ಅಭಿಷೇಕ್-ಕಿಶನ್ ನಂ.1 ರೇಸ್ – T-20 ವಿಶ್ವಕಪ್ HERO ಯಾರು?

ಅಭಿಷೇಕ್-ಕಿಶನ್ ನಂ.1 ರೇಸ್ – T-20 ವಿಶ್ವಕಪ್ HERO ಯಾರು?

ಟಿ-20ಐ ಫಾರ್ಮೆಟ್ ಅಂತಾ ಬಂದಾಗ ಭಾರತದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾರನ್ನ ಮ್ಯಾಚ್ ಮಾಡೋರು ಯಾರೂ ಇಲ್ಲ ಅನ್ನಿಸ್ತಿತ್ತು. ಆದ್ರೀಗ ಅಭಿಷೇಕ್ ಗೆ ಕಾಂಪಿಟ್ ಮಾಡೋ ಥರ ಪರ್ಫಾಮೆನ್ಸ್ ಕೊಡ್ತಿರೋದು ಮತ್ತೊಬ್ಬ ಭಾರತೀಯ ಆಟಗಾರ ಇಶಾನ್ ಕಿಶನ್. ಮಾರ್ಡ್ರೆನ್ ಕ್ರಿಕೆಟ್ ನಲ್ಲಿ ಟಿ-20ಐ ಕ್ರಿಕೆಟ್ ಅಭಿಮಾನಿಗಳ ಫೇವರೆಟ್ ಫಾರ್ಮೆಟ್. ಬ್ಯಾಟರ್​ಗಳ ಅಬ್ಬರವನ್ನ ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಾರೆ. ಮೈದಾನದಲ್ಲಿ ಸಿಕ್ಸ್, ಫೋರ್ ಬಾರಿಸ್ತಾ ಇದ್ರೆ ಅತ್ತ ಗ್ಯಾಲರಿಯಲ್ಲಿ ಹುಚ್ಚೆದ್ದು ಕುಣೀತಾರೆ. ಒಂದ್ಕಡೆ ಬ್ಯಾಟರ್​ಗಳು ಬಿಗ್​ಹಿಟ್​ಗಳ ಮೂಲಕ ಹೀರೋ ಆಗ್ತಿದ್ರೆ ಅಟ್ ದಿ ಸೇಮ್ ಟೈಂ ಬೌಲರ್​ಗಳು ಡಮ್ಮಿ ಆಗ್ತಿರ್ತಾರೆ. ಅದ್ರಲ್ಲೂ ಭಾರತದ ಬ್ಯಾಟಿಂಗ್ ಅಬ್ಬರ ಅಂತೂ ನೆಕ್ಸ್ ಟ್ ಲೆವೆಲ್​ನಲ್ಲಿದೆ. ಓಪನರ್ ಆಗಿ ಅಭಿಷೇಕ್ ಶರ್ಮಾ ಎದುರಾಳಿ ಬೌಲರ್​ಗಳ ಚಳಿ ಬಿಡಿಸ್ತಿದ್ದಾರೆ. ಅಭಿಷೇಕ್​ಗೆ ಸಾಥ್ ಕೊಡೋಕೆ ಇಶಾನ್ ಕಿಶನ್ ಕೂಡ ಸೇರ್ಕೊಂಡಿದ್ದು ರನ್​ಗಳ ಮಳೆಯೇ ಸುರೀತಿದೆ.

2026ರ ಟೂರ್ನಿಯಲ್ಲಿ ಅಭಿಷೇಕ್ & ಕಿಶನ್ ನಂಬರ್ 1 ಫೈಟ್!

