ಭಾರತದ ಬ್ರಹ್ಮಾಸ್ತ್ರ ಅಭಿಷೇಕ್ – 200+ ಸ್ಟ್ರೈಕ್ ರೇಟ್.. ODIಗೂ ಚಾನ್ಸ್?
BCCIನಿಂದ ಸಿಕ್ಕಿತಾ ಬಂಪರ್ ಗಿಫ್ಟ್?

ಭಾರತದ ಬ್ರಹ್ಮಾಸ್ತ್ರ ಅಭಿಷೇಕ್ – 200+ ಸ್ಟ್ರೈಕ್ ರೇಟ್.. ODIಗೂ ಚಾನ್ಸ್?BCCIನಿಂದ ಸಿಕ್ಕಿತಾ ಬಂಪರ್ ಗಿಫ್ಟ್?

ಟಿ-20ಐ ಕ್ರಿಕೆಟ್​ನ ಸೆನ್ಸೇಷನಲ್ ಬ್ಯಾಟರ್ ಅಭಿಷೇಕ್ ಶರ್ಮಾ. ಕ್ರಿಸ್​ನಲ್ಲಿ ಎಷ್ಟೊತ್ತು ಇರ್ತೀನಿ ಅನ್ನೋದು ಮ್ಯಾಟ್ರ್ ಅಲ್ಲ. ಇರುವಷ್ಟು ಹೊತ್ತು ಎಷ್ಟು ರನ್ಸ್ ಬಂತು ಅನ್ನೋದನ್ನೇ ಅವ್ರ ಮೈಂಡ್​ನಲ್ಲಿರುತ್ತೆ. ಹಾಫ್ ಸೆಂಚುರಿ, ಸೆಂಚುರಿಗಳಿಗೆಲ್ಲಾ ತಲೆಕೆಡಿಸಿಕೊಳ್ಳದೆ ಬಿಗ್ ಹಿಟ್​ಗಳ ಮೂಲಕವೇ ಸೌಂಡ್ ಮಾಡ್ತಿದ್ದಾರೆ. ಮಾರ್ಡ್ರೆನ್ ಕ್ರಿಕೆಟ್​ನಲ್ಲಿ ಅಭಿಮಾನಿಗಳ ಫೇವರೆಟ್ ಫಾರ್ಮೆಟ್ ಅಂದ್ರೆ ಟಿ-20 ಫಾರ್ಮೇಟ್. ಅದು ಲೀಗ್ ಆದ್ರೂ ಅಷ್ಟೇ ಇಂಟರ್ ನ್ಯಾಷನಲ್ ಮ್ಯಾಚಸ್ ಇದ್ರೂ ಅಷ್ಟೇ. ಅಲ್ಲೇನಿದ್ರೂ ಪವರ್ ಹಿಟ್ಟರ್​ಗಳಿಗೇ ವ್ಯಾಲ್ಯೂ. ಸೆಟಲ್ ಆಗ್ಬೇಕು, ಡಿಫೆನ್ಸಿವ್ ಆಗಿ ಆಡ್ತೀನಿ, ರನ್ಸ್ ಓಡ್ತೀನಿ ಅನ್ನೋದೆಲ್ಲಾ ಇರಲ್ಲ. ಫಸ್ಟ್ ಬಾಲ್​ನಲ್ಲೇ ಸಿಕ್ಸೋ, ಫೋರೋ ಬಂತಾ ನೋಡು ಅನ್ನೋ ಹಾಗೇ ಬ್ಯಾಟ್ ಬೀಸ್ಬೇಕು. ಅದು ನೋಡೋವ್ರಿಗೂ ಒಂಥರಾ ಥ್ರಿಲ್. ಇದನ್ನ ಕರೆಕ್ಟಾಗಿ ಮಾಡ್ತಿರೋದು ಅಭಿಷೇಕ್ ಶರ್ಮಾ. ಅಭಿಷೇಕ್ ಕ್ರೀಸ್​ನಲ್ಲಿ ಇದ್ದಾರೆ ಅಂದ್ರೆ ಅದ್ರ ಮಜಾನೇ ಬೇರೆ. ಬಾಲ್ ಟು ಬಾಲ್ ಸಿಕ್ಸ್, ಫೋರ್​ನೇ ನಿರೀಕ್ಷೆ ಮಾಡ್ತಿರ್ತಾರೆ. ಇದೇ ಕಾರಣಕ್ಕೆ ಟಿ-20 ಕ್ರಿಕೆಟ್​ನಲ್ಲಿ ಅಭಿಷೇಕ್ ಟಾಪ್ 1 ಬ್ಯಾಟ್ಸ್​ಮನ್ ಆಗಿದ್ದಾರೆ. ಅದ್ರಲ್ಲೂ ಏಷ್ಯಾಕಪ್ ಟೂರ್ನಿ ಆದ್ಮೇಲೆ ಇಡೀ ಕ್ರಿಕೆಟ್ ಜಗತ್ತೇ ಅಭಿಷೇಕ್ ಬಗ್ಗೆ ಮಾತ್ನಾಡ್ತಿದೆ.

