ಸ್ಟೇಡಿಯಂ ಗಳಲ್ಲಿ ಮುಗಿಯದ ಕಾಮಗಾರಿ  – ಚಾಂಪಿಯನ್ಸ್ ಟ್ರೋಫಿ PAKನಿಂದ ಶಿಫ್ಟ್?

ಸ್ಟೇಡಿಯಂ ಗಳಲ್ಲಿ ಮುಗಿಯದ ಕಾಮಗಾರಿ  – ಚಾಂಪಿಯನ್ಸ್ ಟ್ರೋಫಿ PAKನಿಂದ ಶಿಫ್ಟ್?

ಏಕದಿನ ಮಾದರಿಯಲ್ಲಿ ನಡೆಯಲ್ಲಿರುವಂತಹ ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯ ಪಾಕಿಸ್ತಾನದಲ್ಲಿ ನಡೆಯಲಿದೆ. ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ಪಾಕಿಸ್ತಾನದ ಲಾಹೋರ್, ರಾವಲ್ಪಿಂಡಿ ಮತ್ತು ಕರಾಚಿಯ 3 ಕ್ರೀಡಾಂಗಣಗಳಲ್ಲಿ ನಡೆಸೋಕೆ ತೀರ್ಮಾನ ಮಾಡಲಾಗಿದೆ. ಬಟ್ ಅಚ್ಚರಿಯ ವಿಷ್ಯ ಏನಪ್ಪ ಅಂದ್ರೆ ಈ ಮೂರು ಕ್ರೀಡಾಂಗಣಗಳು ಇನ್ನೂ ಸಿದ್ಧವಾಗಿಲ್ಲ. ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಉಳಿದಿರೋದು ಜಸ್ಟ್ 40 ದಿನಗಳು ಮಾತ್ರ. ಪಾಕಿಸ್ತಾನದ ಈ ಮೂರು ಕ್ರೀಡಾಂಗಣಗಳಲ್ಲೂ ನಿರ್ಮಾಣ ಕಾರ್ಯ ಇನ್ನೂ ನಡೆಯುತ್ತಿದೆ.

ಇದನ್ನೂ ಓದಿ : ಸ್ಟಾರ್ ಡಂ ಬಿಟ್ಟು ಆಡುವ ಆಟಗಾರರಿಗೆ ಅವಕಾಶ ಕೊಡ್ತಾರಾ? -36 ಆಟಗಾರರ ಶಾರ್ಟ್ ಲಿಸ್ಟ್ ರೆಡಿ ಮಾಡಿದ ಬಿಸಿಸಿಐ!

ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಯೋಜನೆ ಮೇಲೆ ಕಣ್ಣಿಟ್ಟಿರುವಂಥ ಐಸಿಸಿ ಅಧಿಕಾರಿಗಳು ಮುಂದಿನ ವಾರ  ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್ ಸ್ಟೇಡಿಯಂಗಳನ್ನು ಪರಿಶೀಲನೆ ನಡೆಸಲಿದ್ದಾರೆ. ಸರಿಯಾದ ಸಮಯಕ್ಕೆ ಕ್ರೀಡಾಂಗಣವನ್ನು ಸಿದ್ಧಪಡಿಸುವಂತೆ ಪಿಸಿಬಿಗೆ ಗಡುವು ನೀಡಲಾಗಿದೆ. ಪಿಸಿಬಿ ಈ ಗಡುವಿನೊಳಗೆ ಕ್ರೀಡಾಂಗಣಗಳನ್ನು ಸಿದ್ಧಪಡಿಸದೇ ಇದ್ರೆ ಇಡೀ ಪಂದ್ಯಾವಳಿಯನ್ನು ಪಾಕಿಸ್ತಾನದಿಂದ ಸ್ಥಳಾಂತರ ಮಾಡಬಹುದು. ಹೀಗೇನಾದ್ರೂ ಆದ್ರೆ ಸಂಪೂರ್ಣ ಚಾಂಪಿಯನ್ಸ್ ಟ್ರೋಫಿ ಯುಎಇಯಲ್ಲಿ ಆಯೋಜನೆಯಾಗಲಿದೆ. ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಅದೆಷ್ಟು ಕೆಳಮಟ್ಟಕ್ಕೆ ಇಳಿದಿದೆ ಅನ್ನೋದು ಇಡೀ ಜಗತ್ತಿಗೇ ಗೊತ್ತಿದೆ. ಅಲ್ಲಿನ ಜನ ಒಂದೊತ್ತಿನ ಊಟಕ್ಕೂ ಪರದಾಡ್ತಿದ್ದಾರೆ. ಇಂಥಾದ್ರಲ್ಲೇ ಇರೋ ಬರೋ ದುಡ್ಡನ್ನೆಲ್ಲಾ ಸುರಿದು ಕ್ರೀಡಾಂಗಣಗಳನ್ನ ರೆಡಿ ಮಾಡ್ತಿದೆ. ಆದ್ರೆ ಗಡಾಫಿ ಸ್ಟೇಡಿಯಂ ಇನ್ನೂ ಸಿದ್ಧವಾಗಿಲ್ಲ. ಅಲ್ಲಿ ಯಾವುದೇ ಶೆಡ್‌ಗಳನ್ನು ಅಳವಡಿಸಲಾಗಿಲ್ಲ. ಯಾವುದೇ ಫ್ಲಡ್ ಲೈಟ್‌ಗಳನ್ನು ಅಳವಡಿಸಲಾಗಿಲ್ಲ. ಅಷ್ಟೇ ಅಲ್ಲ ಫ್ಯಾನ್​ಗಳ ಅಳವಡಿಕೆ ಕಾರ್ಯವೂ ಮುಗಿದಿಲ್ಲ.  ಕ್ರೀಡಾಂಗಣದ ಸಂಪೂರ್ಣ ಸಿದ್ಧತೆಗೆ ಜನವರಿ 25ರ ಗಡುವು ನೀಡಲಾಗಿದೆ. ಬಟ್ ಅಲ್ಲಿನ ಅವ್ಯವಸ್ಥೆಗಳನ್ನ ನೋಡಿದ್ರೆ ಈ ಡೆಡ್​ಲೈನ್ ಒಳಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಗಳಿಲ್ಲ.

ಆಗೊಂದು ಈಗೊಂದು ಎನ್ನುವಂತೆ ದಿಪಕ್ಷೀಯ ಸರಣಿಗಳನ್ನಷ್ಟೇ ಆಡಿಸ್ತಿತ್ತು. ಹೀಗಾಗಿ ಕ್ರೀಡಾಂಗಣಗಳಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ಬಹುತೇಕ ಕ್ರೀಡಾಂಗಣಗಳು ಹಾಳಾಗಿವೆ. ಇರೋದ್ರಲ್ಲಿ ಬೆಸ್ಟ್ ಎನ್ನುವಂತೆ ಗಡ್ಡಾಫಿ, ಲಾಹೋರ್ ಹಾಗೇ ಕರಾಚಿ ಮೈದಾನಗಳನ್ನ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆ ಮಾಡಲಾಗಿತ್ತು. ಬಟ್ ಸೆಲೆಕ್ಟ್ ಮಾಡಿ ಐಸಿಸಿ ಅಧಿಕಾರಿಗಳು ಮೊದಲ ಬಾರಿಗೆ ಭೇಟಿ ನೀಡಿದ್ದ ಮೇಲೆಯೇ ಗೊತ್ತಾಗಿದ್ದು ಅವುಗಳ ಅಸಲಿ ಬಂಡವಾಳ. ಹೀಗಾಗಿ ಮೈದಾನಗಳ ನವೀಕರಣಕ್ಕೆ ಸೂಚನೆ ನೀಡಿ ಬಂದಿದ್ರು. ಬಟ್ ಡೆಡ್​ಲೈನ್ ಹತ್ತಿರ ಬಂದ್ರೂ ಸ್ಟೇಡಿಯಮ್​ಗಳು ಮಾತ್ರ ರೆಡಿಯಾಗಿಲ್ಲ. ಹಾಗೇನಾದ್ರೂ ಕಾಮಗಾರಿ ಮುಗಿಯದೇ ಇದ್ರೆ ಪಾಕಿಸ್ತಾನದ ಪ್ರತಿಷ್ಠೆಗೆ ಮಸಿ ಬಳಿಯೋದು ಗ್ಯಾರಂಟಿ. ಇಡೀ ಟೂರ್ನಿಯನ್ನು ಪಾಕಿಸ್ತಾನದಲ್ಲಿ ಆಯೋಜಿಸಲು ಪಿಸಿಬಿ, ಐಸಿಸಿ ಮುಂದೆ ಹಟ ಹಿಡಿದು ಕುಳಿತಿತ್ತು. ಇದಲ್ಲದೆ ಬಿಸಿಸಿಐ ವಿರುದ್ಧವೂ ಬೆಂಕಿ ಉಗುಳಿತ್ತು. ಹೀಗಿರುವಾಗ ಕ್ರೀಡಾಂಗಣಗಳನ್ನು ಟೂರ್ನಿಗೆ ಸಿದ್ಧಪಡಿಸುವಲ್ಲಿ ಯಶಸ್ವಿಯಾಗದಿದ್ದರೆ, ವಿಶ್ವ ಕ್ರಿಕೆಟ್ ಮುಂದೆ ತಲೆಭಾಗಬೇಕಾಗುತ್ತದೆ.

