ಅಭಿಷೇಕ್ ONE MAN SHOW – AUS ಎದುರು ಗೆದ್ದು ಸೋತ ಭಾರತ
T-20I ಸೋಲು.. ಸರಣಿ ಕಳ್ಕೊಳ್ತಾರಾ?

ಐಸಿಸಿ ವುಮೆನ್ಸ್ ವರ್ಲ್ಡ್ ಕಪ್ ಸೆಮೀಸ್ನಲ್ಲಿ ಭಾರತ ಹೈಯೆಸ್ಟ್ ರನ್ ಚೇಸ್ ಮಾಡಿ ಆಸ್ಟ್ರೇಲಿಯಾ ಸೊಕ್ಕಿಳಿಸಿದೆ ಅಂತಾ ಫ್ಯಾನ್ಸ್ ಅಂತೂ ಫುಲ್ ಹ್ಯಾಂಗ್ಓವರ್ನಲ್ಲಿದ್ರು. ಬಟ್ ಶುಕ್ರವಾರ ಮಧ್ಯಾಹ್ನದ ಹೊತ್ತಿಗೆಲ್ಲಾ ಈ ಖುಷಿನೆಲ್ಲಾ ಝರ್ ಅಂತಾ ಇಳ್ಸಿದ್ದು ಟೀಂ ಇಂಡಿಯಾ ಬಾಯ್ಸ್. ಮ್ಯಾಚ್ ಶುರುವಾಗಿದ್ದೇ ಆಗಿದ್ದು ಫಸ್ಟ್ ಬಾಲ್ನಿಂದಲೇ ಸ್ಟ್ರಗಲ್.. ಬ್ಯಾಕ್ ಟು ಬ್ಯಾಕ್ ವಿಕೆಟ್. ಪವರ್ ಫ್ಲೇನಲ್ಲೇ ಅಟ್ಟರ್ ಫ್ಲ್ಯಾಪ್. ಬಟ್ ಇಂಥಾ ಟೈಮಲ್ಲಿ ಒನ್ ಮ್ಯಾನ್ ಶೋ ಥರ ಕ್ರಿಸ್ ಕಚ್ಚಿ ನಿಂತದ್ದು ಅಭಿಷೇಕ್ ಶರ್ಮಾ ಮಾತ್ರನೇ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ-20ಐ ಮ್ಯಾಚ್ ವಾಶ್ ಔಟ್ ಆಗಿತ್ತು. ಸೋ ಎರಡನೇ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡ ಎರಡೂ ತಂಡಗಳಿಗಿತ್ತು. ಮೆಲ್ಬೊರ್ನ್ ಕ್ರಿಕೆಟ್ ಗ್ರೌಂಡಲ್ಲಿ ನಡೆದ ಈ ಮ್ಯಾಚಲ್ಲಿ ಭಾರತದ ಪ್ಲೇಯಿಂಗ್ 11ನಲ್ಲಿ ಯಾವುದೇ ಚೇಂಜಸ್ ಇರ್ಲಿಲ್ಲ. ಬಟ್ ಬ್ಯಾಟಿಂಗ್ ಆರ್ಡರ್ ವೇರಿಯೇಷನ್ಸ್ ಮಾತ್ರಇತ್ತು. ಎಕ್ಸ್ಪೆರಿಮೆಂಟ್ ಮಾಡಿದ್ರೂ ಟೀಂ ಇಂಡಿಯಾ ಪರ್ಫಾಮೆನ್ಸ್ ತೀರಾ ಬೋರಿಂಗ್ ಅನ್ಸಿತ್ತು. ಌಸ್ ಯೂಶ್ಯುಯಲ್ ಈ ಮ್ಯಾಚಲ್ಲೂ ಆಸ್ಟ್ರೇಲಿಯಾನೇ ಟಾಸ್ ಗೆದ್ದು ಫಸ್ಟ್ ಬೌಲಿಂಗ್ ಚೂಸ್ ಮಾಡಿಕೊಳ್ತಾರೆ. ಅದ್ರಂತೆ ಭಾರತದ ಪರ ಶುಭ್ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಇನ್ನಿಂಗ್ಸ್ ಆರಂಭಿಸಿದ್ರು. ಬಟ್ ಬೌಲಿಂಗ್ಗೆ ಇಳಿದ ಆಸೀಸ್ ಫಸ್ಟ್ ಬಾಲ್ನಿಂದಲೇ ಭಾರತದ ಬೆವರಿಳಿಸೋಕೆ ಶುರು ಮಾಡಿದ್ರು. ಅಲ್ಲಿಂದ ಶುರುವಾದ ಆಸೀಸ್ ಡಾಮಿನೇಷನ್ ಲಾಸ್ಟ್ ರನ್ಔಟ್ ವರೆಗೂ ನಿಲ್ಲಲೇಇಲ್ಲ. ಬ್ಯಾಟಿಂಗ್ನಲ್ಲೇ ಭಾರತವನ್ನ ಕಟ್ಟಿ ಹಾಕಿದ್ದ ಕಾಂಗರೂನಾಡಿನ ಕಲಿಗಳು ಅಷ್ಟೇ ಈಸಿಯಾಗಿ ಮ್ಯಾಚ್ನೂ ಗೆದ್ಕೊಂಡು ಸರಣಿಯಲ್ಲಿ ಲೀಡ್ ಪಡೆದ್ರು.
