SRHಗೆ ಅಭಿಷೇಕ್ ಶರ್ಮಾ ಸ್ಪೋಟಕ ಶತಕದ ಬಲ – ಡಿಸಿಗೆ ಮಣ್ಣು ಮುಕ್ಕಿಸಿದ ಅಕ್ಷರ್ ಪಟಾಲಂ

ಅಭಿಷೇಕ್ ಶರ್ಮಾ ಅವರ ಸ್ಪೋಟಕ ಶತಕದ ಬಲದಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 31ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 47 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯಲ್ಲಿ ನಾಲ್ಕನೇ ಗೆಲುವು ಪಡೆಯುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಪ್ರವೇಶ ಮಾಡಿತು. ಇನ್ನು ಸೋಲು ಅನುಭವಿಸಿದ ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ಐದನೇ ಸ್ಥಾನದಲ್ಲಿಯೇ ಉಳಿಯಿತು.
ಮಂಗಳವಾರ ಇಲ್ಲಿನ ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಎಸ್‌ಆರ್‌ಎಚ್ ನೀಡಿದ್ದ 243 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 21 ರನ್ ಇರುವಾಗಲೇ ಪಥುಮ್ ನಿಸಾಂಕ ಅವರ ವಿಕೆಟ್ ಅನ್ನು ಕಳೆದುಕೊಂಡಿತು. ಇದರ ಪರಿಣಾಮ ಪವರ್‌ಪ್ಲೇನಲ್ಲಿ ಡೆಲ್ಲಿ 59 ರನ್‌ಗಳಿಗೆ ಸೀಮಿತವಾಗಿತ್ತು. 23 ಎಸೆತಗಳಲ್ಲಿ 37 ರನ್ ಗಳಿಸಿದ ಬಳಿಕ ಕೆಎಲ್ ರಾಹುಲ್ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ: ಶ್ರೇಯಸ್ + ರಿಕಿ = ಶಿಕಾರಿ – 6 ಪಂದ್ಯಗಳಲ್ಲೂ UNBEATEN ಆಗಿದ್ದೇಗೆ?
ಸ್ಪೋಟಕ ಬ್ಯಾಟ್ ಮಾಡಿದ ನಿತೀಶ್ ರಾಣಾ 30 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 57 ರನ್ ಗಳಿಸಿ ಡೆಲ್ಲಿ ತಂಡವನ್ನು ಗೆಲುವಿನ ಹಾದಿಯಲ್ಲಿರಿಸಿದ್ದರು. ಆದರೆ, ಇಶಾನ್ ಮಾಲಿಂಗ ಬುದ್ದಿವಂತಿಕೆಯಿಂದ ರಾಣಾ ಅವರನ್ನು ಔಟ್ ಮಾಡಿದರು. 16 ಎಸೆತಗಳಲ್ಲಿ 27 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಟ್ರಿಸ್ಟನ್ ಸ್ಟಬ್ಸ್ ಅವರನ್ನು ಕೂಡ ಇಶಾನ್ ಮಾಲಿಂಗ ಪೆವಿಲಿಯನ್ ಹಾದಿ ತೋರಿಸಿದರು. ಇದಕ್ಕೂ ಮುನ್ನ ಇವರು ಡೇವಿಡ್ ಮಿಲ್ಲರ್ ಅವರನ್ನು ಡಕ್‌ಔಟ್ ಮಾಡಿದ್ದರು.
ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಕೊನೆಯವರೆಗೂ ಹೋರಾಟ ನಡೆಸಿದ ಸಮೀರ್ ರಿಝ್ವಿ 28 ಎಸೆತಗಳಲ್ಲಿ 41 ರನ್‌ಗಳನ್ನು ಗಳಿಸಿದರೂ ತಮ್ಮ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್‌ಗಳಿಗೆ 9 ವಿಕೆಟ್ ನಷ್ಟಕ್ಕೆ 195 ರನ್ ಗಳಿಗೆ ಶಕ್ತವಾಯಿತು. ಎಸ್‌ಆರ್‌ಎಚ್ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಇಶಾನ್ ಮಾಲಿಂಗ 32 ರನ್ ನೀಡಿ 4 ವಿಕೆಟ್ ಸಾಧನೆ ಮಾಡಿದರು. 20ನೇ ಓವರ್‌ನಲ್ಲಿ ಹರ್ಷ್ ದುಬೇ ಮೂರು ವಿಕೆಟ್ ಪಡೆದರು.

ನೋಡಿರಿ

