ಏರ್‌ಪೋರ್ಟ್‌ನಲ್ಲಿ ಇನ್ನು ಮುಂದೆ ಫ್ರಿಸ್ಕಿಂಗ್‌ ರದ್ದು? – ಕೇಂದ್ರ ವಿಮಾನಯಾನ ಸಚಿವಾಲಯ ಚಿಂತನೆ

ಏರ್‌ಪೋರ್ಟ್‌ನಲ್ಲಿ ಇನ್ನು ಮುಂದೆ ಫ್ರಿಸ್ಕಿಂಗ್‌ ರದ್ದು? – ಕೇಂದ್ರ ವಿಮಾನಯಾನ ಸಚಿವಾಲಯ ಚಿಂತನೆ

ವಿಮಾನದಲ್ಲಿ ಪ್ರಯಾಣ ಮಾಡಲು ಆದಷ್ಟು ಬೇಗ ಏರ್​​ಪೋರ್ಟ್​ಗೆ ತೆರಳುತ್ತೇವೆ. ಆದರೆ, ವಿಮಾನ ನಿಲ್ದಾಣ ತಲುಪಿದ ಮೇಲೆ ಮೆಟಲ್ ಡಿಟೆಕ್ಟರ್ ಮತ್ತು ಬಾಡಿ ಸ್ಕ್ಯಾನರ್​ ದಾಟಿದ ಕೂಡಲೇ ನಿಮ್ಮ ದೇಹವನ್ನ ಕೂಡ ಪರಿಶೀಲಿ​ಸ್ತಾರೆ. ತಲೆಯಿಂದ ಕಾಲಿನವರೆಗೆ ಪರಿಶೀಲನೆ ಮಾಡ್ತಾರೆ. ಇದನ್ನ ಫ್ರಿಸ್ಕಿಂಗ್ ಅಂತಾ ಕರೀತಾರೆ. ಆದ್ರೆ, ಮುಂದಿನ ದಿನಗಳಲ್ಲಿ ನೀವು ಈ ಫ್ರಿಸ್ಕಿಂಗ್​ನಿಂದ ಫ್ರೀಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಟ್ರಕ್ ಡ್ರೈವರ್‌ಗಳು ಇನ್ನು ಕೂಲ್ ಕೂಲ್ -ಟ್ರಕ್ ಕ್ಯಾಬಿನ್‌ಗಳಲ್ಲಿ ಎಸಿ ಕಂಪಲ್ಸರಿ ಎಂದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಏರ್​​ಪೋರ್ಟ್​ಗಳಲ್ಲಿ ಫ್ರಿಸ್ಕಿಂಗ್​​ನ್ನ ರದ್ದು ಮಾಡಲು ಕೇಂದ್ರ ವಿಮಾನಯಾನ ಸಚಿವಾಲಯ ಚಿಂತನೆ ನಡೆಸಿದೆ. ಇದರ ಬದಲಾಗಿ ಎಲ್ಲಾ ಏರ್​​ಪೋರ್ಟ್​ಗಳಲ್ಲೂ ಎರಡರಿಂದ ನಾಲ್ಕು ಫುಲ್ ಬಾಡಿ ಸ್ಕ್ಯಾನರ್​ಗಳನ್ನ ಅಳವಡಿಸಲು ಪ್ಲ್ಯಾನ್ ಮಾಡಲಾಗಿದೆ. ಬಾಡಿ ಸ್ಕ್ಯಾನರ್​ ದಾಟಿದ ಬಳಿಕವೂ ವ್ಯಕ್ತಿ ಬಗ್ಗೆ ಅನುಮಾನ ಬಂದಲ್ಲಿ ಮಾತ್ರ ಆತನನ್ನ ಫ್ರಿಸ್ಕಿಂಗ್​ಗೆ ಒಳಪಡಿಸಲಾಗುತ್ತೆ. ದೇಶಾದ್ಯಂತ ಒಟ್ಟು 105 ಏರ್​​ಪೋರ್ಟ್​ಗಳಿದ್ದು, ಈ ಪೈಕಿ 28 ವಿಮಾನ ನಿಲ್ದಾಣಗಳು ಅತ್ಯಂತ ಸೂಕ್ಷ್ಮ ಪಟ್ಟಿಯಲ್ಲಿವೆ.

 

suddiyaana