ಪ್ರಸ್ತುತ ನಡೀತಾ ಇರುವಂಥ ಟಿ-20 ವಿಶ್ವಕಪ್​ನಲ್ಲಿ ಅಭಿಷೇಕ್ ಶರ್ಮಾ ಟೂರ್ನಿಯ ಹೈಯೆಸ್ಟ್ ರನ್ ಸ್ಕೋರರ್ ಆಗ್ತಾರೆ ಅಂತಾ ಕೆಲವ್ರು ಪ್ರೆಡಿಕ್ಟ್ ಮಾಡಿದ್ರು. ಆಸ್ಟ್ರೇಲಿಯಾದ ದಂತಕಥೆ ರಿಕಿ ಪಾಂಟಿಂಗ್ ಕೂಡ ಅಭಿಷೇಕ್ ಬಗ್ಗೆ ಇದೇ ಭವಿಷ್ಯ ನುಡಿದಿದ್ದಾರೆ. ಬಟ್ ಈಗ ಇನ್ನೂ ಕೆಲವ್ರು ಇಶಾನ್ ಕಿಶನ್ ಈ ಬಾರಿ ಟೂರ್ನಿಯಲ್ಲಿ ಹೈಯೆಸ್ಟ್ ರನ್ ಸ್ಕೋರರ್ ಆಗ್ತಾರೆ ಅಂತಿದ್ದಾರೆ. ಇಬ್ಬರ ಪರ್ಫಾಮೆನ್ಸ್ ಕೂಡ ಹಾಗೇ ಇದೆ. ಲೆಫ್ಟ್ ಹ್ಯಾಂಡ್ ಬ್ಯಾಟರ್​ಗಳಾಗಿರೋ ಇಬ್ರೂ ನೆಕ್ಸ್​ಟ್ ಲೆವೆಲ್ ಸ್ಟ್ರೈಕ್​ರೇಟ್ ಹೊಂದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸಿರೀಸ್​ನಲ್ಲಿ ಇಶಾನ್ ಕಿಶನ್ 4 ಪಂದ್ಯಗಳಿಂದ ಶತಕ ಸೇರಿ 215 ರನ್ ಸಿಡಿಸಿ ಸರಣಿಯ ಸೆಕೆಂಡ್ ಹೈಯೆಸ್ಟ್ ಸ್ಕೋರರ್ ಆಗಿದ್ರು. ಸೌತ್ ಆಫ್ರಿಕಾ ವಿರುದ್ಧದ ವಾರ್ಮ್ ಅಪ್ ಮ್ಯಾಚಲ್ಲೂ 265ರ ಸ್ಟ್ರೈಕ್​ನಲ್ಲಿ ಬ್ಯಾಟ್ ಬೀಸಿ 53 ರನ್ ಗಳಿಸಿದ್ರು. ಕಿಶನ್ ಅಬ್ಬರದ ಮುಂದೆ ಅಭಿಷೇಕ್ ಬ್ಯಾಟಿಂಗ್​ ಸ್ಲೋ ಅನ್ನಿಸೋ ರೇಂಜ್​ಗೆ ಬ್ಯಾಟ್ ಬೀಸಿದ್ರು. ಐಸಿಸಿ ರ್ಯಾಂಕಿಂಗ್​ನಲ್ಲೀ ಬರ್ಜರಿ ಜಂಪ್ ಮಾಡಿದ್ದಾರೆ. ಇನ್ನು ಅಭಿಷೇಕ್ ಬಗ್ಗೆ ಮಾತಾಡೋದೇ ಬೇಡ. ಕಳೆದೊಂದು ವರ್ಷದಿಂದ ಭಾರತದ ಬಹುತೇಕ ಪಂದ್ಯಗಳ ಗೆಲುವಿನ ರೂವಾರಿ ಕೂಡ. ಅದೂ 194+ ಸ್ಟ್ರೈಕ್​ನಲ್ಲಿ ಬ್ಯಾಟ್ ಬೀಸಿದ್ದಾರೆ. ಈ ಸಲವೂ ಟೂರ್ನಿಯಲ್ಲಿ ಅಬ್ಬರಿಸೋದ್ರಲ್ಲಿ ಡೌಟೇ ಇಲ್ಲ. ಆದ್ರೆ ಕಳೆದೊಂದು ವರ್ಷದಿಂದ ಅಭಿಗೆ ಒಳ್ಳೇ ಪಾರ್ಟ್ನರ್​ ಸಿಕ್ಕಿರಲಿಲ್ಲ.

ಅಭಿಷೇಕ್ ಜೊತೆಗಿನ ಓಪನರ್ ಕಂಪ್ಲೀಟ್ ಫ್ಲ್ಯಾಪ್!

