ಕೊಹ್ಲಿಯನ್ನೂ ಕೆಣಕಿದ್ದ ಅಬ್ರಾರ್ – ಸಿಕ್ಸ್ ಸಿಡಿಸುವಂತೆ ಫೀಲ್ಡ್ನಲ್ಲೇ ಸವಾಲ್

ಫೆಬ್ರವರಿ 23ರಂದು ದುಬೈನಲ್ಲಿ ಭಾರತ ವರ್ಸಸ್ ಪಾಕಿಸ್ತಾನ ನಡುವೆ ಪಂದ್ಯ ನಡೆದಿತ್ತು. ಟೀಂ ಇಂಡಿಯಾ ಪರ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಓಪನರ್ಸ್ ಆಗಿ ಕಣಕ್ಕಿಳಿದಿದ್ರು. ರೋಹಿತ್ ಶರ್ಮಾ 20 ರನ್ಗಳಿಗೆ ಔಟಾಗಿದ್ರು. ಆ ನಂತ್ರ ಗಿಲ್ ಮತ್ತು ಕೊಹ್ಲಿ ಒಳ್ಳೆ ಜೊತೆಯಾಟವಾಡ್ತಿದ್ರು. ಈ ವೇಳೆ 46 ರನ್ ಗಳಿಸಿದ್ದ ಶುಭ್ಮನ್ ಗಿಲ್ ರನ್ನು ಪಾಕ್ನ ಸ್ಪಿನ್ ಬೌಲರ್ ಅಬ್ರಾರ್ ಅಹ್ಮದ್ ಕ್ಲೀನ್ ಬೌಲ್ಡ್ ಮಾಡಿದ್ರು. ಗಿಲ್ ವಿಕೆಟ್ ಬೀಳ್ತಿದ್ದಂತೆ ವಿಚಿತ್ರವಾಗಿ ಸೆಂಡ್ ಆಫ್ ಕೊಟ್ಟಿದ್ರು. ಕುತ್ತಿಗೆ ಮತ್ತು ಕಣ್ಸನ್ನೆಲ್ಲೇ ಪೆವಿಲಿಯನ್ಗೆ ನಡಿ ನಡಿ ಎನ್ನುವಂತೆ ಅಣಕಿಸಿದ್ದು, ಅಬ್ರಾರ್ ಹುಚ್ಚಾಟಕ್ಕೆ ಗಿಲ್ ಗುರಾಯಿಸುತ್ತಲೇ ಹೊರ ನಡೆದಿದ್ರು. ಈ ಇನ್ಸಿಡೆಂಟ್ ಆಗಿ 2 ವಾರಗಳ ಬಳಿಕ ಅದೇ ಅಬ್ರಾರ್ ಮತ್ತೊಂದು ಶಾಕಿಂಗ್ ವಿಚಾರ ಬಾಯ್ಬಿಟ್ಟಿದ್ದಾರೆ.
ಇದನ್ನೂ ಓದಿ : ಪಾಕ್‌ನಲ್ಲಿ ಉ*ಗ್ರರ ಅಟ್ಟಹಾಸ! ಸ್ಫೋಟಕ ತುಂಬಿದ ಕಾರಿನಿಂದ ಬ್ಲಾಸ್ಟ್!!
ಪಾಕಿಸ್ತಾನದ 26 ವರ್ಷದ ಲೆಗ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಗೆ ತನ್ನ ಲೈಫಲ್ಲಿ ಒಂದು ಸಲನಾದ್ರೂ ಭಾರತದ ವಿರುದ್ಧ ಹಾಗೇ ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡ್ಬೇಕು ಅನ್ನೋದು ಆತನ ಕನಸಾಗಿತ್ತಂತೆ. ಇದನ್ನ ತನ್ನ ದೇಶದ ಸಹ ಆಟಗಾರರ ಬಳಿಯೂ ಸಾಕಷ್ಟು ಸಲ ಹೇಳಿಕೊಂಡಿದ್ರಂತೆ. 2023 ರ ODI ವಿಶ್ವಕಪ್ ಮತ್ತು ನ್ಯೂಯಾರ್ಕ್‌ನಲ್ಲಿ ನಡೆದ T20 ವಿಶ್ವಕಪ್ ಪಂದ್ಯಗಳ ವೇಳೆ ಅಬ್ರಾರ್ ತಂಡದಲ್ಲಿ ಚಾನ್ಸ್ ಸಿಕ್ಕಿರಲಿಲ್ಲ. ಆದ್ರೆ ಚಾಪಿಯನ್ಸ್ ಟ್ರೋಫಿಯಲ್ಲಿ ಆ ಅವಕಾಶ ಸಿಕ್ಕಿತ್ತು. ಅದನ್ನ ಸರಿಯಾಗೇ ಬಳಸಿಕೊಂಡ ಅಬ್ರಾರ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದದ್ರು. ಹತ್ತು ಓವರ್‌ಗಳಲ್ಲಿ ಕೇವಲ 28 ರನ್‌ಗಳನ್ನು ಬಿಟ್ಟುಕೊಟ್ಟು ಒಂದು ವಿಕೆಟ್ ಪಡೆದಿದ್ರು. ಅದ್ರಲ್ಲೂ ಅಬ್ರಾರ್ ಬೌಲಿಂಗ್‌ನಲ್ಲಿ ಕೊಹ್ಲಿ ಕೂಡ ನಿಧಾನಗತಿಯಲ್ಲಿ ರನ್ ಗಳಿಸಿದ್ರು. ಇದೇ ವೇಳೆ ನಡೆದ ಘಟನೆಯೊಂದನ್ನ ಅಬ್ರಾರ್ ಈಗ ಬಾಯ್ಬಿಟ್ಟಿದ್ದಾರೆ.
