ಬಿಎಂಟಿಸಿ ವೋಲ್ವೋ ಬಸ್​​​​​ನಿಂದ ಸರಣಿ ಅಪಘಾತ – ಬಿಎಂಟಿಸಿ ಚಾಲಕನ ಯಡವಟ್ಟಿಗೆ ಬೈಕ್, ಕಾರು ಜಖಂ

ಬಿಎಂಟಿಸಿ ವೋಲ್ವೋ ಬಸ್​​​​​ನಿಂದ ಸರಣಿ ಅಪಘಾತ – ಬಿಎಂಟಿಸಿ ಚಾಲಕನ ಯಡವಟ್ಟಿಗೆ ಬೈಕ್, ಕಾರು ಜಖಂ

ಹೆಬ್ಬಾಳ ಫ್ಲೈಓವರ್‌ನಲ್ಲಿ ಬೆಚ್ಚಿಬೀಳಿಸುವ ಘಟನೆ ಸೋಮವಾರ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಬಿಎಂಟಿಸಿ ವೋಲ್ವೋ ಬಸ್‌ವೊಂದು ಬೈಕ್‌, ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಇದರ ಭಯಾನಕ ವಿಡಿಯೋ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ಮುಡಾ ಹಗರಣ ಸಂಬಂಧ ಸಿಎಂ ಸಿದ್ಧರಾಮಯ್ಯ ವಿರುದ್ಧ ಖಾಸಗಿ ದೂರು – ಇಂದು ಕೋರ್ಟ್‌ನಲ್ಲಿ ಭವಿಷ್ಯ!

ಬಿಎಂಟಿಸಿ ವೋಲ್ವೋ ಬಸ್ ಬೆಂಗಳೂರು ಅಂತಾರಾಷ್ಟ್ರೀಯ ಏರ್ಪೋರ್ಟ್ ನಿಂದ ಎಚ್ಎಸ್ಆರ್ ಲೇಔಟ್ ಕಡೆ ಸಂಚಾರ ಮಾಡುತ್ತಿತ್ತು. ಈ ವೇಳೆ ಹೆಬ್ಬಾಳ ಫ್ಲೈ ಓವರ್ ಮೇಲೆ ವೋಲ್ವೋ ಬಸ್‌, ಬೈಕ್‌, ಕಾರಿಗೆ ಗುದ್ದಿದೆ. ಬಸ್ ಗುದ್ದಿದ ಪರಿಣಾಮ ಕಾರು, ಬೈಕ್‌ ಜಖಂ ಆಗಿದೆ.  ವಾಹನ ಸವಾರರು ರಸ್ತೆಯಲ್ಲಿ ಚಿರಾಡಿದ್ದಾರೆ.

ಹೆಬ್ಬಾಳದ ಎಸ್.ಟಿ ಮಾಲ್ ಬಳಿ ಬಿಎಂಟಿಸಿ ಚಾಲಕ ರಾಜ ಕುಮಾರ್ ನಾಲ್ಕು ಟೂ ವೀಲರ್, ನಾಲ್ಕು ಕಾರುಗಳಿಗೆ ಗುದ್ದಿಸಿದ್ದರು. ಬಿಎಂಟಿಸಿ ವೋಲ್ವೋ ಬಸ್ ನಂ- KA57F-1794 ಇದಾಗಿದೆ. ಘಟನೆಯಲ್ಲಿ ಒಬ್ಬ ವಾಹನ ಸವಾರನ ಕಾಲಿಗೆ ತೀವ್ರವಾಗಿ ಗಾಯವಾಗಿದೆ. ಘಟನೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ.

Shwetha M

Leave a Reply

Your email address will not be published. Required fields are marked *