ಅಭಿಷೇಕ್ ಶರ್ಮಾ ಯುಗಾರಂಭ – ಯುವಿ ಶಿಷ್ಯ ಸಿಡಿಲಮರಿ ಆಗಿದ್ದೇಗೆ?  

ಅಭಿಷೇಕ್ ಶರ್ಮಾ ಯುಗಾರಂಭ – ಯುವಿ ಶಿಷ್ಯ ಸಿಡಿಲಮರಿ ಆಗಿದ್ದೇಗೆ?  

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅಭಿಷೇಕ್ ಶರ್ಮಾ ಅಬ್ಬರ ನೋಡಿದ ಫ್ಯಾನ್ಸ್ ಫುಲ್ ಫಿದಾ ಆಗ್ಬಿಟ್ಟಿದ್ದಾರೆ. ಟಿ-20 ಕ್ರಿಕೆಟ್​ನ ಆಡಿದ್ರೆ ಹಿಂಗೇ ಆಡ್ಬೇಕು ಗುರು ಅಂತಾ ಹಾಡಿ ಹೊಗಳ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಅಭಿಷೇಕ್ ಶರ್ಮಾ ಫುಲ್ ಟ್ರೆಂಡಿಂಗ್‌ನಲ್ಲಿದ್ದಾರೆ. 13 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿರುವ ಅಭಿಯನ್ನು ಜೂನಿಯರ್ ಯುವರಾಜ್ ಸಿಂಗ್ ಎಂದೆಲ್ಲಾ ಫ್ಯಾನ್ಸ್ ಗುಣಗಾನ ಮಾಡ್ತಿದ್ದಾರೆ. ದೇಶವೇ ಕೊಂಡಾಡುತ್ತಿರುವ ಅಭಿಷೇಕ್ ಶರ್ಮಾ ಈಗ ಟೀಂ ಇಂಡಿಯಾದ ಭವಿಷ್ಯದ ಪವರ್ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ.

ಇದನ್ನೂ ಓದಿ : ಅಳೆದು ತೂಗಿ ಪಾಕ್ ಟೀಂ ಅನೌನ್ಸ್ – ಹಾಲಿ ಚಾಂಪಿಯನ್ ಸ್ಟ್ರೆಂಥ್ ಏನು?

ಸದ್ಯ ಟೀಂ ಇಂಡಿಯಾದಲ್ಲಿ ಯಂಗ್​ಸ್ಟರ್ಸ್ ಅಬ್ಬರದ ಬ್ಯಾಟಿಂಗ್ ಮೂಲಕ ಸೂಪರ್ ಸ್ಟಾರ್ಸ್ ಆಗಿ ಮಿಂಚುತ್ತಿದ್ದಾರೆ. ಅದ್ರಲ್ಲೂ ಈ ಲಿಸ್ಟ್​್ನಲ್ಲಿ ಅಭಿಷೇಕ್ ಶರ್ಮಾ ಟಾಪ್​ನಲ್ಲಿದ್ದಾರೆ. ತಮ್ಮ ಹೊಡಿ ಬಡಿ ಸ್ಟೈಲ್​ನಿಂದಲೇ ಮಿಂಚಿನ ಸಂಚಲನ ಮೂಡಿಸಿದ್ದಾರೆ. ಅದ್ರಲ್ಲೂ ಇಂಗ್ಲೆಂಡ್ ವಿರುದ್ಧದ ಕೊನೇ ಪಂದ್ಯದಲ್ಲಿ 37 ಎಸೆತಗಳಲ್ಲೇ ಸೆಂಚುರಿ ಸಿಡಿಸಿದ್ದು ಎಲ್ಲೆಲ್ಲೂ ಅಭಿಯದ್ದೇ ಮಾತು. ಬಟ್ ಅಭಿ ಭರ್ಜರಿ ಪ್ರದರ್ಶನ ನೀಡಿದಾಗಲೆಲ್ಲಾ ಟೀಂ ಇಂಡಿಯಾದ ಸಿಕ್ಸರ್ ಸಿಂಗ್ ಅಂತಾನೇ ಕರೆಸಿಕೊಳ್ಳೋ ಯುವರಾಜ್ ಸಿಂಗ್ ಕೂಡ ಟ್ರೆಂಡಿಂಗ್​ಗೆ ಬರ್ತಾರೆ. ಅದಕ್ಕೆ ಕಾರಣವೇ ಗುರು ಶಿಷ್ಯರ ನಡುವಿನ ಬಾಂಧವ್ಯ.