ಭಾರತ vs ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆ ವಿರಾಟ್ ಕೊಹ್ಲಿಗೆ ಸಿಕ್ಸರ್ ಹೊಡೆಯುವಂತೆ ಸವಾಲು ಹಾಕಿದ್ದಾರೆ ಅಬ್ರಾರ್ ಅಹ್ಮದ್ ಹೇಳಿದ್ದಾರೆ. ಕೊಹ್ಲಿಗೆ ಬೌಲಿಂಗ್ ಮಾಡುವ ನನ್ನ ಬಾಲ್ಯದ ಕನಸು ದುಬೈನಲ್ಲಿ ನನಸಾಗಿದೆ. ಅದು ಒಂದು ದೊಡ್ಡ ಸವಾಲಾಗಿತ್ತು. ಅದೇ ಪಂದ್ಯದಲ್ಲೇ ನಾನು ಅವ್ರನ್ನ ಕೀಟಲೆ ಮಾಡೋ ಅವಕಾಶವೂ ಸಿಕ್ಕಿತು. ನನ್ನ ಬೌಲಿಂಗ್‌ನಲ್ಲಿ ಸಿಕ್ಸರ್ ಹೊಡೆಯಲು ಕೇಳಿದೆ. ಆದರೆ ಅವರು ಕೋಪಗೊಳ್ಳಲಿಲ್ಲ. ನಿಜಕ್ಕೂ ಕೊಹ್ಲಿ ಗ್ರೇಟ್ ಬ್ಯಾಟ್ಸ್ಮನ್ ಅಂತಾ ಅಬ್ರಾರ್ ಟೆಲಿಕಾಂ ಏಷ್ಯಾ ಸ್ಪೋರ್ಟ್ಸ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಹಾಗೇ ಪಂದ್ಯದ ಬಳಿಕ ಕೊಹ್ಲಿ ತನ್ನ ಚೆನ್ನಾಗಿ ಬೌಲಿಂಗ್ ಮಾಡಿದ್ರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಖುಷಿಗೊಂಡಿದ್ದಾಗಿ ಹೇಳಿದ್ದಾರೆ. ಇದೇ ವೇಳೆ ವಿರಾಟ್ ಕೊಹ್ಲಿಯವ್ರ ಫಿಟ್ನೆಸ್ ಬಗ್ಗೆಯೂ ಅಬ್ರಾರ್ ಹಾಡಿ ಹೊಗಳಿದ್ದಾರೆ. ಕೊಹ್ಲಿಯವ್ರ ಫಿಟ್ನೆಸ್ ಅತ್ಯುತ್ತಮವಾಗಿದೆ. ಅವರು ವಿಕೆಟ್ ನಡುವೆ ಓಡುವ ರೀತಿ ತುಂಬಾನೇ ಚೆನ್ನಾಗಿರುತ್ತೆ. ಇದೇ ಕಾರಣಕ್ಕೆ ಅವ್ರನ್ನ ಗ್ರೇಟ್ ಕ್ರಿಕೆಟ್ ಆಗುವಂತೆ ಮಾಡಿದೆ ಎಂದಿದ್ದಾರೆ. ಇನ್ನು ಕೊಹ್ಲಿ ಈ ಪಂದ್ಯದಲ್ಲಿ ಅಬ್ರಾರ್ ಅವರ ಬೌಲಿಂಗ್‌ನಲ್ಲಿ 16 ರನ್‌ಗಳನ್ನು ಗಳಿಸಿದ್ರು. ಒಟ್ಟಾರೆಯಾಗಿ 111 ಎಸೆತಗಳಲ್ಲಿ 100 ರನ್‌ಗಳನ್ನ ಬಾರಿಸೋ ಮೂಲಕ ಸೆಂಚುರಿ ಸಿಡಿಸಿದ್ರು.
ಶುಭ್ಮನ್ ಗಿಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಬಳಿಕ ಅಬ್ರಾರ್ ಅಹ್ಮದ್ ವರ್ತನೆಗೆ ಪಾಕಿಸ್ತಾನದ ಮಾಜಿ ಆಟಗಾರರು ಸೇರಿದಂತೆ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದರು. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ವಿಪರೀತ ಟ್ರೋಲ್ಗೆ ಒಳಗಾಗಿದ್ದ ಅಬ್ರಾರ್ ಅಹ್ಮದ್ ಇದೀಗ ತಮ್ಮ ನಡೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಗಿಲ್ ಅವರನ್ನು ಔಟ್ ಮಾಡಿ ನಾನು ಸಂಭ್ರಮಿಸಿದ್ದು ನನ್ನ ಶೈಲಿಯಾಗಿತ್ತು. ಅಂದರೆ ನಾನು ವಿಕೆಟ್ ಸಿಕ್ಕಾಗ ಸಂಭ್ರಮಿಸುವುದೇ ಹಾಗೆ. ಯಾರನ್ನೂ ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಹೀಗಾಗಿ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಪಾಕಿಸ್ತಾನ್ ಸ್ಪಿನ್ನರ್ ಹೇಳಿದ್ದಾರೆ. ಒಟ್ನಲ್ಲಿ ಗಿಲ್ ಔಟ್ ಮಾಡಿ ಅತಿರೇಖವಾಗಿ ಆಡಿದ್ದ ಗಿಲ್ ಈಗ ಕೊಹ್ಲಿ ಬಗ್ಗೆ ಗುಣಗಾನ ಮಾಡಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.