ODI ಕ್ರಿಕೆಟ್ ಗೂ ಅಭಿಷೇಕ್ ಎಂಟ್ರಿ? – HITಮ್ಯಾನ್ ರಿಪ್ಲೇಸ್ ಆಗ್ತಾರಾ ಶರ್ಮಾ?
AUS ಸರಣಿ ಸೋಲಿಗೆ ಇದೇ ಸಲ್ಯೂಷನ್?

ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಏಕದಿನ ಸರಣಿ ಸೋತ್ಮೇಲೆ ಟೀಂ ಸೆಲೆಕ್ಷನ್ ಬಗ್ಗೆ ಒಂದಷ್ಟು ಚರ್ಚೆಗಳಾಗ್ತಿವೆ. ಸರಣಿಗೆ ಭಾರತದ ಪರ ಯಾರನ್ನೆಲ್ಲಾ ಸೆಲೆಕ್ಟ್ ಮಾಡ್ಬೋದಿತ್ತು, ಯಾರನ್ನ ಕೈಬಿಡಬಹುದಿತ್ತೋ ಅನ್ನೋ ಟಾಪಿಕ್ ಅದು. ಇಂಟ್ರೆಸ್ಟಿಂಗ್ ಅಂದ್ರೆ ಈ ರೇಸ್ನಲ್ಲಿ ಅಭಿಷೇಕ್ ಶರ್ಮಾ ಹೆಸರು ಟ್ರೆಂಡಿಂಗ್ನಲ್ಲಿದೆ. ಟಿ-20ಐ ಕ್ರಿಕೆಟ್ನ ದಿ ಬೆಸ್ಟ್ ಬ್ಯಾಟ್ಸ್ಮನ್ ಆಗಿರೋ ಅಭಿಷೇಕ್ ಶರ್ಮಾ ಏಕದಿನ ಮಾದರಿಗೂ ಕಾಲಿಡೋ ಟೈಂ ಹತ್ತಿರವಾದಂತಿದೆ.
ಇದನ್ನೂ ಓದಿ : ಆಸ್ಟ್ರೇಲಿಯಾವನ್ನು 236 ರನ್‌ಗಳಿಗೆ ನಿಯಂತ್ರಿಸಿದ ಭಾರತ – ಬೌಲಿಂಗ್‌ನಲ್ಲಿ ರಾಣಾ, ಫೀಲ್ಡಿಂಗ್‌ನಲ್ಲಿ ಕೊಹ್ಲಿ, ಶ್ರೇಯಸ್ ಕಮಾಲ್
ಭಾರತ ವರ್ಸಸ್ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯನ್ನ ಆಸ್ಟ್ರೇಲಿಯಾ ಗೆದ್ದು ಬೀಗಿದೆ. ತವರಿನಲ್ಲಿ ನಡೆದ ಸಿರೀಸ್ನಲ್ಲಿ ಬ್ಯಾಟಿಂಗ್ ಌಂಡ್ ಬೌಲಿಂಗ್‌ನಲ್ಲಿ ಕಂಪ್ಲೀಟ್ ಡಾಮಿನೇಟ್ ಮಾಡಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನ ಕೈವಶ ಮಾಡ್ಕೊಂಡಿತ್ತು. ಬಟ್ ಭಾರತದ ಪರ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ಬರ್ಲಿಲ್ಲ. ಅಲ್ದೇ ಟಾಪ್ ಆರ್ಡರ್ ಬ್ಯಾಟ್ಗಳೇ ಕೈಕೊಟ್ಟಿದ್ರು. ಹೀಗಾಗಿ ಮುಂದಿನ ದಿನಗಳಲ್ಲಿ ಏಕದಿನ ಮಾದರಿಯಲ್ಲಿ ಒಂದಷ್ಟು ಬದಲಾವಣೆ ಮಾಡೋ ಪ್ಲ್ಯಾನ್ ನಡೀತಿದೆ. ಟಿ-20ಐನ ಸ್ಫೋಟಕ ಬ್ಯಾಟರ್ ಆಗಿರೋ ಅಭಿಷೇಕ್ ಶರ್ಮಾರನ್ನ ಏಕದಿನ ಮಾದರಿಗೂ ಕಣಕ್ಕಿಳಿಸೋ ಯೋಜನೆ ಇದೆ.
ಏಷ್ಯಾಕಪ್ ಹೀರೋಗೆ ಒಲಿಯುತ್ತಾ ಏಕದಿನ ಅದೃಷ್ಟ?