ಇದನ್ನೂ ಓದಿ: ಇಸ್ತಾನ್‌ಬುಲ್‌ನಲ್ಲಿ ಚರ್ಚೆ ಅಂತ್ಯ- ಕದನ ವಿರಾಮಕ್ಕೆ ಒಪ್ಪಿದ ಪಾಕ್ Vs ಅಫ್ಘಾನ್
ಫಸ್ಟ್ ಓವರ್.. ಫಸ್ಟ್ ಬಾಲ್ ನಲ್ಲೇ ಔಟ್ ಕೊಟ್ಟ ಅಂಪೈರ್!
ಯೆಸ್. ಟಾಸ್ ಸೋತು ಬ್ಯಾಟಿಂಗ್ಗೆ ಬಂದ ಭಾರತದ ಪರ ಶುಭ್ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಇನ್ನಿಂಗ್ಸ್ ಆರಂಭಿಸಿದ್ರು. ಇಂಟ್ರೆಸ್ಟಿಂಗ್ ಅಂದ್ರೆ ಈ ಸಲ ಫಸ್ಟ್ ಬಾಲ್ ಫೇಸ್ ಮಾಡಿದ್ದು ಶುಭ್ಮನ್ ಗಿಲ್. ಌಂಡ್ ಫಸ್ಟ್ ಬಾಲ್ನಲ್ಲೇ ಡ್ರಾಮಾ. ಜೋಶ್ ಹೇಜಲ್ವುಡ್ ಬೌಲಿಂಗ್ನ ಮೊದಲ ಬಾಲ್ ಗಿಲ್ ಪ್ಯಾಡ್ಗೆ ಬಡಿದಿತ್ತು. ಎಲ್ಬಿಡ್ಬ್ಯೂ ಅಂತಾ ಹೇಜಲ್ವುಡ್ ಅಪೀಲ್ ಮಾಡಿದ್ದು ಅಂಪೈರ್ ಕೂಡ ಔಟ್ ಕೊಟ್ರು. ಆದ್ರೆ ಗಿಲ್ ರಿವ್ಯೂ ತಗೊಂಡಿದ್ದು ಸ್ಟಂಪ್ಸ್ ಗಿಂತ ಹೈಟ್ನಲ್ಲಿ ಬಾಲ್ ಪಾಸ್ ಆಯ್ತು. ಌಂಡ್ ನಾಟೌಟ್ ಕೊಟ್ರು. ಇದಾದ್ಮೇಲೆ ಮೂರನೇ ಬಾಲ್ ಗಿಲ್ ಅವ್ರ ಹೆಲ್ಮೆಟ್ ಗೆ ಬಡೀತು. ಕನ್ಕಶನ್ ಚೆಕ್ ಮಾಡಿ ಎಲ್ಲಾ ಓಕೆ ಇದೆ ಅಂದ್ರು. ಕೊನೆಗೆ ಫಸ್ಟ್ ಓವರ್ಲಿ ಬಂದಿದ್ದೇ ಒಂದು ರನ್. ಸೆಕೆಂಡ್ ಓವರ್ನಿಂದ ಅಭಿಷೇಕ್ ಅಬ್ಬರ ಶುರುವಾಯ್ತು. ಒಂದೇ ಓವರ್ನಲ್ಲಿ 17 ರನ್ಸ್ ಬಂತು. ಆದ್ರೆ 3ನೇ ಓವರ್ಗೆ ಗಿಲ್ ವಿಕೆಟ್ ಒಪ್ಪಿಸ್ತಾರೆ. ಅಲ್ಲಿಂದ ಸ್ಟಾರ್ಟ್ ಆಯ್ತು ಟೀಂ ಇಂಡಿಯಾ ಡೌನ್ ಫಾಲ್ ಮತ್ತೆ ಮೇಲೆಳಲೇ ಇಲ್ಲ.
