ಆಸ್ಟ್ರೇಲಿಯಾದಲ್ಲಿ ಅಭಿಷೇಕ್ ಟಾರ್ಗೆಟ್ – ಓಪನರ್ ವಿಕೆಟ್ ಮೇಲೆ ಕಣ್ಣಿಟ್ಟಿದ್ದೇಕೆ?
ಯಂಗ್ ಬ್ಯಾಟರ್ ಗೆ ಅಗ್ನಿ ಪರೀಕ್ಷೆ

ಆಸ್ಟ್ರೇಲಿಯಾ ವಿರುದ್ಧದ ಟಿ-20ಐ ಸರಣಿ ಸಮರಕ್ಕೆ ಕೌಂಟ್ಡೌನ್ ಶುರುವಾಗಿದೆ. ಏಕದಿನ ಸರಣಿ ಸೋತಿರೋ ಭಾರತ ಟಿ-20ಐನಲ್ಲಿ ಧೂಳೆಬ್ಬಿಸೋಕೆ ರೆಡಿಯಾಗಿದೆ. ಪ್ರಸ್ತುತ ಟಿ-20ಐ ಮ್ಯಾಚ್ಗಳಂದ್ರೆ ಥಟ್ ಅಂತಾ ಕಣ್ಮುಂದೆ ಬರೋದೇ ಡ್ಯಾಷಿಂಗ್ ಓಪನರ್ ಅಭಿಷೇಕ್ ಶರ್ಮಾ. ಫಾರ್ ದಿ ಫಸ್ಟ್ ಟೈಂ ಆಸೀಸ್ ನೆಲದಲ್ಲಿ ಆಸೀಸ್ ವಿರುದ್ಧ ಬ್ಯಾಟ್ ಬೀಸೋಕೆ ರೆಡಿಯಾಗಿರೋ ಅಭಿ ಮೇಲೆಯೇ ಎಲ್ಲರ ಕಣ್ಣಿದೆ. ಹಾಗಂತ ಟೀಂ ಇಂಡಿಯಾ ಫ್ಯಾನ್ಸ್ ಅಷ್ಟೇ ಅಲ್ಲ ಆಸೀಸ್ ಬೌಲರ್ಗಳ ಕಣ್ಣೂ ಇದೆ.
ಇದನ್ನೂ ಓದಿ : ಫಸ್ಟ್ T-20I ಫೈಟ್.. ಯಾರು ಬೆಸ್ಟ್? – ಅಭಿ & ಮಾರ್ಷ್ ಬ್ಯಾಟಿಂಗ್ ಚಾಲೆಂಜ್
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ-20ಐ ಫಾರ್ಮೆಟ್ಗೆ ಗುಡ್ ಬೈ ಹೇಳಿದ್ಮೇಲೆ ಅಭಿಮಾನಿಗಳ ಕ್ರೇಜ್ ಕೊಂಚ ಕಡ್ಮೆಯಾದಂಗೆ ಕಾಣ್ತಿತ್ತು. ಬಟ್ ಯಾವಾಗ ಅಭಿಷೇಕ್ ಶರ್ಮಾ ಅವರ ಪವರ್ಹಿಟ್ಗಳನ್ನ ನೋಡಿದ್ರೋ ಚುಟುಕು ಸಮರವೇ ಬೆಸ್ಟ್ ಎನ್ನಿಸಿಬಿಟ್ಟಿದೆ. ಸಿಕ್ಸ್, ಫೋರ್ಗಳ ಅಬ್ಬರ, 190, 200 ಪ್ಲಸ್ ಸ್ಟ್ರೈಕ್ರೇಟ್, ಌಟಿಟ್ಯೂಡ್ ಎಲ್ಲವೂ ಸೇರಿ ಹ್ಯಾಂಡ್ಸಮ್ ಹಂಕ್ ಅಭಿಷೇಕ್ ಶರ್ಮಾ ಮಾಸ್ ಲುಕ್ ಹೀರೋ ಮಾಡಿಬಿಟ್ಟಿದೆ. ಒಂದ್ಕಡೆ ಭಾರತದ ಅಭಿಮಾನಿಗಳು ಅಭಿ ಬ್ಯಾಟಿಂಗ್ನ ಎಂಜಾಯ್ ಮಾಡೋಕೆ ಕಾಯ್ತಿದ್ರೆ ಅತ್ತ ಕಾಂಗರೂನಾಡಿನ ಪ್ಲೇಯರ್ಸ್ ಅಭಿಷೇಕ್ರನ್ನ ಕಟ್ಟಿಹಾಕೋಗೆ ಭರ್ಜರಿ ತಯಾರಿಯನ್ನೇ ಮಾಡ್ಕೊಂಡಿದ್ದಾರೆ.