ಏಷ್ಯಾ ಕಪ್ ಟೂರ್ನಿಯಲ್ಲಿ ಎದುರಾಳಿ ಬೌಲರ್ ಗಳಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಟಿ-20ಐ ಟೀಮ್ನ ಯಂಗ್ಗನ್ ಅಭಿಷೇಕ್ ಶರ್ಮಾ ಟೂರ್ನಿಯಲ್ಲಿ ಹೈಯೆಸ್ಟ್ ರನ್ ಸ್ಕೋರರ್ ಆಗಿದ್ರು. 7 ಇನ್ನಿಂಗ್ಸ್ ಗಳಿಂದ 314 ರನ್ಸ್ ಕಲೆ ಹಾಕಿದ್ರು. ಅಲ್ದೇ ಕಳೆದೊಂದು ವರ್ಷದಿಂದ ಭಾರತ ಟಿ-20 ತಂಡದ ಬ್ಯಾಟಿಂಗ್ ಬ್ರಹ್ಮಾಸ್ತ್ರವಾಗಿದ್ದಾರೆ. ಕಳೆದ ವರ್ಷ ಜುಲೈ 6ರಂದು ಹರಾರೆಯಲ್ಲಿ ಜಿಂಬಾಬ್ವೆ ವಿರುದ್ದ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ ಅಭಿಷೇಕ್ ಶರ್ಮಾ ಈವರೆಗೆ ಒಟ್ಟು 24 ಪಂದ್ಯಗಳನ್ನ ಆಡಿದ್ದಾರೆ. 849 ರನ್ಸ್ ಕಲೆ ಹಾಕಿದ್ದಾರೆ. 2 ಶತಕಗಳು ಬಂದಿವೆ. ಅದೆಲ್ಲಕ್ಕಿಂತ ಹೆಚ್ಚಾಗಿ 196 ಪ್ಲಸ್ ಸ್ಟ್ರೈಕ್ ರೇಟ್ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಏಕದಿನ ಮಾದರಿಗೂ ಅಭಿಷೇಕ್ರನ್ನ ಸೇರಿಸಿಕೊಳ್ಳೋ ಪ್ಲ್ಯಾನ್ ಇದೆ. ಅದೂ ಅಲ್ದೇ ಟೀಂ ಇಂಡಿಯಾ 2027ರ ಏಕದಿನ ವಿಶ್ವಕಪ್‌ಗೂ ಮುನ್ನ ಇನ್ನೂ 24 ODI ಪಂದ್ಯಗಳನ್ನು ಆಡಲಿದೆ. ಹೀಗಾಗಿ ಫ್ಯೂಚರ್ ದೃಷ್ಟಿಯಿಂಗ್ ಗಿಲ್ ನಾಯಕರಾಗಿದ್ದಾರೆ. ಹೀಗಿದ್ರೂ 2027ರ ಏಕದಿನ ವಿಶ್ವಕಪ್ವರೆಗೂ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಅಲ್ಲಿವರೆಗೆ ತಂಡದಲ್ಲಿ ಉಳಿಸಿಕೊಳ್ಳುವ ಬಗ್ಗೆಯೂ ಅನುಮಾನಗಳಿವೆ. ಅದಕ್ಕೆ ಈಗಾಗ್ಲೇ ಪರ್ಯಾಯ ಆಟಗಾರರನ್ನೂ ಬಿಸಿಸಿಐ ರಿಪ್ಲೇಸ್ ಮಾಡೋ ಯೋಜನೆಯಲ್ಲಿದೆ. ಅದ್ರಲ್ಲಿ ಅಭಿಷೇಕ್ ಶರ್ಮಾ ಒಬ್ರು. ಅಷ್ಟಕ್ಕೂ ಇಲ್ಲಿ ಅಭಿಷೇಕ್ ಏಕದಿನ ಮಾದರಿ ತಂಡವನ್ನ ಸೇರೋಕೆ ಸಾಕಷ್ಟು ಸಾಲಿಡ್ ರೀಸನ್ಗಳೇ ಇವೆ.
ಬ್ಯಾಟಿಂಗ್ ಬ್ರಹ್ಮಾಸ್ತ್ರ ಅಭಿಷೇಕ್!
- ರೋಹಿತ್ ಬಳಿಕ ಉತ್ತಮ ಓಪನರ್
- ಆರಂಭದಲ್ಲೇ ಬಿಗ್ ಹಿಟ್ ಗಳ ಬಲ
- ಲೆಫ್ಟ್ ಹ್ಯಾಂಡ್ ಬ್ಯಾಟರ್ ಆಗಿರೋದು
- ಟಿ-20ಐ ಫಾರ್ಮೆಟ್ ನಲ್ಲಿ ಪವರ್ ಶೋ
- ವೈಟ್ ಬಾಲ್ ನಲ್ಲಿ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್

ನೋಡಿರಿ