ಅಭಿಷೇಕ್ & ರಾಣಾ ಬಿಟ್ಟು ಉಳಿದವ್ರೆಲ್ಲಾ ಸಿಂಗಲ್ ಡಿಜಿಟ್ ರನ್ಸ್!
ಟಿ20 ಫಾರ್ಮೆಟ್ ಅಂದ್ರೆ ಬಾಲ್ ಟು ಬಾಲ್ ಬಿಗ್ ಹಿಟ್ ನೋಡ್ತಾರೆ. ಬಟ್ ಇವತ್ತಿನ ಮ್ಯಾಚಲ್ಲಿ ಎಲ್ಲವೂ ಉಲ್ಟಾ. 32 ರನ್ಗೆ 4 ವಿಕೆಟ್.. ಶುಭ್ಮನ್ ಗಿಲ್ 10 ಬಾಲ್ ಫೇಸ್ ಮಾಡಿ 5 ರನ್, ಸಂಜು ಸ್ಯಾಮ್ಸನ್ 4 ಎಸೆತ 2 ರನ್, ಇನ್ನು ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ 4 ಬಾಲ್ 1 ರನ್, ಇನ್ನು ಏಷ್ಯಾಕಪ್ ಫೈನಲ್ ಮ್ಯಾಚ್ ಹೀರೋ ತಿಲಕ್ ವರ್ಮಾ 2 ಬಾಲ್ ಡಕ್ ಔಟ್, ಅಕ್ಷರ್ ಪಟೇಲ್ 12 ಬಾಲ್ 7 ರನ್, ಸೋ ಅಭಿಷೇಕ್ ಬಿಟ್ಟು ಮೊದಲ ಐದು ಆಟಗಾರರು ಸಿಂಗಲ್ ಡಿಜಿಟ್ಗೆ ವಿಕೆಟ್ ಒಪ್ಪಿಸಿದ್ರು. ಇನ್ನು ದುಬೆಯನ್ನ ಬಿಟ್ಟು 7ನೇ ಸ್ಲಾಟ್ನಲ್ಲಿ ರಾಣಾನ ಬ್ಯಾಟಿಂಗ್ಗೆ ಕಳ್ಸಿದ್ದು ಸ್ವಲ್ಪ ಪ್ಲಸ್ ಆಯ್ತು. 33 ಬಾಲ್ ಫೇಸ್ ಮಾಡಿ 35 ರನ್ ಬಾರಿಸಿದ್ರು. ಅಭಿ ರಾಣಾ ಪಾರ್ಟ್ನರ್ಶಿಪ್ ನಲ್ಲಿ 50 ಪ್ಲಸ್ ರನ್ಸ್ ಬಂತು. ಬಟ್ 8ನೇ ಸ್ಲಾಟ್ನಲ್ಲಿ ಬಂದ ದುಬೆ 4 ರನ್ಗಷ್ಟೇ ಸೀಮಿತವಾದ್ರು. ಇನ್ನು ಕುಲ್ದೀಪ್, ವರುಣ್, ಬುಮ್ರಾ ಖಾತೆಯನ್ನೂ ತೆರೀಲಿಲ್ಲ. ಬಟ್ ಓಪನರ್ ಆಗಿ ಬಂದು ಲಾಸ್ಟ್ ಮೂಮೆಂಟ್ವರೆಗೂ ನಿಂತು ಆಡಿದ್ದು ಅಭಿಷೇಕ್ ಮಾತ್ರವೇ. 37 ಎಸೆತಗಳಲ್ಲಿ 68 ರನ್ಸ್ ಕಲೆಹಾಕಿದ್ರು. ಈ ಮೂಲಕ ಭಾರತದ 125 ಟೋಟಲ್ ರನ್ಸ್ ನಲ್ಲಿ ಅರ್ಧಕ್ಕಿಂತ ಜಾಸ್ತಿ ಅಭಿಯದ್ದೇ ಕೊಡುಗೆ ಇತ್ತು. ಸೋ 120 ಬಾಲಲ್ಲಿ 126 ರನ್ಸ್ ಟಾರ್ಗೆಟ್ ಬೆನ್ನತ್ತಿದ ಆಸ್ಟ್ರೇಲಿಯಾ ಅಷ್ಟೇ ಈಸಿಯಾಗಿ ಮ್ಯಾಚ್ ವಿನ್ ಆಯ್ತು. ಇನ್ನೇನು ಲಾಸ್ಟ್ ಮೂಮೆಂಟ್ನಲ್ಲಿ ಮ್ಯಾಚ್ ವಿನ್ನಿಂಗ್ ಟೈಮಲ್ಲಿ ಬುಮ್ರಾ ಒಂದೇ ಓವರ್ನಲ್ಲಿ 2 ವಿಕೆಟ್ ತಗೊಂಡು ಚೋಕ್ ಕೊಡ್ತಾರೆ. ಅಂತಿಮವಾಗಿ 13.2 ಓವರ್ಗಳಲ್ಲೇ 6 ವಿಕೆಟ್ ನಷ್ಟಕ್ಕೆ ಆಸ್ಟ್ರೇಲಿಯಾ ಟಾರ್ಗೆಟ್ ರೀಚ್ ಆಯ್ತು. ಇನ್ನೂ 40 ಎಸೆತಗಳು ಬಾಕಿ ಇರುವಂತೆಯೇ ಪಂದ್ಯವನ್ನ ಗೆದ್ದು ಸರಣಿಯಲ್ಲಿ ಲಿಡ್ ಪಡೆಯಿತು. ಇವತ್ತಿನ ಮ್ಯಾಚಲ್ಲಿ ಭಾರತ ಸೋತಿದೆ ನಿಜ. ಹೀಗಿದ್ರೂ ಅಭಿಷೇಕ್ ಆಟವನ್ನ ಮಾತ್ರ ಮೆಚ್ಚಲೇಬೇಕು.
ವಿಕೆಟ್ಸ್ ಬೀಳ್ದಿದ್ರೂ ಅಭಿಷೇಕ್ ಫಿಯರ್ ಲೆಸ್ ಬ್ಯಾಟಿಂಗ್!
ಟಿ-20 ಫಾರ್ಮೆಟ್ನಲ್ಲಿ ಅಭಿಷೇಕ್ ಭಾರತಕ್ಕೆ ಗ್ರೇಟ್ ಬ್ಯಾಟರ್ ಆಗ್ಬಿಟ್ಟಿದ್ದಾರೆ. ಆಸೀಸ್ ನೆಲದಲ್ಲೂ ಫಿಯರ್ ಲೆಸ್ ಬ್ಯಾಟಿಂಗ್ ಮುಂದುವರಿಸಿದ್ರು. ಮೊದಲ ಮ್ಯಾಚಲ್ಲಿ 19 ರನ್ಗೆ ಔಟ್ ಆಗಿದ್ದ ಅಭಿ ಎರಡನೇ ಪಂದ್ಯದಲ್ಲಿ ಒನ್ ಮ್ಯಾನ್ ಶೋನಂತೆ ಅಬ್ಬರಿಸಿದ್ರು. ಌಕ್ಚುಲಿ ಇವತ್ತು ಅಭಿಷೇಕ್ ಇದ್ದ ಫಾರ್ಮ್ ನೋಡಿದ್ರೆ ಒಂದೊಳ್ಳೆ ಸಾಥ್, ಒಳ್ಳೆ ಪಾರ್ಟ್ನರ್ ಶಿಪ್ ಸಿಕ್ಕಿದಿದ್ರೆ ಹೊಸ ರೆಕಾರ್ಡ್ಸ್ ಅಂತೂ ಪಕ್ಕಾ ಇರ್ತಿತ್ತು. ಒಂದ್ಕಡೆ ವಿಕೆಟ್ಸ್ ಬೀಳ್ದಿದ್ರೂ ದೃತಿಗೆಡದ ಅಭಿಷೇಕ್ ಪವರ್ ಪ್ಳೇನಲ್ಲಿ 270ಪ್ಲಸ್ ಸ್ಟೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ರು. ಆ ನಂತ್ರ ಕೂಡ ಆಲ್ಮೋಸ್ಟ್ 180, 190+ ಸ್ಟ್ರೈಕ್ ರೇಟ್ ಉಳಿಸಿಕೊಂಡಿದ್ರು. 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ವಿಶ್ವದ ನಂ. 1 ಟಿ20 ಬ್ಯಾಟ್ಸ್‌ಮನ್ ಏಷ್ಯಾದಲ್ಲಿ ಮಾತ್ರವಲ್ಲದೆ ಆಸ್ಟ್ರೇಲಿಯಾ ನೆಲದಲ್ಲೂ ತಾನೆಂಥಾ ಕ್ವಾಲಿಟಿ ಪ್ಲೇಯರ್ ಅನ್ನೋದನ್ನ ತೋರಿಸಿಕೊಟ್ರು. 36 ಎಸೆತಗಳಲ್ಲಿ 68 ರನ್ ಗಳಿಸಿದ್ದ ಅಭಿಷೇಕ್ 18.3ನೇ ಓವರ್ನಲ್ಲಿ ನಾಥನ್ ಎಲ್ಲಿಸ್ ಅವ್ರ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ರು. ಌಂಡ್ ನೆಕ್ಸ್ಟ್ ಬಾಲ್ನಲ್ಲೇ ಭಾರತ ಆಲ್ಔಟ್ ಆಯ್ತು. ಅಷ್ಟಕ್ಕೂ ಈ ಮ್ಯಾಚಲ್ಲಿ ಭಾರತದ ಸೋಲಿಗೆ ಏನೆಲ್ಲಾ ಕಾರಣ ನೋಡೋಣ.