ಅಭಿಷೇಕ್ ವಿಕೆಟ್ ಟಾರ್ಗೆಟ್ ಮಾಡಿದ ಆಸೀಸ್ ಪ್ಲೇಯರ್ಸ್!
ಏಕದಿನ ಸರಣಿಯನ್ನ ಗೆದ್ದಿರೋ ಆಸ್ಟ್ರೇಲಿಯಾಗೆ ಭಾರತದ ವಿರುದ್ಧ ಟಿ-20ಐ ಫಾರ್ಮೆಟ್ನಲ್ಲಿ ಗೆಲ್ಲೋದು ಈಸಿ ಇಲ್ಲ. ಹಿಂದಿನ ರೆಕಾರ್ಡ್ಸ್ ಕೂಡ ಇದನ್ನೇ ಹೇಳುತ್ತೆ. ಅದ್ರಲ್ಲೂ ಟಿ-20 ವಿಶ್ವಕಪ್ ಆದ್ಮೇಲೆ ಭಾರತ ಯಾವ ಸರಣಿಯನ್ನೂ ಸೋತಿಲ್ಲ. ಹಾಗೇ ಹಿಂದಿಗಿಂತ್ಲೂ ಸೂಪರ್ ಸಾಲಿಡ್ ಆಗಿದೆ. ಅದ್ರಲ್ಲೂ ಆಸೀಸ್ ಆಟಗಾರರ ನಿದ್ದಿಗೆಡಿಸಿರೋದೇ ಅಭಿಷೇಕ್ ಶರ್ಮಾ. ಭಾರತದ ಪರ ಓಪನಿಂಗ್ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿಯೋ ಅಭಿಷೇಕ್ ಶರ್ಮಾ ಬಿಗ್ ಹಿಟ್ಗಳ ಮೂಲಕವೇ ಪವರ್ ಪ್ಲೇನಲ್ಲೇ ಪವರ್ ಶೋ ತೋರಿಸ್ತಿದ್ದಾರೆ. ಅಭಿ ಕ್ರಿಸ್ನಲ್ಲಿ ಇರೋವಷ್ಟು ಹೊತ್ತು ರನ್ ಮಳೆ ಹರಿತಾನೇ ಇರುತ್ತೆ. ಹೀಗಾಗಿ ಲೆಫ್ಟ್ ಹ್ಯಾಂಡ್ ಬ್ಯಾಟರ್ ಆಗಿರೋ ಅಭಿಷೇಕ್ರನ್ನ ಆಸೀಸ್ ಬೌಲರ್ಸ್ ಟಾರ್ಗೆಟ್ ಮಾಡಲಿದ್ದಾರೆ. ಯಾವ ಲೆಂಗ್ತ್ನಲ್ಲಿ ಬಾಲ್ ಹಾಕಿದ್ರೆ ಅವ್ರನ್ನ ಕಟ್ಟಿಹಾಕ್ಬೋದು, ಎಲ್ಲಿ ಎಡವುತ್ತಾ ಇದ್ದಾರೆ ಅನ್ನೋದನ್ನ ಮಾನಿಟರ್ ಮಾಡಿದ್ದು ಔಟ್ ಮಾಡೋ ಪ್ಲ್ಯಾನ್ಗಳನ್ನೂ ಸಿದ್ಧಪಡಿಸಿದ್ದಾರೆ. ಅಷ್ಟಕ್ಕೂ ಅಭಿಷೇಕ್ ವಿಚಾರದಲ್ಲಿ ಆಸೀಸ್ ಆಟಗಾರರ ನಿದ್ದೆಕೆಡಿಸೋಕೆ ಕಾರಣವೂ ಇದೆ.
ಮಾಡ್ರನ್ ಡೇ ಕ್ರಿಕೆಟ್ ಮಹಾರಾಜ ಅಭಿಷೇಕ್ ಶರ್ಮಾ!
