ಸಿರಾಜ್ ಜರ್ಸಿ ಧರಿಸಿದರೂ ಅಭಿಷೇಕ್ ಕೈಹಿಡಿಯದ ಲಕ್ – ಅಭಿ ಯಡವಟ್ಟು ಶುರುವಾಗಿದ್ದು ಎಲ್ಲಿಂದ ಗೊತ್ತಾ?

ನೆದರ್‌ಲ್ಯಾಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾದ ಯಂಗ್ ಗನ್ ಅಭಿಷೇಕ್ ಶರ್ಮಾ ಅವರನ್ನು ಎಲ್ಲರೂ ಗಮನಿಸಿದ್ದೀರಾ. ಅಭಿಶೇಕ್ ಮೈದಾನಕ್ಕಿಳಿಯುವಾಗ ಜರ್ಸಿ ಚೇಂಜ್ ಆಗಿತ್ತು. ಅಭಿಷೇಕ್ ಬೇಕಂತಾನೇ ಸಿರಾಜ್ ಜರ್ಸಿ ಧರಿಸಿ ಬಂದಿರಬೇಕು ಅಂತಾನೇ ಅನೇಕರು ಅಂದುಕೊಂಡಿದ್ದರು. ಆದರೆ, ಈ ಬದಲಾವಣೆ ಅಭಿಷೇಕ್ ಶರ್ಮಾ ಮಾಡಿಕೊಂಡ ಯಡವಟ್ಟಿನ ಪರಿಣಾಮ ಎಂದು ನಂತರ ಗೊತ್ತಾಗಿದೆ.
ಇದನ್ನೂ ಓದಿ:ಡಚ್ಚರ ವಿರುದ್ಧ ಶಿವತಾಂಡವ – ಸತತ ನಾಲ್ಕು ಪಂದ್ಯಗಳನ್ನು ಗೆದ್ದು ಬೀಗಿದ ಭಾರತ
ಟೀಮ್ ಇಂಡಿಯಾದ ಯುವ ಓಪನರ್ ಅಭಿಷೇಕ್ ಶರ್ಮಾ ಆರಂಭಿಕರಾಗಿ ಮೈದಾನಕ್ಕಿಳಿದಾಗ ಎಲ್ಲರೂ ಅಚ್ಚರಿಯಿಂದ ನೋಡಿದರು. ಯಾಕೆಂದರೆ, ಸಿರಾಜ್ ಭಾಯ್ ಜೆರ್ಸಿಯನ್ನು ಧರಿಸಿ ಅಭಿಷೇಕ್ ಶರ್ಮಾ ಮೈದಾನ ಪ್ರವೇಶಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನವಾದ ಚರ್ಚೆ ನಡೆಯುತ್ತಿವೆ.ಆದರೆ, ಈ ವಿಚಾರದ ಬಗ್ಗೆ ಪಂದ್ಯದ ಕಾಮೆಂಟೇಟರ್ಗಳಾದ ನಾಸರ್ ಹುಸೇನ್ ಮತ್ತು ಸುನಿಲ್ ಗವಾಸ್ಕರ್ ಸ್ಪಷ್ಟನೆ ನೀಡಿದ್ದಾರೆ. ಏನೆಂದರೆ, ಅಭಿಷೇಕ್ ಶರ್ಮಾ ತಾನು ಉಳಿದುಕೊಂಡ ಹೋಟೆಲ್ ಕೋಣೆಯಲ್ಲಿ ತಮ್ಮ ಕ್ರಿಕೆಟ್ ಕಿಟ್ ಅನ್ನು ಮರೆತಿದ್ದಾರೆ ಎಂದು ಹೇಳಿದ್ದಾರೆ.
ಟಾಸ್ಗೂ ಮೊದಲು ಅಭಿಷೇಕ್ ಅರ್ಷದೀಪ್ ಜರ್ಸಿ ತೊಟ್ಟಿದ್ದರು. ಆದರೆ ಟಾಸ್ ಗೆದ್ದ ನಂತರ ಅರ್ಷದೀಪ್ ಆಡುವುದು ಖಚಿತವಾಯಿತು. ನಂತರ ಅಭಿಷೇಕ್ ಶರ್ಮಾ ಅರ್ಷದೀಪ್ ಜರ್ಸಿ ಅವರಿಗೆ ವಾಪಸ್ ಕೊಡಬೇಕಾಯ್ತು. ನಂತರ ಮೊಹಮ್ಮದ್ ಸಿರಾಜ್ ಜರ್ಸಿಯನ್ನ ಧರಿಸಿಕೊಂಡು ಅಭಿಷೇಕ್ ಶರ್ಮಾ ಬ್ಯಾಟಿಂಗ್ ಗೆ ಬಂದರು. ಐಸಿಸಿ ನಿಯಮಗಳ ಪ್ರಕಾರ, ಒಬ್ಬ ಆಟಗಾರನು ತನ್ನದೇ ಆದ ಸಂಖ್ಯೆಯ ಜರ್ಸಿಯನ್ನು ಧರಿಸಬೇಕು. ಆದರೆ ಕೆಲವು ಅಸಾಮಾನ್ಯ ಸಂದರ್ಭಗಳಲ್ಲಿ, ಆಟಗಾರರು ಇನ್ನೊಬ್ಬ ಆಟಗಾರನ ಜರ್ಸಿಯನ್ನು ಧರಿಸಿ ಮೈದಾನಕ್ಕೆ ಪ್ರವೇಶಿಸಿದ ಉದಾಹರಣೆಗಳಿವೆ. ಈ ಹಿಂದೆ, ಅನೇಕ ಆಟಗಾರರು ತಮ್ಮ ತಂಡದ ಸದಸ್ಯರ ಜರ್ಸಿಯನ್ನು ಧರಿಸಿ ಆಡಿರುವ ಸಂದರ್ಭಗಳಿವೆ. ನಿಯಮ ಉಲ್ಲಂಘನೆಯಾದರೆ ಅಭಿಷೇಕ್ ದಂಡ ಅಥವಾ ವಾಗ್ದಂಡನೆಗೆ ಗುರಿಯಾಗುವ ಸಾಧ್ಯತೆ ಇದೆ.

ನೋಡಿರಿ