200ರ ಸ್ಟ್ರೈಕ್ ರೇಟ್ ನಲ್ಲಿ ರನ್ಸ್ ಕಲೆ ಹಾಕಿದ ಅಭಿಷೇಕ್!

ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಬೇಗ ಔಟ್ ಆದ್ರೂ ಅನ್ನೋದನ್ನ ಬಿಟ್ರೆ ಉಳಿದೆಲ್ಲಾ ಪಂದ್ಯಗಳಲ್ಲೂ ಅದ್ಭುತವಾಗಿ ಬ್ಯಾಟ್ ಬೀಸಿದ್ದಾರೆ. ಅದ್ರಲ್ಲೂ ಸೂಪರ್ 4 ಹಂತದಲ್ಲಿ ಹ್ಯಾಟ್ರಿಕ್ ಫಿಫ್ಟಿ ಬಾರಿಸಿದ್ರು. ಅದೂ ಕೂಡ ಟೂರ್ನಿಯ ಏಳು ಪಂದ್ಯಗಳಲ್ಲಿ 200ರ ಸ್ಟ್ರೈಕ್ ರೇಟ್​ನಲ್ಲಿ 32 ಬೌಂಡರಿ ಮತ್ತು 19 ಸಿಕ್ಸರ್‌ ಗಳೊಂದಿಗೆ 314 ರನ್‌ಗಳನ್ನು ಗಳಿಸಿದ್ರು. ಅಭಿಷೇಕ್ ಟೂರ್ನಿಯ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಪ್ಲೇಯರ್ ಆಫ್ ದಿ ಟೂರ್ನಿಮೆಂಟ್ ಪ್ರಶಸ್ತಿಯನ್ನು ಗೆದ್ರು. ಇದೇ ಪರ್ಫಾಮೆನ್ಸ್ ಈಗ ಐಸಿಸಿ ರ್ಯಾಂಕಿಂಗ್​ನಲ್ಲಿ ವಿಶ್ವದಾಖಲೆ ಬರೆಯುವಂತೆ ಮಾಡಿದೆ.

931 ರೇಟಿಂಗ್ ಪಾಯಿಂಟ್ಸ್ ಗಳೊಂದಿಗೆ ವಿಶ್ವದಾಖಲೆ!

ಏಷ್ಯಾಕಪ್ ಟೂರ್ನಿಯಲ್ಲಿ ರನ್ ಮಳೆ ಹರಿಸಿದ ಅಭಿಷೇಕ್ ಐಸಿಸಿ ಶ್ರೇಯಾಂಕದಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಐಸಿಸಿ ಟಿ20 ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ನಂ. 1 ಸ್ಥಾನದಲ್ಲೇ ಮುಂದುವರಿದಿದ್ದು 931 ರೇಟಿಂಗ್ ಪಾಯಿಂಟ್‌ಗಳೊಂದಿಗೆ ವಿಶ್ವದಾಖಲೆ ಬರೆದಿದ್ದಾರೆ. ಇದುವರೆಗೂ ಯಾರೂ ಕೂಡ 930ರ ಮೇಲೆ ರೇಟಿಂಗ್ ಪಾಯಿಂಟ್ಸ್ ಪಡೆದಿರಲಿಲ್ಲ. ಈ ಹಿಂದೆ ಐಸಿಸಿ ಟಿ20 ಶ್ರೇಯಾಂಕದಲ್ಲಿ ಭಾರತದ ಸೂರ್ಯಕುಮಾರ್ ಯಾದವ್ ಅತ್ಯಧಿಕ ಅಂದರೆ 912 ರೇಟಿಂಗ್ ಪಾಯಿಂಟ್‌ಗಳನ್ನು ತಲುಪಿದ್ದರೆ, ವಿರಾಟ್ ಕೊಹ್ಲಿ 909 ರೇಟಿಂಗ್ ಪಾಯಿಂಟ್‌ಗಳನ್ನು ಕಲೆಹಾಕಿದ್ದರು. ಆದರೆ, ಅಭಿಷೇಕ್ ಶರ್ಮಾ ಈ ವಿಷಯದಲ್ಲಿ ಇಬ್ಬರನ್ನೂ ಹಿಂದಿಕ್ಕಿದ್ದಾರೆ. ಹೀಗೆ ಅಭಿಷೇಕ್ ಬ್ಯಾಟಿಂಗ್​ಗೆ ಫುಲ್ ಇಂಪ್ರೆಸ್ ಆಗಿರುವ ಬಿಸಿಸಿಐ ಭರ್ಜರಿ ಗಿಫ್ಟ್ ಕೊಡೋ ಪ್ಲ್ಯಾನ್​ನಲ್ಲಿದೆ.

