ಸೆಮೀಸ್ ಗೆ ಡ್ರಾಪ್ ಮಾಡ್ಬೇಕಾ – ಅಭಿ ವಿರುದ್ಧ ಫ್ಯಾನ್ಸ್ ರೊಚ್ಚಿಗೆದ್ದಿದ್ದೇಕೆ?
ಕಡೇ ಚಾನ್ಸ್ ಕೇಳಿದ್ದೇಕೆ ಇರ್ಫಾನ್?

ಕಳೆದ ಒಂದೂವರೆ ವರ್ಷದಿಂದ ಭಾರತದ ಟಿ-20ಐ ಪಂದ್ಯಗಳನ್ನ ಫ್ಯಾನ್ಸ್ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ಅದಕ್ಕೆ ಮುಖ್ಯ ಕಾರಣ ಹೊಡಿಬಡಿ ಆಟ. ಒನ್ ಆಫ್ ದಿ ಮೇನ್ ರೀಸನ್ ಪವರ್ ಹಿಟ್ಟರ್ ಅಭಿಷೇಕ್ ಶರ್ಮಾ ಬ್ಯಾಟಿಂಗ್. ಫಸ್ಟ್ ಬಾಲ್ನಿಂದಲೇ ಬೌಲರ್ಗಳನ್ನ ಬೆಂಡೆತ್ತೋ ಅಭಿಷೇಕ್ ಶರ್ಮಾರ ಬ್ಯಾಟಿಂಗ್ ನೋಡೋದೇ ಕಣ್ಣಿಗೆ ಹಬ್ಬ. ಆದ್ರೆ ಈಗ ಅದೇ ಫ್ಯಾನ್ಸ್ ಅಭಿಷೇಕ್ರನ್ನ ಸೆಮಿಫೈನಲ್ ಮ್ಯಾಚ್ನಲ್ಲಿ ಆಡಿಸೋದೇ ಬೇಡ ಅಂತಿದ್ದಾರೆ. ಅದಕ್ಕೆ ಕಾರಣ ಟಿ-20 ವಿಶ್ವಕಪ್ನಲ್ಲಿ ಅಭಿ ಬ್ಯಾಟ್ ಮಂಕಾಗಿದೆ.
ಇದನ್ನೂ ಓದಿ : ನಿರೀಕ್ಷಣಾ ಜಾಮೀನು ಅರ್ಜಿ ಮೂಂದೂಡಿಕೆ – ಅರೆಸ್ಟ್ ಆಗ್ತಾರಾ ಮಲ್ಲಿಕಾರ್ಜುನ ಮುತ್ಯಾ ?
ಟಿ-20 ವಿಶ್ವಕಪ್ಗೂ ಮುನ್ನ ಟೂರ್ನಿಯ ಹೈಯೆಸ್ಟ್ ಸ್ಕೋರರ್ ಎನಿಸಿಕೊಳ್ತಿದ್ದ ಅಭಿಷೇಕ್ ಶರ್ಮಾ ಈಗ ಬ್ಯಾಟಿಂಗ್ನಲ್ಲಿ ತುಂಬಾನೇ ಸ್ಟ್ರಗಲ್ ಪಟ್ಟಿದ್ದಾರೆ. ಆರಂಭದಲ್ಲೇ ಹ್ಯಾಟ್ರಿಕ್ ಡಕ್ ಮೂಲಕ ನಿರಾಸೆ ಮೂಡಿಸಿದ್ರು. ಆ ನಂತ್ರ ಜಿಂಬಾಬ್ವೆ ವಿರುದ್ಧ ಫಿಫ್ಟಿ ರನ್ಸ್ ಬಂದಿದ್ದು ಬಿಟ್ರೆ ತಂಡದ ಪರ ಬೆಸ್ಟ್ ಇನ್ನಿಂಗ್ಸ್ ಬಂದಿಲ್ಲ. ಌಂಡ್ ವೆಸ್ಟ್ ಇಂಡೀಸ್ ವಿರುದ್ಧದ ಡು ಆರ್ ಡೈ ಮ್ಯಾಚಲ್ಲೂ ಬೇಗನೆ ವಿಕೆಟ್ ಒಪ್ಪಿಸಿದ್ರು. ಅಭಿಷೇಕ್ ಬ್ಯಾಟಿಂಗ್ ಬಗ್ಗೆ ಬೇಜಾರಾಗಿದ್ದ ಫ್ಯಾನ್ಸ್ ಗೆ ಮತ್ತಷ್ಟು ಸಿಟ್ಟು ತರಿಸಿದ್ದು ಅವ್ರ ಫೀಲ್ಡಿಂಗ್. ಕ್ರೂಶಿಯಲ್ ಟೈಂ ಕ್ರೂಶಿಯಲ್ ಮ್ಯಾಚ್ ಅಂತೂ ಗೊತ್ತಿದ್ರೂ 2 ಕ್ಯಾಚ್ಗಳನ್ನ ಡ್ರಾಪ್ ಮಾಡಿದ್ರು. ಬ್ಯಾಟಿಂಗ್ನಲ್ಲಿ 11 ಬಾಲಲ್ಲಿ 10 ರನ್ಸ್ ಗಳಿಸಿ ಔಟಾಗಿದ್ರು. ಹೀಗಾಗಿ ವಿಂಡೀಸ್ ಪರ ಆಡಿದ ಟ್ವೆಲ್ತ್ ಮ್ಯಾನ್, ಪಾಕ್ ಪ್ಲೇಯರ್ಗಳಿಂದ ಇನ್ಸ್ಪೈರ್ ಆಗಿದ್ದಾರಾ ಅಂತೆಲ್ಲಾ ಟ್ರೋಲ್ ಮಾಡಿದ್ರು.ಇದಾದ್ಮೇಲೆ ಫ್ಯಾನ್ಸ್ ಅಭಿಷೇಕ್ ವಿರುದ್ಧ ಸಿಟ್ಟಾಗಿದ್ದು ಮುಂದಿನ ಪಂದ್ಯಗಳಲ್ಲಿ ಆಡಿಸೋದೇ ಬೇಡ ಅಂತಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕ್ತಿದ್ದಾರೆ.
6 ಪಂದ್ಯ.. 3 ಡಕ್.. 80 ರನ್ಸ್!
ಈ ಬಾರಿಯ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ 6 ಪಂದ್ಯ ಆಡಿದ್ದಾರೆ. ಮೊದಲ ಮೂರು ಪಂದ್ಯಗಳಲ್ಲಿ ಡಕ್ ಔಟ್ ಆಗಿದ್ದ ಅಭಿಷೇಕ್ ಜಿಂಬಾಬ್ವೆ ವಿರುದ್ಧ ಅರ್ಧಶತಕ ಬಾರಿಸಿದ್ರು. ಒಟ್ಟಾರೆ ಈ ಟೂರ್ನಿಯಲ್ಲಿ 80 ರನ್ಸ್ ಬಂದಿದೆ. ಆದ್ರೆ ಅಭಿಷೇಕ್ ಶರ್ಮಾ ಯಾವತ್ತಿದ್ರೂ ಮೋಸ್ಟ್ ಡೇಂಜರಸ್ ಬ್ಯಾಟರ್. ಇತ್ತಿಚೆಗೆ ನ್ಯೂಜಿಲೆಂಡ್ ವಿರುದ್ಧದ ಮ್ಯಾಚಲ್ಲಿ 14 ಬಾಲ್ಗಳಲ್ಲೇ ಅರ್ಧಶತಕ ಬಾರಿಸಿದ್ದ ಅಭಿಷೇಕ್ ಶರ್ಮಾ ಸೆನ್ಸೇಷನ್ ಕ್ರಿಯೇಟ್ ಮಾಡಿದ್ರು. ನ್ಯೂಜಿಲೆಂಡ್ ಪ್ಲೇಯರ್ಸ್ ಅಂತೂ ಅಚ್ಚರಿಯಿಂದ ಅಭಿಷೇಕ್ ಬ್ಯಾಟ್ನ ನೋಡಿದ್ರು. ಬಟ್ ಈಗ ವಿಶ್ವಕಪ್ ಟೂರ್ನಿಯಲ್ಲಿ ಕ್ಲಿಕ್ ಆಗದೇ ಇದ್ರೂ ಸೆಮಿಫೈನಲ್ ಅಥವಾ ಫೈನಲ್ನಲ್ಲಿ ಅವ್ರಿಂದ ಬಿಗ್ ಸ್ಕೋರ್ ನಿರೀಕ್ಷೆ ಮಾಡ್ಬೋದು. ಯಾಕಂದ್ರೆ ಅಭಿಷೇಕ್ ಔಟ್ ಆಫ್ ಫಾರ್ಮ್ ಇಲ್ಲ. ಜಿಂಬಾಬ್ವೆ ವಿರುದ್ಧ ಅರ್ಧಶತಕ ಬಂದಿದೆ. ಹೀಗಾಗಿಯೇ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಕೂಡ ಅಭಿಷೇಕ್ ಪರವೇ ಬ್ಯಾಟ್ ಬೀಸಿದ್ದಾರೆ. ಹಿಂದಿನ ಪಂದ್ಯಗಳಲ್ಲಿ ಅಭಿಷೇಕ್ ಗೆಲ್ಸಿದ್ದಾರೆ. ಸೋ ಈಗ ನಾವು ಗೆಲ್ಲಿಸೋ ಮೂಲಕ ಅವ್ರನ್ನೂ ಸೇವ್ ಮಾಡ್ತೀವಿ ಅಂದಿದ್ದಾರೆ. ಅದಕ್ಕೆ ಕಾರಣ ಅಭಿಷೇಕ್ರಲ್ಲಿರೋ ಪವರ್. ಅಭಿಷೇಕ್ ಒಂದ್ಸಲ ಸೆಟ್ಲ್ ಆದ್ರು ಅಂದ್ರೆ ಎಂಥದ್ದೇ ಬೌಲರ್ನೂ ರೆಸ್ಪೆಕ್ಟ್ ಕೊಡಲ್ಲ. ಫಸ್ಟ್ ಬಾಲ್ನಿಂದಲೇ ಫಿಯರ್ಲೆಸ್ ಆಗಿ ಬ್ಯಾಟ್ ಬೀಸ್ತಾರೆ. ಕ್ರಿಕೆಟ್ನಲ್ಲಿ ಸಾಮಾನ್ಯವಾಗಿ ಇನ್ನಿಂಗ್ಸ್ನ ಫಸ್ಟ್ ಬಾಲಲ್ಲಿ ಬೌಲರ್ಗೆ ರೆಸ್ಪೆಕ್ಟ್ ಕೊಡ್ಬೇಕು ಅಂತಾರೆ. ಆದ್ರೆ ಅಭಿಷೇಕ್ ಇದಕ್ಕೆ ಡೆಡ್ಆಪೋಸಿಟ್. ಸಿಡಿಯೋಕೆ ನಿಂತ್ರೆ ಭಾರತಕ್ಕೆ 200ಪ್ಲಸ್ ಸ್ಕೋರ್ ಪಕ್ಕಾ. ಌಂಡ್ ಇಲ್ಲಿ ಅಭಿಷೇಕ್ ರಿಂದ ತಂಡಕ್ಕೇನೂ ದೊಡ್ಡ ಎಫೆಕ್ಟ್ ಆಗ್ತಿಲ್ಲ. ಯಾಕಂದ್ರೆ ಅಭಿಷೇಕ್ ಆಟ ಇರೋದೇ ಪವರ್ ಪ್ಲೇನಲ್ಲಿ ಮಾತ್ರ. 10 ಬಾಲಲ್ಲೇ ಇಡೀ ಪಂದ್ಯದ ದಿಕ್ಕನ್ನೇ ಬದಲಿಸಿಬಿಡ್ತಾರೆ. ಮೊದಲ 6 ಓವರ್ಗಳಲ್ಲಿ ಹೊಡೆದ್ರೆ ಬಿಗ್ ಸ್ಕೋರ್ ಇಲ್ದಿದ್ರೆ ಔಟ್. ಸೋ ನೆಕ್ಸ್ಟ್ ಬರೋ ಬ್ಯಾಟರ್ಸ್ ಅದನ್ನ ಕ್ಯಾರಿ ಮಾಡ್ಬೋದು. ಅಥವಾ ಬೇಗ ಔಟಾದ್ರೆ ಬೇರೆಯವ್ರು ರೆಸ್ಪಾನ್ಸಿಬಿಲಿಟಿ ತಗೊಳ್ಬೇಕಾಗುತ್ತೆ. ಈಗ ಸೂರ್ಯಕುಮಾರ್ ಫಾರ್ಮ್ಗೆ ಬಂದಿರೋದು ತಂಡಕ್ಕೆ ಪ್ಲಸ್ ಆಗುತ್ತೆ. ಮೂರ್ನಾಲ್ಕು ಮ್ಯಾಚಲ್ಲಿ ಆಡಿಲ್ಲ ಅಂದಾಕ್ಷಣ ಅಭಿಷೇಕ್ ರನ್ನ ಡ್ರಾಪ್ ಮಾಡೋಕೆ ಆಗಲ್ಲ. ಜೊತೆಗೆ ಟೀಮ್ನಲ್ಲಿ ರಿಪ್ಲೇಸ್ಮೆಂಟ್ಗೂ ಯಾರೂ ಇಲ್ಲ. ಸೋ ಈಗ ಅಭಿಷೇಕ್ರಂಥ ಪವರ್ಹಿಟ್ಟರ್ನ ಪ್ರೊಟೆಕ್ಟ್ ಮಾಡೋ ಜವಾಬ್ದಾರಿ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಮೇಲಿದೆ. ಌಂಡ್ ಇದಕ್ಕಿಂತ ಜಾಸ್ತಿ ಇಂಗ್ಲೆಂಡ್ ವಿರುದ್ಧ ಅಭಿಷೇಕ್ ಸಿಡಿಯೋ ಚಾನ್ಸಸ್ ಕೂಡ ಇದೆ. ಯಾಕಂದ್ರೆ ಹಿಂದಿನ ರೆಕಾರ್ಡ್ಸ್ ಕೂಡ ಅದನ್ನೇ ಹೇಳ್ತಿದೆ.
ಇಂಗ್ಲೆಂಡ್ ವಿರುದ್ಧ 5 ಮ್ಯಾಚಲ್ಲೇ 279 ರನ್ಸ್ ಬಾರಿಸಿದ್ದ ಅಭಿಷೇಕ್!
2025ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 5 ಪಂದ್ಯಗಳ ಟಿ-20ಐ ಸಿರೀಸ್ನಲ್ಲಿ ಆಂಗ್ಲರಿಗೆ ಅಭಿಷೇಕ್ ಶರ್ಮಾ ನರಕ ತೋರಿಸಿದ್ದಾರೆ. 5 ಪಂದ್ಯಗಳಲ್ಲಿ 55.80 ಆವರೇಜ್ನಲ್ಲಿ 279 ರನ್ಸ್ ಕಲೆ ಹಾಕಿದ್ರು. ಌಂಡ್ ಒನ್ ಮೋರ್ ಥಿಂಗ್ ಈಗ ಸೆಮಿಫೈನಲ್ ಪಂದ್ಯ ನಡೆಯಲಿರೋ ವಾಂಖೆಡೆ ಸ್ಟೇಡಿಯಮ್ನಲ್ಲೇ ರೆಕಾರ್ಡ್ ಬ್ರೇಕಿಂಗ್ ರನ್ಸ್ ಮಾಡಿದ್ದಾರೆ. ಕಳೆದ ವರ್ಷ ಫೆಬ್ರವರಿ 2 ರಂದು ನಡೆದಿದ್ದ ಐದನೇ ಟಿ-20ಐ ಮ್ಯಾಚಲ್ಲಿ 37 ಬಾಲಲ್ಲೇ ಸೆಂಚುರಿ ಹೊಡೆದಿದ್ರು. ಌಂಡ್ ಒಟ್ಟಾರೆ 54 ಬಾಲಲ್ಲಿ 250ರ ಸ್ಟ್ರೈಕ್ರೇಟ್ ನಲ್ಲಿ 135 ರನ್ಸ್ ಬಾರಿಸಿದ್ರು. ಇದ್ರಲ್ಲಿ 13 ಸಿಕ್ಸ್, 7 ಫೋರ್ ಇದ್ವು. ಟಿ20ಐನಲ್ಲಿ ಭಾರತದ ಪರ ಹೈಯೆಸ್ಟ್ ಇಂಡಿವಿಶ್ಯುಯಲ್ ಸ್ಕೋರ್ ಇದು. ಭಾರತ ಈ ಮ್ಯಾಚಲ್ಲಿ ಒಟ್ಟಾರೆ 247 ರನ್ಸ್ ಸ್ಕೋರ್ ಮಾಡಿತ್ತು. ಈ ಟಾರ್ಗೆಟ್ ಬೆನ್ನಟ್ಟಿದ್ದ ಇಂಗ್ಲೆಂಡ್ 97 ರನ್ಗಳಿಗೆ ಆಲೌಟ್ ಆಗಿತ್ತು. ಭಾರತ 150 ರನ್ಗಳ ಅಂತರದಲ್ಲಿ ಪಂದ್ಯವನ್ನ ಗೆದ್ದಿತ್ತು.
ಜೋಫ್ರಾ ಆರ್ಚರ್ ಗೂ ಬಿಸಿ ಮುಟ್ಟಿಸಿದ್ದ ಅಭಿಷೇಕ್!
ಇನ್ನು ಈ ಬಾರಿಯ ಟೂರ್ನಿಯಲ್ಲಿ ಆಂಗ್ಲರ ಪ್ರೈಮ್ ಬೌಲರ್ ಆಗಿರೋ ಜೋಫ್ರಾ ಆರ್ಚರ್ನೂ ಅಭಿಷೇಕ್ ಬೆಂಡೆತ್ತಿದ್ದಾರೆ. ಕಳೆದ ವರ್ಷ 5 ಟಿ-20ಐ ಪಂದ್ಯಗಳಲ್ಲಿ ಅವ್ರ ಬೌಲಿಂಗ್ನಲ್ಲಿ 33 ಬಾಲ್ಗಳನ್ನ ಫೇಸ್ ಮಾಡಿದ್ದಾರೆ. ಌಂಡ್ 61 ರನ್ ಗಳಿಸಿದ್ದಾರೆ. 184.84 ಸ್ಟ್ರೈಕ್ ರೇಟ್ ಇದೆ. ಆರ್ಚರ್ ಬೌಲಿಂಗ್ನಲ್ಲಿ 4 ಸಿಕ್ಸರ್‌ಗಳು ಮತ್ತು 7 ಬೌಂಡರಿಗಳನ್ನು ಸಿಡಿಸಿದ್ದಾರೆ. ಬಟ್ ಒಮ್ಮೆಯೂ ವಿಕೆಟ್ ಕೊಟ್ಟಿಲ್ಲ. ಹೀಗಾಗಿ ಈ ಬಾರಿ ಇಂಗ್ಲೆಂಡ್ ವಿರುದ್ಧವೇ ಅಭಿಷೇಕ್ ಗ್ರೇಟ್ ಕಂ ಬ್ಯಾಕ್ ಮಾಡೋ ಹೋಪ್ಸ್ ಇದೆ. ಇದೇ ಕಾರಣಕ್ಕೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಸೇರಿದಂತೆ ಮಾಜಿ ಕ್ರಿಕೆಟಿಗರೆಲ್ಲಾ ಅಭಿಷೇಕ್ ಬೆನ್ನಿಗೆ ನಿಂತಿದ್ದಾರೆ. ಅಭಿಷೇಕ್ ಕಂ ಬ್ಯಾಕ್ ಮಾಡೋಕೆ ಒಂದು ಅಷ್ಟೇ ಸಾಕು ಎಂದಿದ್ದಾರೆ.

ನೋಡಿರಿ