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಗರಡಿಯಲ್ಲೇ ಬೆಳೆದಿರೋ ಹುಡುಗ ಅಭಿಷೇಕ್ ಶರ್ಮಾ. ಹೀಗಾಗೇ ಇಂಗ್ಲೆಂಡ್ ವಿರುದ್ಧದ ಪಂದ್ಯದ ಬಳಿಕ ಅಭಿಷೇಕ್ ತಮ್ಮ ಗುರುವಿನ ಬಗ್ಗೆ ಮಾತನಾಡಿದ್ರು. ಯುವರಾಜ್ ಸಿಂಗ್ ಯಾವಾಗಲೂ ಬಯಸಿದ್ದನ್ನು ಇಂದು ನಾನು ಮಾಡಿದ್ದೇನೆ. ನನ್ನ ಇನ್ನಿಂಗ್ಸ್ ನೋಡಿದ ಯುವರಾಜ್ ಸಿಂಗ್ ಸಂತೋಷವಾಗಿರುತ್ತಾರೆ. ಅವರು ಯಾವಾಗಲೂ ನಾನು 15, 20 ನೇ ಓವರ್ ವರೆಗೆ ಬ್ಯಾಟಿಂಗ್ ಮಾಡಬೇಕೆಂದು ಬಯಸಿದ್ದರು. ಇಂದು ಅದನ್ನು ನಾನು ಮಾಡಲು ಪ್ರಯತ್ನಿಸಿದೆ ಎಂದು ಯುವರಾಜ್ ಬಯಸಿದ್ದನ್ನು ಅಭಿಷೇಕ್ ಶರ್ಮಾ ಬಹಿರಂಗಪಡಿಸಿದ್ದಾರೆ. ಮತ್ತೊಂದೆಡೆ ಯುವಿ ಕೂಡ ತಮ್ಮ ಎಕ್ಸ್​ ಖಾತೆಯಲ್ಲಿ ಅಭಿಷೇಕ್ ಬಗ್ಗೆ ಬರೆದುಕೊಂಡಿದ್ದಾರೆ.

2024ರ ಜುಲೈನಲ್ಲಿ ಹರಾರೆಯಲ್ಲಿ ನಡೆದಿದ್ದ ಜಿಂಬಾಂಬ್ವೆ ವಿರುದ್ಧದ ಟಿ-20 ಪಂದ್ಯಕ್ಕೆ ಚೊಚ್ಚಲ ಬಾರಿಗೆ ಟೀಂ ಇಂಡಿಯಾಗೆ ಸೆಲೆಕ್ಟ್ ಆಗಿದ್ರು. ಐಪಿಎಲ್‌ನಲ್ಲಿ ತಮ್ಮ ಸ್ಫೋಟಕ ಆಟದಿಂದಲೇ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದ ಅಭಿಷೇಕ್ ಭಾರತ ಪರ ತಾವಾಡಿದ 2ನೇ ಪಂದ್ಯದಲ್ಲೇ ಸೆಂಚುರಿ ಸಿಡಿಸಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್‌ ಸಿಕ್ಸರ್‌ ಸಿಡಿಸುವ ಮೂಲಕ ಶತಕ ಪೂರ್ಣಗೊಳಿಸಿದ ವಿಶ್ವದ ಮೊದಲ ಬ್ಯಾಟರ್‌  ಎನಿಸಿಕೊಂಡಿದ್ರು. ಸದ್ಯ ಭಾರತದ ಪರ ಅಭಿಷೇಕ್ ಟಿ-20 ಪಂದ್ಯಗಳಲ್ಲಿ ಮಾತ್ರ ಆಡ್ತಿದ್ದಾರೆ. ಇದೇ ರೀತಿಯ ಪರ್ಫಾಮೆನ್ಸ್ ನೀಡಿದ್ರೆ ಮುಂದಿನ ದಿನಗಳಲ್ಲಿ ಏಕದಿನ ಮಾದರಿಗೂ ಅವಕಾಶ ಸಿಕ್ಕರೂ ಸಿಗಬಹುದು.

Shantha Kumari