ಏಕದಿನಕ್ಕೂ ಕಾಲಿಡ್ತಾರಾ ಅಭಿ? ಆಸ್ಟ್ರೇಲಿಯಾ ಟೂರ್ ಗೆ ಸೆಲೆಕ್ಟ್?

2024ರ ಟಿ-20 ವಿಶ್ವಕಪ್ ಮುಗಿದ ಬಳಿಕ ಟೀಂ ಇಂಡಿಯಾ ಟಿ-20ಐ ಮಾದರಿಗೆ ಸೆಲೆಕ್ಟ್ ಆಗಿದ್ದ ಅಭಿಷೇಕ್ ಅಲ್ಲಿಂದ ಈಚೆಗೆ ಸತತ ಪಂದ್ಯಗಳನ್ನ ಆಡಿದ್ದಾರೆ. ಇದೀಗ ಟಿ-20ಐ ಜೊತೆಗೆ ಏಕದಿನಕ್ಕೂ ಅಭಿಷೇಕ್​ರನ್ನ ಸೆಲೆಕ್ಟ್ ಮಾಡೋಕೆ ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗುದೆ. ಇದೇ ತಿಂಗಳಲ್ಲಿ ಟೀಮ್​ ಇಂಡಿಯಾ ಆಸ್ಟ್ರೇಲಿಯಾ ಟೂರ್ ಮಾಡಲಿದ್ದು ಅಲ್ಲಿ ಒನ್​ ಡೇ ಹಾಗೂ ಟಿ20 ಸರಣಿಗಳನ್ನ ಆಡಲಿದೆ. ಏಷ್ಯನ್​ ಸಮರದಲ್ಲಿ ಮಿಂಚಿರುವ ಅಭಿಷೇಕ್​ ಶರ್ಮಾಗೆ ಒನ್​ ಡೇ ತಂಡದಲ್ಲಿ ಸ್ಥಾನ ನೀಡಲು ಚರ್ಚೆಗಳು ನಡೆದಿದೆ. ಚೀಫ್​ ಸೆಲೆಕ್ಟರ್​​ ಅಜಿತ್​ ಅಗರ್ಕರ್​​, ಹೆಡ್​ ಕೋಚ್​​ ಗೌತಮ್​ ಗಂಭೀರ್ ಈ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದು, ಅಭಿಷೇಕ್​ಗೆ ಸ್ಥಾನ ಕಲ್ಪಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಆಲ್ ಫಾರ್ಮೆಟ್ ಪ್ಲೇಯರ್ ಆಗಿ ಬೆಳೆಸೋಕೆ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಟಿ-20ಐ ಫಾರ್ಮೆಟ್​ಗೆ ಹೇಳಿ ಮಾಡಿಸಿದಂತ ಬ್ಯಾಟರ್ ಅಭಿಷೇಕ್ ಶರ್ಮಾ. ಈಗಾಗ್ಲೇ ಕ್ರಿಕೆಟ್ ಜಗತ್ತೇ ಇವ್ರ ಬಗ್ಗೆ ಮಾತ್ನಾಡುವಂತೆ ಮಾಡಿದ್ದಾರೆ. ಎದುರಾಳಿ ಬೌಲರ್​ಗಳು ಇವ್ರ ವಿಕೆಟ್​ನೇ ಫೋಕಸ್ ಮಾಡಿ ಸ್ಟ್ರಾಟರ್ಜಿ ಮಾಡುವಷ್ಟರ ಮಟ್ಟಿಗೆ ಭಯ ಹುಟ್ಟಿಸಿದ್ದಾರೆ. ಸದ್ಯ ಏಷ್ಯಾಕಪ್ ಟೂರ್ನಿಯಲ್ಲಿ ಟ್ರೋಫಿ ಗೆಲುವಿನ ಹೀರೋ ಆಗಿರುವ ಅಭಿಷೇಕ್ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಅಭಿಷೇಕ್ ಶರ್ಮಾ ಅವರ ಸಹೋದರಿ ಕೋಮಲ್ ಶರ್ಮಾ ಅವರ ವಿವಾಹ ಅಕ್ಟೋಬರ್ 3 ಅಂದ್ರೆ ಕಳೆದ ಶುಕ್ರವಾರವಷ್ಟೇ ನೆರವೇರಿದೆ.

Shantha Kumari