2024ರ ಟಿ-20 ವಿಶ್ವಕಪ್ ಬಳಿಕ 2026ರ ವಿಶ್ವಕಪ್ ಆರಂಭದ ನಡುವೆ ಭಾರತ 41 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದೆ. ಈ ಪೈಕಿ 33ರಲ್ಲಿ ಗೆಲುವು ಪಡೆದಿತ್ತು. ಜನವರಿ ಅಂತ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 4-1ರ ಅಂತರದಲ್ಲಿ ಗೆದ್ದು ವಿಶ್ವಕಪ್​ಗೆ ಕಾಲಿಟ್ಟಿತ್ತು. ಇಂಟ್ರೆಸ್ಟಿಂಗ್ ಅಂದ್ರೆ ಭಾರತದ ಈ ಗೆಲುವಿನ ಜರ್ನಿಯಲ್ಲಿ ಓಪನರ್​ ಆಗಿ ಅಭಿಷೇಕ್ ಶರ್ಮಾ ಕಡೆಯಿಂದ ಮಾತ್ರವೇ ಬಿಗ್ ಇನ್ನಿಂಗ್ಸ್ ಬಂದಿರೋದು. ಏಷ್ಯಾಕಪ್ ಟೈಮಲ್ಲಿ ಅಭಿಷೇಕ್​ ಜೊತೆಯಾದ ಶುಭ್​ಮನ್ ಗಿಲ್ ಬ್ಯಾಟಿಂದ ಒಂದೇ ಒಂದು ಅರ್ಧಶತಕ ಬರ್ಲಿಲ್ಲ. ಌಂಡ್ ನೆಕ್ಸ್​ಟ್ ನ್ಯೂಜಿಲೆಂಡ್ ಸರಣಿ ವೇಳೆ ಸಂಜು ಸ್ಯಾಮ್ಸನ್​ಗೆ ಓಪನರ್ ಆಗಿ ಬಡ್ತಿ ಸಿಕ್ತು. ಬಟ್ ಸಂಜು ಕಡೆಯಿಂದ್ಲೂ ಬಿಗ್ ಸ್ಕೋರ್ ಬರ್ಲಿಲ್ಲ. ಸೋ ಅಲ್ಲಿಗೆ ಕಳೆದೊಂದು ವರ್ಷದಲ್ಲಿ ಭಾರತದ ಪರ ಟಿ-20ಐನಲ್ಲಿ ಓಪನರ್​ಗಳಲ್ಲಿ ಅಭಿಷೇಕ್ ಬಿಟ್ರೆ ಮತ್ತೊಬ್ಬ ಓಪನರ್​ನಿಂದ ಅರ್ಧಶತಕ ಬಂದೇ ಇಲ್ಲ. ಇದನ್ನ ನೋಡಿದ್ರೇನೆ ಗೊತ್ತಾಗುತ್ತೆ ಅಭಿಷೇಕ್ ಎಂಥಾ ಕ್ವಾಲಿಟಿ ಇನ್ನಿಂಗ್ಸ್ ಆಡಿದ್ದಾರೆ. ಬಟ್ ಈಗ ಅಭಿಷೇಕ್ ಮತ್ತು ಕಿಶನ್ ಜೊತೆಯಾಗಿದ್ದಾರೆ. ಇಬ್ಬರೂ ಕೂಡ ಬೌಲರ್​ಗಳಿಗೆ ಬೆಲೆಯೇ ಇಲ್ಲದಂತೆ ಬ್ಯಾಟಿಂಗ್ ಮಾಡ್ತಿದ್ದಾರೆ. ಸೋ ಈ ಟೂರ್ನಿಯಲ್ಲಿ ಇವ್ರಿಬ್ರೇ ಭಾರತದ ಮ್ಯಾಚ್ ವಿನ್ನರ್ಸ್ ಌಂಡ್ ಹೈಯೆಸ್ಟ್ ಸ್ಕೋರರ್ ಲಿಸ್ಟ್​ನಲ್ಲಿ ಕಾಂಪಿಟೇಟರ್ಸ್.

Shantha Kumari

Leave a Reply

Your email address will not be published. Required fields are marked *