ಅಭಿಷೇಕ್ ಔಟ್.. ಸಂಜು ಓಪನರ್ – NAM ಪಂದ್ಯಕ್ಕಿಲ್ಲ DSP ಸಿರಾಜ್
ಪ್ಲೇಯಿಂಗ್ 11ನಲ್ಲಿ ದಿಢೀರ್ ಟ್ವಿಸ್ಟ್

ಟಿ-20 ವಿಶ್ವಕಪ್ ಅಖಾಡ ದಿನೇದಿನೆ ರಂಗೇರ್ತಿದೆ. ಪಾಯಿಂಟ್ಸ್ ಟೇಬಲ್ನಲ್ಲಿ ಹಾವು ಏಣಿ ಆಟ ಜೋರಾಗಿದೆ. ಗ್ರೂಪ್ Aನಲ್ಲಿರೋ ಭಾರತ ಸದ್ಯ ಅಮೆರಿಕ ವಿರುದ್ಧದ ಮೊದಲ ಮ್ಯಾಚ್ ಗೆದ್ದಿದ್ದು ನಮೀಬಿಯಾ ವಿರುದ್ಧ ಎರಡನೇ ಪಂದ್ಯಕ್ಕೆ ರೆಡಿಯಾಗಿದೆ. ಗುರುವಾರ ಭಾರತ ಮತ್ತು ನಮೀಬಿಯಾ ತಂಡಗಳು ಮುಖಾಮುಖಿಯಾಗಲಿವೆ. ಆದ್ರೆ ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾಗೆ ದೊಡ್ಡ ಆಘಾತವಾಗಿದೆ. ಸ್ಫೋಟಕ ಓಪನರ್ ಅಭಿಷೇಕ್ ಶರ್ಮಾ ಆಸ್ಪತ್ರೆ ಸೇರಿದ್ದಾರೆ. ಡಿಎಸ್ಪಿ ಸಿರಾಜ್ ಬೆಂಚ್ ಕಾಯಿಸಬೇಕಾಗುತ್ತೆ.
ಇದನ್ನೂ ಓದಿ : ಕ್ರಿಕೆಟ್ ಶಿಶುಗಳಲ್ಲ.. ಶಕ್ತಿಶಾಲಿಗಳು – ಯಾಮಾರಿದ್ರೆ ಮೈದಾನದಲ್ಲೇ ಗುನ್ನಾ
ನ್ಯೂಜಿಲೆಂಡ್ ವಿರುದ್ಧ ಭರ್ಜರಿಯಾಗಿ ಸರಣಿ ಗೆದ್ದು ಸೌತ್ ಆಫ್ರಿಕಾ ವಿರುದ್ಧ ವಾರ್ಮ್ ಅಪ್ ಮ್ಯಾಚಲ್ಲೇ ರನ್ ಮಳೆ ಸುರಿಸಿ ಅಮೆರಿಕ ವಿರುದ್ಧ ದಾಖಲೆ ಸ್ಕೋರ್ ಬರುತ್ತೆ ಅನ್ಕೊಂಡ್ರೆ ಟೀಂ ಇಂಡಿಯಾ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡ್ಸಿದ್ರು. ಕ್ರಿಕೆಟ್ ಶಿಶು ಅನ್ಕೊಂಡಿದ್ದ ಯುಎಸ್ಎ ಟೀಂ ಭಾರತಕ್ಕೆ ದೊಡ್ಡ ಪಾಠ ಕಲಿಸಿತ್ತು. ಪ್ರತೀ ತಂಡ, ಪ್ರತೀ ಪಂದ್ಯವನ್ನೂ ಸೀರಿಯಸ್ ಆಗಿ ತಗೊಳ್ಬೇಕು ಅನ್ನೋ ಮೆಸೇಜ್ ಪಾಸ್ ಮಾಡಿದ್ರು. ಈಗ ನಮೀಬಿಯಾ ವಿರುದ್ಧ ಇನ್ನಷ್ಟು ಸ್ಟ್ರಾಂಗ್ ಆಗಿ ಮೈದಾನಕ್ಕಿಳಿಯೋಕೆ ರೆಡಿಯಾಗ್ತಿದ್ರೆ ಭಾರತದ ಪ್ಲೇಯಿಂಗ್ 11ನಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಅಭಿಷೇಕ್ ಶರ್ಮಾ ಆಸ್ಪತ್ರೆಪಾಲು.. ಸಂಜು ಓಪನರ್!
2024ರ ಟಿ-20 ವಿಶ್ವಕಪ್ ಆದ್ಮೇಲೆ ಭಾರತದ ಪರ ಓಪನರ್ ಆಗಿ ಅಭಿಷೇಕ್ ಶರ್ಮಾ ಬ್ಯಾಟಿಂಗ್ನಲ್ಲಿ ಧೂಳೆಬ್ಬಿಸ್ತಿದ್ದಾರೆ. ಮತ್ತೊಬ್ಬ ಓಪನರ್ ಕಡೆಯಿಂದ ಸಾಥ್ ಸಿಗ್ಲಿ ಬಿಡ್ಲಿ, ಟಾಪ್ ಆರ್ಡರ್ ಬ್ಯಾಟರ್ಸ್ ಕೈಕೊಟ್ರೂ ಸಿಂಗಲ್ಲಾಗಿ ನಿಂತು ಅದೆಷ್ಟೋ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಅಭಿಷೇಕ್ ಶರ್ಮಾ ಕ್ರಿಸ್ ಕಚ್ಚಿ ನಿಂತ್ರೂ ಅಂದ್ರೆ ಆವತ್ತು ಭಾರತ ವಿನ್ ಅಂತಾನೇ ಲೆಕ್ಕ. ಬಟ್ ಯುಎಸ್ಎ ವಿರುದ್ಧದ ಮ್ಯಾಚಲ್ಲಿ ಡಿಸಪಾಯಿಂಟ್ ಮಾಡಿದ್ರು. ಗೋಲ್ಡನ್ ಡಕ್ ಔಟ್ ಆಗಿದ್ರು. ಈಗ ನಮೀಬಿಯಾ ವಿರುದ್ಧ ಆದ್ರೂ ಸ್ಫೋಟಕ ಇನ್ನಿಂಗ್ಸ್ ಆಡ್ಬೋದು ಅನ್ಕೊಂಡ್ರೆ ಈ ಪಂದ್ಯ ಆಡೋದೇ ಡೌಟಿದೆ. ಕಳೆದ ಎರಡು ದಿನಗಳಿಂದ ಸ್ಟಮಕ್ ಇನ್ಫೆಕ್ಷನ್ನಿಂದ ಬಳಲ್ತಿದ್ದು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರೋ ಪ್ರಾಕ್ಟೀಸ್ ಸೆಷನ್ನಲ್ಲೂ ಭಾಗಿಯಾಗಿಲ್ಲ. ಹೀಗಾಗಿ ಗುರುವಾರ ಮ್ಯಾಚ್ ವೇಳೆಗೆ ರಿಕವರ್ ಆಗೋದು ಡೌಟ್ ಇದ್ದು ಪ್ಲೇಯಿಂಗ್ 11ನಿಂದ ಹೊರಗಿರೋ ಚಾನ್ಸಸ್ ಇದೆ. ಹಾಗೇನಾದ್ರೂ ಅಭಿಷೇಕ್ ಆಡಿಲ್ಲ ಅಂದ್ರೆ ಓಪನರ್ ಆಗಿ ಸಂಜು ಸ್ಯಾಮ್ಸನ್ ಅವಕಾಶ ಪಡ್ಕೊಳ್ತಾರೆ.