ಭಾರತದ ಸೋಲಿಗೆ ಕಾರಣಗಳು!
- ಟಾಸ್ ಸೋಲು, ಫಸ್ಟ್ ಬ್ಯಾಟಿಂಗ್
- ಟಾಪ್ ಆರ್ಡರ್ ಬ್ಯಾಟಿಂಗ್ ಕೊಲ್ಯಾಪ್ಸ್
- ಗಿಲ್, ಸೂರ್ಯ ಪದೇಪದೆ ಫೇಲ್ಯೂರ್
- ಸಂಜು ಸ್ಯಾಮ್ಸನ್ 3ನೇ ಸ್ಲಾಟ್ ಗೆ ಬಡ್ತಿ
- ಅಕ್ಷರ್ ಪಟೇಲ್ 3ನೇ ರನ್ ಗೆ ಓಡಿ ಔಟ್
- ಪವರ್ ಪ್ಲೇ ಆಸ್ಟ್ರೇಲಿಯಾ ಡಾಮಿನೇಷನ್
- ಜೋಶ್ ಹೇಜಲ್ ಬೌಲಿಂಗ್ ಪವರ್
- ಭಾರತದ ಕಡಿಮೆ ಸ್ಕೋರ್ ಟಾರ್ಗೆಟ್
- ಮಿಚೆಲ್ ಮಾರ್ಷ್ ಮತ್ತು ಹೆಡ್ ಪಾರ್ಟ್ನರ್ ಶಿಪ್
- ಭಾರತ ಮಿಸ್ ಫೀಲ್ಡ್
ಸೋ ಹೀಗೆ ಹೇಳ್ತಾ ಹೋದ್ರೆ ಟೀಂ ಇಂಡಿಯಾ ಮಿಸ್ಟೇಕ್ಸ್ ಸಿಗ್ತಾನೇ ಹೋಗುತ್ತೆ. ಈ ಮ್ಯಾಚ್ ಸೋಲಿಗೆ ಭಾರತದ ಕಂಪ್ಲೀಟ್ ಫೇಲ್ಯೂರೇ ಕಾರಣ. ಕಳಪೆ ಬ್ಯಾಟಿಂಗ್, ಬೌಲಿಂಗ್ ಹಾಗೇ ಫೀಲ್ಡಿಂಗ್. ಸದ್ಯ 1-0 ಅಂತರದಲ್ಲಿ ಆಸ್ಟ್ರೇಲಿಯಾ ಸರಣಿಯಲ್ಲಿ ಲೀಡ್ ಸಾಧಿಸಿದೆ. ಭಾರತ ಸರಣಿಯನ್ನ ಗೆಲ್ಬೇಕು ಅಂದ್ರೆ ಮುಂದಿನ ಮೂರೂ ಮ್ಯಾಚ್ಗಳನ್ನೂ ಗೆಲ್ಲಲೇಬೇಕು. ಎರಡರಲ್ಲಿ ಗೆದ್ದು ಒಂದು ಪಂದ್ಯ ಸೋತ್ರೆ ಸರಣಿ ಸಮಬಲ ಆಗುತ್ತೆ. ಭಾನುವಾರ ಮೂರನೇ ಪಂದ್ಯ ನಡೆಯಲಿದ್ದು ಇಲ್ಲಾದ್ರೂ ಕಮ್ ಬ್ಯಾಕ್ ಮಾಡ್ತಾರೋ ಇಲ್ವೋ ನೋಡ್ಬೇಕು. ಬಟ್ ಅಭಿಷೇಕ್ ಒನ್ ಮ್ಯಾನ್ ಶೋಗೊಂದು ಹ್ಯಾಟ್ಸ್ಆಫ್ ಹೇಳಲೇಬೇಕು.

ನೋಡಿರಿ

