನಿಕಾಂತ್ ಅವರ 171 ಚಿತ್ರವನ್ನು ಟಿ ಜೆ ಜ್ಞಾನವೇಲ್‌ ನಿರ್ದೇಶನ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಿದೆ. ಟಿ ಜೆ ಜ್ಞಾನವೇಲ್‌ ಹೇಳಿರುವ ಕಥೆಯನ್ನು ರಜನಿಕಾಂತ್ ಅವರು ಇಷ್ಟಪಟ್ಟಿದ್ದು, ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ. ಆದರೆ ಇದರ ಬಗ್ಗೆ ನಿರ್ಮಾಣ ಸಂಸ್ಥೆ ಖಚಿತಪಡಿಸಬೇಕಿದೆ. ಯಾಕೆಂದರೆ, ಸದ್ಯ ರಜನಿಕಾಂತ್ ಕಾಲ್‌ಶೀಟ್ ಅನ್ನು ಸನ್‌ ಪಿಕ್ಚರ್ಸ್, ಲೈಕಾ ಪ್ರೊಡಕ್ಷನ್ಸ್ ಮತ್ತು ಎಜಿಎಸ್ ಎಂಟರ್‌ಟೇನ್‌ಮೆಂಟ್ ಪಡೆದುಕೊಂಡಿವೆ. ಈ ಮೂರರಲ್ಲಿ ಯಾರು ರಜನಿಕಾಂತ್ ಜೊತೆಗೆ ಸಿನಿಮಾ ಮಾಡುತ್ತಾರೆ ಅನ್ನೋದು ಸದ್ಯದ ಕುತೂಹಲ.

ಇದನ್ನೂ ಓದಿ:  ‘ನನ್ನ ಕೈ ಸನ್ನೆ ಕೆಲವರಿಗೆ ಇಷ್ಟವಾಗದೇ ಇರಬಹುದು’ – ನಟಿ ರಶ್ಮಿಕಾ ಮಂದಣ್ಣ

ಸದ್ಯ ನಿರ್ದೇಶಕ ನೆಲ್ಸನ್‌ ದಿಲೀಪ್ ಕುಮಾರ್ ಜತೆ ಜೈಲರ್‌ ಸಿನಿಮಾ ಮಾಡುತ್ತಿರುವ ರಜನಿಕಾಂತ್, ಅದರ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಇದಾದ ಮೇಲೆ ಅವರ 170 ಸಿನಿಮಾವನ್ನು ನಿರ್ಮಾಣ ಮಾಡುವುದು ಲೈಕಾ ಪ್ರೊಡಕ್ಷನ್ಸ್ ಎಂದು ಗೊತ್ತಾಗಿದೆ. ಇದೀಗ ರಜನಿಕಾಂತ್ ಅವರ 171ನೇ ಸಿನಿಮಾ ಕೂಡಾ ಫೈನಲ್ ಆಗುತ್ತಿದೆ. ಮೇಲೆ ‘ಡಾನ್’ ಸಿನಿಮಾ ಮಾಡಿದ್ದ ಸಿಬಿ ಚಕ್ರವರ್ತಿ ಜೊತೆಗೆ ರಜನಿಕಾಂತ್ ಸಿನಿಮಾ ಮಾಡುವುದು ಖಚಿತವಾಗಿದೆ.

suddiyaana