ಚಾಂಪಿಯನ್ಸ್ ಟ್ರೋಫಿಗೆ ಉಳಿದಿರೋದು ಇನ್ನೊಂದೇ ತಿಂಗಳಾದ್ರೂ ಕಾಮಗಾರಿ ಕೆಲಸಗಳೂ ಕೂಡ ಬೇಗ ಬೇಗ ಆಗ್ತಿಲ್ಲ. ಎಲ್ಲಾ ಮೂರು ಕ್ರೀಡಾಂಗಣಗಳು ಟೂರ್ನಿಗೆ ಸಿದ್ಧವಾಗಿಲ್ಲ. ಕನಿಷ್ಟ ಪ್ರಮಾಣದ ನಿರ್ಮಾಣ ಕಾರ್ಯಗಳೂ ಕೂಡ ಪೂರ್ಣಗೊಂಡಿಲ್ಲ. ಆಸನಗಳು, ಫ್ಲಡ್‌ಲೈಟ್‌ಗಳು, ಇತರೆ ಸೌಲಭ್ಯಗಳು ಮತ್ತು ಔಟ್‌ಫೀಲ್ಡ್, ಪಿಚ್ ಗಳು  ಸೇರಿದಂತೆ ತುಂಬಾ ಕೆಲಸ ಬಾಕಿ ಉಳಿದಿದೆ. ಗಡಾಫಿ ಕ್ರೀಡಾಂಗಣದಲ್ಲಿ ಪ್ಲ್ಯಾಸ್ಟರ್ ಕೆಲಸವು ಇನ್ನೂ ಪೂರ್ಣಗೊಂಡಿಲ್ಲ. ಸಾಮಾನ್ಯವಾಗಿ, ಯಾವುದೇ ಅಂತರಾಷ್ಟ್ರೀಯ ಈವೆಂಟ್‌ನ ಆತಿಥೇಯ ರಾಷ್ಟ್ರಗಳು ಪಂದ್ಯದ ಸ್ಥಳಗಳನ್ನು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಗೆ ಮುಂಚಿತವಾಗಿ ಹಸ್ತಾಂತರಿಸುತ್ತವೆ. ಇದರಿಂದಾಗಿ ಅವರು ಗುಣಮಟ್ಟವನ್ನು ಪರಿಶೀಲಿಸುತ್ತಾರೆ ಮತ್ತು ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತಾರೆ. ಪಿಸಿಬಿ ಈವರೆಗೂ ಈ ಕೆಲಸ ಮಾಡಿಲ್ಲ.

 

Shantha Kumari

Leave a Reply

Your email address will not be published. Required fields are marked *