ಹೆಣ್ಣು ನೋಡಲು ಹೊರಟವರು ವಿಧಿಯಾಟಕ್ಕೆ ಬಲಿ! – ಜವರಾಯನ ಅಟ್ಟಹಾಸಕ್ಕೆ ವರ, ಆತನ ಅಪ್ಪ – ಅಮ್ಮ ಸಾವು!

ಮಕ್ಕಳಿಗೆ ಮದುವೆ ಮಾಡಿಸಬೇಕು. ಅವರು ಖುಷಿಯಾಗಿ ಬಾಳನಬೇಕು ಅನ್ನೋದು ಹೆತ್ತವರ ಕನಸು. ಇದೀಗ ಇಲ್ಲೊಂದು ಕಡೆ ಕೂಡ ಹೆತ್ತವರು ಮಗನಿಗೆ ಮದುವೆ ಮಾಡಿಸಲು ಮುಂದಾಗಿದ್ರು. ಹೀಗಾಗಿ ಹೆಣ್ಣು ನೋಡಲು ಹೊರಟಿದ್ರು. ಆದ್ರೆ ವಿಧಿಯ ಆಟವೇ ಬೇರೆಯಾಗಿತ್ತು. ವಧು ನೋಡಲು ಹೊರಟವರು ಈಗ ಮಸಣ ಸೇರಿದ್ದಾರೆ. ಹೆಣ್ಣು ನೋಡಲು ಹೊರಟವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಆದಿ ಮನೆಯಲ್ಲಿ ಭಾಗ್ಯಗೆ ಟಾರ್ಚರ್.. 2ನೇ ಮದ್ವೆಯಲ್ಲೂ ನರಕ ದರ್ಶನ! – ಕುಸುಮಾ ಸೊಸೆಗೆ ಇದೆಲ್ಲಾ ಬೇಕಿತ್ತಾ?
ಈ ಹೃದಯ ವಿದ್ರಾವಕ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಾಣಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಂಭವಿಸಿದೆ. ವಧು ನೋಡಲು ಹೋಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ವರ, ಹಾಗೂ ಆತನ ತಂದೆ- ತಾಯಿ ಕೂಡ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ಕಿತ್ನೂರು ಗ್ರಾಮದ ಕೊಟ್ರೇಶ್‌ಗೆ ಮದ್ವೆ ಮಾಡೋದಕ್ಕೆ ಮನೆಯವರು ಮುಂದಾಗಿದ್ದರು. ಹೆಣ್ಣು ನೋಡುವ ಶಾಸ್ತ್ರವನ್ನೂ ಏರ್ಪಡಿಸಿದ್ದರು. ಕೊಟ್ರೇಶ್ ಬೈಕ್‌ನಲ್ಲಿ ತಂದೆ ತಾಯಿಯನ್ನು ಕೂರಿಸಿಕೊಂಡು ಹೆಣ್ಣಿನ ಮನೆಗೆ ತೆರಳುತ್ತಿದ್ದರು. ಇನ್ನೇನು ಸ್ವಲ್ಪವೇ ದೂರ ಹೋದರೆ ಹೆಣ್ಣಿನ ಮನೆ ಎಂಬಷ್ಟರಲ್ಲಿ ಜವರಾಯ ಬಂದೆರಗಿದ್ದಾನೆ. ಬೆಳ್ಳುಳ್ಳಿ ತುಂಬಿಕೊಂಡು ಎದುರಿನಿಂದ ಬಂದ ಲಾರಿ ನಿಯಂತ್ರಣ ಕಳೆದುಕೊಂಡು ಬೈಕ್, ಕಾರು ಹಾಗೂ KSRTC ಬಸ್‌ಗೆ ಡಿಕ್ಕಿ ಹೊಡೆದು ಕಂದಕಕ್ಕೆ ಉರುಳಿ ಬಿದ್ದಿದೆ. ಲಾರಿ ಗುದ್ದಿದ ರಭಸಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದ ಮೂವರು ಹಾಗೂ ಇನ್ನೂ ಒಬ್ಬರು ಜೀವ ಬಿಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ವಿಜಯನಗರ ಎಸ್ಪಿ ಜಾಹ್ನವಿ ಎಸ್ ಹಾಗೂ ಮರಿಯಮ್ಮನ ಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಲ್ಲಿ ಬಸ್‌ನಲ್ಲಿದ್ದ ಕೆಲವರಿಗೂ ಗಾಯಗಳಾಗಿವೆ. ಗಾಯಾಳುಗಳೆಲ್ಲರನ್ನೂ ಹೊಸಪೇಟೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ನೋಡಿರಿ