ಕ್ರಿಕೆಟ್ ಲೋಕದಲ್ಲಿ ಆಸ್ಟ್ರೇಲಿಯಾ ಡಾಮಿನೇಟಿಂಗ್ ಟೀಂ ಆಗಿದ್ರೂ ಟಿ-20ಐನಲ್ಲಿ ಭಾರತವೇ ಶೈನ್ ಆಗ್ತಿದೆ. ಅದ್ರಲ್ಲೂ ಅಭಿಷೇಕ್ ಶರ್ಮಾ ಟಿ20ಐ ಪಂದ್ಯಗಳಿಂದಲೇ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಬೌಲರ್ಗಳಿಗೆ ಕನಿಷ್ಠ ಮರ್ಯಾದೆನೂ ಕೊಡದೆ ಬೆಂಡೆತ್ತುತ್ತಿದ್ದಾರೆ. ಫಸ್ಟ್ ಬಾಲ್ನಿಂದ ಹಿಡ್ದು ಅವ್ರು ಹೊಡ್ಯೋ ಲಾಸ್ಟ್ ಬಾಲ್ವರೆಗೂ ಬಿಗ್ ಹಿಟ್ಗಳನ್ನೇ ನೋಡ್ತಾ ಇರ್ತಾರೆ. ಸ್ಕ್ರೈಟ್ ರೇಟ್ನಂತೂ ಯಾರು ಮ್ಯಾಚ್ ಮಾಡೋದೇ ಕಷ್ಟ ಇದೆ. ಹೀಗಾಗೇ ಟೀಮ್ ಇಂಡಿಯಾದ ಯಂಗ್ಗನ್ ಅಭಿಷೇಕ್ ಹೆಸ್ರು ಆಸ್ಟ್ರೇಲಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ಚರ್ಚೆಯಲ್ಲಿದೆ. ಜೋಷ್ ಹೇಜಲ್ವುಡ್, ಸೀನ್ ಅಬಾಟ್, ನಥನ್ ಎಲ್ಲೀಸ್ರಂತಾ ದಿಗ್ಗಜ ಬೌಲರ್ಗಳಿದ್ರೂ ಅಭಿಷೇಕ್ರ ವಿಕೆಟ್ ಹೇಗೆ ತೆಗೆಯೋದು ಅನ್ನೋ ಬಗ್ಗೆ ಕ್ಯಾಲ್ಕುಲೇಷನ್ ನಡೀತಿದೆ.
ಏಷ್ಯಾಕಪ್ ನಲ್ಲಿ ಅಭಿಷೇಕ್ ದೇ ಹವಾ!
ಏಷ್ಯಾಕಪ್ನಲ್ಲಿ ಏಷ್ಯನ್ ರಾಷ್ಟ್ರಗಳೇ ಆದ 8 ಟೀಂ ಗಳು ಮಾತ್ರ ಭಾಗಿಯಾಗಿದ್ವು. ಇದ್ರಲ್ಲಿ ಭಾರತ ಒಂದು ಸೂಪರ್ ಸಾಲಿಡ್ ಟೀಂ ಅನ್ನೋದು ಬಿಟ್ರೆ ಈವನ್ ಪಾಕಿಸ್ತಾನವೂ ಸೇರಿ ಮಿಕ್ಕವ್ರೆಲ್ಲಾ ಡಮ್ಮಿ ಅನ್ನೋ ಥರನೆ ಇದ್ರು. ಹೀಗಿದ್ರೂ ಇಡೀ ಕ್ರಿಕೆಟ್ ಜಗತ್ತೇ ಏಷ್ಯಾಕಪ್ನಲ್ಲಿ ಅದೊಬ್ಬ ಆಟಗಾರನ ಆಟಕ್ಕೆ ಫಿದಾ ಆಗಿದೆ. ಅದು ಬೇರ್ಯಾರು ಅಲ್ಲ ಅಭಿಷೇಕ್ ಶರ್ಮಾ. ಅರಬ್ಬರ ನಾಡಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ್ದ ಅಭಿಷೇಕ್ ಶರ್ಮಾ ಬೌಲರ್ಗಳ ಬೆವರಿಳಿಸಿದ್ರು. ಅದೂ ಕೂಡ 200ರ ಸ್ಟ್ರೈಕ್ರೇಟ್ನಲ್ಲಿ ರನ್ ಮಳೆ ಸುರಿಸಿದ್ರು. 7 ಪಂದ್ಯದಿಂದ 44.85ರ ಸರಾಸರಿಯಲ್ಲಿ 314 ರನ್ಗಳಿಸಿದ್ರು. ಇದಾದ ಬಳಿಕ ಪಂಜಾಬ್ ಪುತ್ತರ್ ಅಭಿಯದ್ದೇ ಹವಾ ಆಗೋಗಿದೆ. ಪ್ರಸ್ತುತ ಭಾರತದ ಪರ 24 ಟಿ20 ಪಂದ್ಯಗಳಲ್ಲಿ 196ರ ಸ್ಟ್ರೈಕ್ರೇಟ್ನಲ್ಲಿ ರನ್ ಕಲೆ ಹಾಕಿದ್ದಾರೆ. ಬಟ್ ಅಭಿಷೇಕ್ಗೆ ಅಸಲಿ ಚಾಲೆಂಜ್ ಈಗ ಶುರುವಾಗ್ತಿದೆ.
