ಅಭಿಷೇಕ್ ಅಬ್ಬರ.. ಮಾಲಿಂಗ ಆರ್ಭಟ – SRH ಸುನಾಮಿಗೆ ಪಲ್ಟಿ ಹೊಡೆದ ಡೆಲ್ಲಿ
TOP-3ಗೆ ಲಗ್ಗೆ ಇಟ್ಟ ಆರೆಂಜ್ ಆರ್ಮಿ!

ಅಭಿಷೇಕ್ ಅಬ್ಬರ.. ಮಾಲಿಂಗ ಆರ್ಭಟ – SRH ಸುನಾಮಿಗೆ ಪಲ್ಟಿ ಹೊಡೆದ ಡೆಲ್ಲಿTOP-3ಗೆ ಲಗ್ಗೆ ಇಟ್ಟ ಆರೆಂಜ್ ಆರ್ಮಿ!

ಹೈದ್ರಾಬಾದ್ ಟೀಂ ಹೇಳಿ ಕೇಳಿ ಬ್ಯಾಟಿಂಗ್ ಗೆ ವರ್ಲ್ಡ್ ಫೇಮಸ್. ಒಂದೋ ಬಿರುಗಾಳಿ ಬ್ಯಾಟಿಂಗ್ ಮಾಡ್ತಾರೆ ಇಲ್ಲ ಬೇಗ ಬೇಗ ಔಟ್ ಆಗ್ತಾರೆ. ನಿನ್ನೇ ಮ್ಯಾಚಲ್ಲಿ ಹೊಡಿಲೇಬೇಕು ಅಂತಾ ಡಿಸೈಡ್ ಆಗಿ ನಿಂತಿದ್ರು. ಅಭಿಷೇಕ್ ಶರ್ಮಾ ಮುಟ್ಟಿದ್ದೆಲ್ಲಾ ಚಿನ್ನ. ಒಂದ್ಕಡೆ ಡೆಲ್ಲಿ ಆಟಗಾರರ ಕಳಪೆ ಫೀಲ್ಡಿಂಗ್, ಬೌಲಿಂಗ್ ನಿಂದ ಒದ್ದಾಡ್ತಿದ್ರೆ ಅಭಿಷೇಕ್ ಶತಕ ಸಿಡಿಸಿ ಅಬ್ಬರಿಸಿದ್ರು.

ಇದನ್ನೂ ಓದಿ : ಶ್ರೇಯಸ್ + ರಿಕಿ = ಶಿಕಾರಿ – 6 ಪಂದ್ಯಗಳಲ್ಲೂ UNBEATEN ಆಗಿದ್ದೇಗೆ?

ಸನ್‌ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಮ್ಯಾಚಲ್ಲಿ ಹೈದರಾಬಾದ್ 47 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಚೂಸ್ ಮಾಡಿಕೊಂಡಿತ್ತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್, ಅಭಿಷೇಕ್ ಶರ್ಮಾ ಅವ್ರ ಸ್ಫೋಟಕ ಅಜೇಯ 135 ರನ್‌ಗಳ ನೆರವಿನಿಂದ 242 ರನ್ ಗಳಿಸಿತು. 243 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಡೆಲ್ಲಿ 9 ವಿಕೆಟ್‌ಗಳ ಕಳ್ಕೊಂಡು 195 ರನ್‌ಗಳನ್ನು ಮಾತ್ರ ಗಳಿಸಿ ಸೋಲೊಪ್ಪಿಕೊಳ್ತು.

ಹೈದ್ರಾಬಾದ್ ಗೆದ್ದಿದ್ದೇಗೆ?

ಮೊದಲ ವಿಕೆಟ್ ಬೀಳೋ ಹೊತ್ತಿಗೆಲ್ಲಾ 97 ರನ್ ಗಳಿಸಿದ್ದ ಹೈದ್ರಾಬಾದ್

68 ಬಾಲಲ್ಲಿ 135 ರನ್ ಗಳಿಸಿ ಅಜೇಯವಾಗಿ ಉಳಿದ ಅಭಿಷೇಕ್

ಕ್ಲಾಸೆನ್ 13 ಬಾಲಲ್ಲಿ 37 ರನ್ ಕಲೆ ಹಾಕಿದ್ದು ಬಿಗ್ ಸ್ಕೋರ್ ಸೆಟ್

ಡೆಲ್ಲಿ ಪರ ಬೌಲ್ ಮಾಡಿದ ಎಲ್ಲಾ ಬೌಲರ್ಸ್ 10+ ಎಕಾನಮಿ ರನ್ಸ್

ಡೆಲ್ಲಿ ಫೀಲ್ಡಿಂಗ್ ನಲ್ಲಿ ಫೇಲ್.. ಅಭಿಷೇಕ್ ಶರ್ಮಾ ಕ್ಯಾಚ್ ಬಿಟ್ಟ ರೆಡ್ಡಿ

ಬ್ಯಾಟಿಂಗ್ ನಲ್ಲೂ ಉತ್ತಮ ಆರಂಭ ಸಿಗಲಿಲ್ಲ, ನಿಸ್ಸಾಂಕ 8 ರನ್

ನಿತೀಶ್ ರಾಣಾ 57 ರನ್ ಗಳಿಸಿದ್ದೇ ಹೈಯೆಸ್ಟ್.. ಡೇವಿಡ್ ಮಿಲ್ಲದ್ 0

ಡೆಲ್ಲಿ ಬ್ಯಾಟಿಂಗ್ ಲೈನಪ್ ನಲ್ಲಿ ಅಗ್ರೆಸ್ಸಿವ್ ಬ್ಯಾಟರ್ಸ್ ಇಲ್ಲದೇ ಇದ್ದದ್ದು

ಹೈದ್ರಾಬಾದ್ ಪರ ಈಶಾನ್ ಮಾಲಿಂಗ್ 4 ವಿಕೆಟ್ ಪಡೆದು ಕಂಟ್ರೋಲ್

ಟಾಪ್ ಟು ಬಾಟಮ್ ಹೈದ್ರಾಬಾದ್ ಮಾಸ್ ಪರ್ಫಾಮೆನ್ಸ್ ನೀಡಿ ಗೆದ್ದಿದೆ. ಇಶಾನ್ ಕಿಶನ್ ಕ್ಯಾಪ್ಟನ್ಸಿಯ ಸನ್‌ರೈಸರ್ಸ್ ಹೈದರಾಬಾದ್ ತಂಡ 4 ಜಯಗಳೊಂದಿಗೆ 8 ಅಂಕಗಳನ್ನು ಹೊಂದಿದೆ. ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದೆ. ಮತ್ತೊಂದೆಡೆ ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನ ಸೋತಿದೆ.

Shantha Kumari