ಸೋರುತಿಹುದು ವಂದೇಭಾರತ್‌ ರೈಲು! – ಪ್ರಯಾಣಿಕರಿಗೆ ಶವರ್‌ ಬಾತ್‌

ಸೋರುತಿಹುದು ವಂದೇಭಾರತ್‌ ರೈಲು! – ಪ್ರಯಾಣಿಕರಿಗೆ ಶವರ್‌ ಬಾತ್‌

ವಂದೇಭಾರತ್‌ ಎಕ್ಸ್ ಪ್ರೆಸ್‌ ರೈಲು ಅವಾಂತಗಳ ಗೂಡಾಗಿದೆ. ರೈಲು ಸೇವೆ ಆರಂಭವಾದಾಗಿಂದ ಒಂದಲ್ಲ ಒಂದು ಸಮಸ್ಯೆ ಕಾಣಿಸಿಕೊಳ್ಳುತ್ತಲೇ ಇದೆ. ಸಾಕಷ್ಟು ಬಾರಿ ಜಾನುವಾರುಗಳು ರೈಲಿಗೆ ಢಿಕ್ಕಿಯಾಗಿ ಹಾನಿಯಾಗಿತ್ತು. ಇದೀಗ ರೈಲಿನಲ್ಲಿ ಹೊಸ ಸಮಸ್ಯೆ ಎದುರಾಗಿದೆ.

ವಂದೇಭಾರತ್‌ ರೈಲು ಸಮಸ್ಯೆಗಳ ಗೂಡಾಗಿದೆ. ರೈಲು ಸೇವೆ ಆರಂಭವಾದಾಗಿಂದ ಪ್ರಾಣಿಗಳು ಡಿಕ್ಕಿ ಹೊಡೆದು ಹಾನಿಗೀಡಾಗುತ್ತಿದೆ. ಇದೀಗ ರೈಲಿನಲ್ಲಿ  ಎಸಿನೀರು ಸೋರಿಕೆಯಾಗುತ್ತಿದೆ. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದ್ದು, ನೆಟ್ಟಿಗರು ಅಧಿಕಾರಿಗಳ ವಿರುದ್ದ ಕಿಡಿಕಾರುತ್ತಿದ್ದಾರೆ.

ಇದನ್ನೂ ಓದಿ:ಈ ಜನರಿಗೆ ಹಾಲಿವುಡ್‌ ಸ್ಮೈಲ್‌ ಬೇಕಂತೆ! – ಒಂದು ಗಂಟೆಯ ಕ್ಲಾಸ್‌ ಗೆ 4,500 ರೂಪಾಯಿ.. 

@VinayDokania ಎಂಬ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್‌ ಮಾಡಲಾಗಿದೆ. ಕೇಳಿರಿ.. ಕೇಳಿರಿ.. ಭಾರತೀಯ ರೈಲು ಪ್ರಯಾಣಿಕರಿಗೆ ಶುಭ ಸುದ್ದಿ. ಬೆಳಗ್ಗೆ 6ಕ್ಕೆ ಶುರುವಾಗುವ ವಂದೇಭಾರತ್ ಎಕ್ಸ್​ಪ್ರೆಸ್​ನಲ್ಲಿ ಪ್ರಯಾಣಿಸುವವರಿಗೆ ಉಚಿತವಾಗಿ ಮತ್ತು ಕಡ್ಡಾಯವಾಗಿ ಶವರ್ ಸೌಲಭ್ಯ. ಮೋದಿಯವರ ನಾಯಕತ್ವದಲ್ಲಿ ಆರಂಭಗೊಂಡ ಈ ದೂರದೃಷ್ಟಿ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುವಂಥವರಾಗಿ ಎಂದು ಬರೆಯಲಾಗಿದೆ.

ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಪ್ರತ್ಯೇಕ ಭತ್ಯೆ ಭರಿಸಬೇಕೇ ಅಥವಾ ಪ್ಯಾನ್​, ಆಧಾರ್​ ಕಾರ್ಡ್​ ಲಿಂಕ್ ಮಾಡಿದರೆ ಸಾಕೇ? ಎಂದು ಕೆಲವರು ಕಮೆಂಟ್‌ ಮಾಡಿದ್ದಾರೆ. ಅಯ್ಯೋ ಮೋದಿಯವರಿಗೆ ಇಂಥಾ ಐಡಿಯಾಗಳನ್ನು ಕೊಡಬೇಡಿ. ಮೊದಲೇ ಅವರು ಅತ್ಯುತ್ತಮ ದಾರ್ಶನಿಕರು, ಈ ಯೋಜನೆಯನ್ನು ಜಾರಿ ತಂದಲ್ಲಿ ಕೃತಜ್ಞತೆ ಸಲ್ಲಿಸಬೇಕಾಗುತ್ತದೆ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.

ಫಸ್ಟ್​ ಕ್ಲಾಸ್​ ಬೋಗಿಗಳನ್ನು ಬುಕ್​ ಮಾಡಿನೋಡಿ, ಅಲ್ಲಿ ಟಬ್​ಗಳನ್ನೇ ಅಳವಡಿಸಲಾಗಿದೆ ಎಂದು ಒಬ್ಬರು ಹೇಳಿದ್ದಾರೆ. ಹೌದು ಕಳೆದ ತಿಂಗಳು ನಾವು ವಂದೇಭಾರತ್​ ರೈಲಿನಲ್ಲಿ ಪ್ರಯಾಣಿಸಿದಾಗ ಎಸಿಯಿಂದ ನೀರು ಸೋರುತ್ತಿದೆ ಎಂದು ಎಕ್ಸಿಕ್ಯೂಟಿವ್​ ಕ್ಲಾಸ್​ನಿಂದ ಯಾರೋ ಸ್ಪೀಕರ್​ನಲ್ಲಿ ಕೂಗುತ್ತಿರುವುದು ಕೇಳಿಸಿತ್ತು ಎಂದಿದ್ದಾರೆ ಮತ್ತೊಬ್ಬರು.

suddiyaana