ಆಸೀಸ್ ನೆಲದಲ್ಲಿ ರನ್ಸ್ ಕಲೆ ಹಾಕೋದೇ ರಿಯಲ್ ಟಾಸ್ಕ್!
ಅಭಿಷೇಕ್ ಶರ್ಮಾ ಇಷ್ಟು ದಿನ ಆಡಿದ ಪಂದ್ಯಗಳಿಗೂ ಈಗ ಆಡ್ಬೇಕಿರೋ ಪಂದ್ಯಗಳಿಗೂ ಅಜಗಜಾಂತರ ವ್ಯತ್ಯಾಸ ಇದೆ. ಆಸ್ಟ್ರೇಲಿಯಾ ಟೀಂನಲ್ಲಿ ವರ್ಲ್ಡ್ ಕ್ಲಾಸ್ ಬೌಲರ್ಸ್ ಇದ್ದಾರೆ. ಆಸ್ಟ್ರೇಲಿಯಾ ಪಿಚ್ಗಳು ಬೌಲರ್ಗಳಿಗೆ ಹೆಚ್ಚು ನೆರವಾಗೋ ಪೇಸ್ & ಬೌನ್ಸಿ ಟ್ರ್ಯಾಕ್ನಲ್ಲಿ ಬ್ಯಾಟರ್ಸ್ ರಿಯಲ್ ಟೆಸ್ಟ್ ನಡೆಯುತ್ತೆ. ಈ ಅಗ್ನಿಪರೀಕ್ಷೆಯನ್ನ ಗೆದ್ದು ಅಭಿಷೇಕ್ ಸಾಮರ್ಥ್ಯ ನಿರೂಪಿಸಿಕೊಳ್ಬೇಕು. ಇದೆಲ್ಲಾ ಗೊತ್ತಿರೋ ಅಭಿಷೇಕ್ ತಮ್ಮ ದ್ರೋಣಾಚಾರ್ಯ ಯುವರಾಜ್ ಸಿಂಗ್ ಗರಡಿಯಲ್ಲಿ ಸ್ಪೆಷಲ್ ಟ್ರೈನಿಂಗ್ ಪಡ್ದಿದ್ದಾರೆ. ಆಸ್ಟ್ರೇಲಿಯಾ ಕಂಡಿಷನ್ಸ್ ಬಗ್ಗೆ ಚನ್ನಾಗೆ ತಿಳಿದಿರೋ ಯುವಿ ಅಭಿಷೇಕ್ ಗೆ ಒಂದಷ್ಟು ಟಿಪ್ಸ್ ಕೂಡ ಕೊಟ್ಟಿದ್ದಾರೆ. ಹೀಗಾಗಿ ಅಭಿಷೇಕ್ ಕಾಂಗರೂನಾಡಲ್ಲೂ ಅದೇ ಸ್ಟೈಲ್ನಲ್ಲೇ ಬ್ಯಾಟ್ ಬೀಸೋ ಕಾನ್ಫಿಡೆನ್ಸ್ನಲ್ಲಿದ್ದಾರೆ.

ನೋಡಿರಿ