ವಾಷಿಂಗ್ಟನ್ ಸುಂದರ್ ಇನ್.. ಬುಮ್ರಾ ಫಿಟ್.. ಯಾರು ಔಟ್?
ಇನ್ನು ವಾಷಿಂಗ್ಟನ್ ಸುಂದರ್ ಕೂಡ ಈಗ ತಂಡಕ್ಕೆ ಜಾಯ್ನ್ ಆಗಿದ್ದು ಪ್ರಾಕ್ಟೀಸ್ ನಡೆಸ್ತಿದ್ದಾರೆ. ಮತ್ತೊಂದೆಡೆ ಅಮೆರಿಕ ವಿರುದ್ಧದ ಪಂದ್ಯದ ವೇಳೆ ಜ್ವರದಿಂದಾಗಿ ಬೆಂಚ್ ಕಾದಿದ್ದ ಜಸ್ಪ್ರೀತ್ ಬುಮ್ರಾ ಈಗ ರಿಕವರ್ ಆಗಿದ್ದು ಅವ್ರು ಕೂಡ ಮೈದಾನಕ್ಕೆ ಇಳಿಯೋಕೆ ರೆಡಿಯಾಗಿದ್ದಾರೆ. ಹೀಗಾಗಿ ಮೊದಲ ಪಂದ್ಯದಲ್ಲಿ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಂಡಿದ್ದ ಮೊಹಮ್ಮದ್ ಸಿರಾಜ್ ಬೆಂಚ್ ಕಾಯಿಸಬಹುದು.
ಭಾರತದ ಸಂಭಾವ್ಯ ಪ್ಲೇಯಿಂಗ್ 11
ಸಂಜು ಸ್ಯಾಮ್ಸನ್
ಇಶಾನ್ ಕಿಶನ್
ತಿಲಕ್ ವರ್ಮಾ
ಸೂರ್ಯಕುಮಾರ್ ಯಾದವ್
ರಿಂಕು ಸಿಂಗ್
ಹಾರ್ದಿಕ್ ಪಾಂಡ್ಯ
ಅಕ್ಷರ್ ಪಟೇಲ್
ಶಿವಂ ದುಬೆ
ವರುಣ್ ಚಕ್ರವರ್ತಿ
ಅರ್ಷದೀಪ್ ಸಿಂಗ್
ಜಸ್ಪ್ರೀತ್ ಬುಮ್ರಾ
ಆಕ್ಚುಲಿ ಅಮೆರಿಕ ವಿರುದ್ಧದ ಮ್ಯಾಚಲ್ಲಿ ಡಿಎಸ್ಪಿ ಮೊಹಮ್ಮದ್ ಸಿರಾಜ್ ಒಂದೂವರೆ ವರ್ಷದ ಬಳಿಕ ಟಿ-20ಐ ತಂಡಕ್ಕೆ ಬಂದ್ರೂ ಕೂಡ ಬಿಗ್ ಇಂಪ್ಯಾಕ್ಟ್ ಮಾಡಿದ್ರು. ಮೂರು ವಿಕೆಟ್ಗಳನ್ನ ಬೇಟೆಯಾಡಿದ್ರು. ಹೀಗಾಗಿ ನಮೀಬಿಯಾ ವಿರುದ್ಧ ಅವ್ರನ್ನ ಬೆಂಚ್ ಕಾಯಿಸೋದು ಕಷ್ಟ ಅನ್ಸಿದ್ರೂ ಬುಮ್ರಾಗಾಗಿ ಅವ್ರು ತಮ್ಮ ಸ್ಥಾನ ಬಿಟ್ಟುಕೊಡ್ಲೇಬೇಕಾಗುತ್ತೆ. ಅಥವಾ ಅರ್ಶದೀಪ್ರನ್ನ ಬೆಂಚ್ ಕಾಯಿಸಿದ್ರೂ ಅಚ್ಚರಿ ಇಲ್ಲ.

ನೋಡಿರಿ

