ಬ್ಯಾಟಿಂಗ್ ಉಗ್ರರೂಪಿ ಅಭಿಷೇಕ್ ಶರ್ಮಾ – ವಿಶ್ವಕಪ್ ನಲ್ಲೂ ಪವರ್ ಪ್ಲೇ ಸ್ಟ್ರೋಕ್
50+ ರನ್ಸ್.. ಹೇಗಿದೆ ಸ್ಟ್ರೈಕ್ ರೇಟ್?

ಬ್ಯಾಟಿಂಗ್ ಉಗ್ರರೂಪಿ ಅಭಿಷೇಕ್ ಶರ್ಮಾ – ವಿಶ್ವಕಪ್ ನಲ್ಲೂ ಪವರ್ ಪ್ಲೇ ಸ್ಟ್ರೋಕ್50+ ರನ್ಸ್.. ಹೇಗಿದೆ ಸ್ಟ್ರೈಕ್ ರೇಟ್?

ಟಿ-20ಐನಲ್ಲಿ ಬ್ಯಾಟರ್​ಗಳದ್ದೇ ದರ್ಬಾರ್. ಅದ್ರಲ್ಲೂ ಪವರ್ ಪ್ಲೇನಲ್ಲಿ ಬರೋ ಸ್ಕೋರ್​ಗಳೇ ಗೇಮ್ ಡಿಸೈಡರ್ ಆಗಿರುತ್ತೆ. ಭಾರತದ ಈ ಸಕ್ಸಸ್​ಫುಲ್ ಜರ್ನಿ ಹಿಂದಿನ ಸೀಕ್ರೆಟ್ ಕೂಡ ಇದೇ. ಟೀಂ ಇಂಡಿಯಾದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಮೊದಲ ಆರು ಓವರ್​ಗಳಲ್ಲೇ ಗೇಮ್ ಟರ್ನಿಂಗ್ ಪರ್ಫಾಮೆನ್ಸ್ ನೀಡ್ತಿದ್ದಾರೆ.  ಸ್ಟ್ರೈಕ್ ರೇಟ್ ನೆಕ್ಸ್​ಟ್ ಲೆವೆಲ್​ನಲ್ಲಿದೆ. ಭಾರತದಲ್ಲೇ ಟೂರ್ನಿ ನಡೆಯೋದ್ರಿಂದ ಸಣ್ಣ ಬೌಂಡರಿಗಳಿದ್ದು ಟಾರ್ಗೆಟ್ ಸೆಟ್ ಮಾಡೋ ತಂಡಕ್ಕೆ ಬಿಗ್ ಸ್ಕೋರ್ ಕಲೆ ಹಾಕೋ ಚಾಲೆಂಜ್ ಇದೆ.

ಇದನ್ನೂ ಓದಿ : RCB ಸೇಲ್‌ಗೆ ಜೋರಾದ ಪ್ರಕ್ರಿಯೆ – ಯಾರ ಪಲಾಗುತ್ತೆ ಬೆಂಗಳೂರು ತಂಡ?

2024ರ ಟಿ-20 ವಿಶ್ವಕಪ್​ನಲ್ಲಿ ಭಾರತದ ಪರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಡಿದ್ರು. ಇಬ್ರಲ್ಲೂ ಸಾಕಷ್ಟು ಎಕ್ಸ್​ಪೀರಿಯನ್ಸ್ ಇದ್ದದ್ದು ಟ್ರೋಫಿ ಗೆಲುವಿಗೆ ಪ್ಲಸ್ ಪಾಯಿಂಟ್ ಆಗಿತ್ತು. ಈ ಸಲ ಭಾರತದ ಬ್ಯಾಟಿಂಗ್ ಇನ್ನಷ್ಟು ಅಗ್ರೆಸ್ಸಿವ್ ಆಗಿದ್ದು ಟೂರ್ನಿಯಲ್ಲಿ ಮೋಸ್ಟ್ ಡೇಂಜರಸ್ ಟೀಂ ಆಗಿದೆ. ಮಾಜಿ ನಾಯಕ ಎಂಎಸ್ ಧೋನಿ ಕೂಡ ಇದನ್ನೇ ಹೇಳಿದ್ದಾರೆ. ಅದ್ರಲ್ಲೂ ಅಭಿಷೇಕ್ ಶರ್ಮಾ ಮೇಲೆ ಇಡೀ ಕ್ರಿಕೆಟ್ ಲೋಕದ ಕಣ್ಣಿದೆ. ಪವರ್ ಪ್ಲೇನಲ್ಲೇ ಪವರ್ ಶೋ ತೋರಿಸೋ ಅಭಿಷೇಕ್ ಟೂರ್ನಮೆಂಟ್​ನ ಹೈಯೆಸ್ಟ್ ರನ್ ಸ್ಕೋರರ್ ಆಗ್ತಾರೆ ಅನ್ನೋ ಭವಿಷ್ಯವೂ ಬಂದಿದೆ.

ಭಾರತದ ಮ್ಯಾಚ್ ವಿನ್ನಿಂಗ್ ಬ್ಯಾಟರ್ ಅಭಿಷೇಕ್ ಶರ್ಮಾ!

ಭಾರತದ ಗ್ರೌಂಡ್​ನಲ್ಲಿ ಚಿಕ್ಕದಾಗಿರೋದ್ರಿಂದ ಫಸ್ಟ್ ಬ್ಯಾಟ್ ಮಾಡೋ ಟೀಂ 225 ಅಥವಾ ಅದಕ್ಕಿಂತ ಜಾಸ್ತಿ ನಂಬರ್ ಟಾರ್ಗೆಟ್ ಸೆಟ್ ಮಾಡ್ಬೇಕು ಅಂತಾ ಪ್ರೆಡಿಕ್ಟ್ ಮಾಡಲಾಗ್ತಿದೆ. ಈ ಸ್ಕೋರ್ ಬರ್ಬೇಕು ಅಂದ್ರೆ ಪವರ್​ ಪ್ಲೇನಲ್ಲಿ ಮಿನಿಮಂ 75ಪ್ಲಸ್ ರನ್ಸ್ ಬೇಕು. ಭಾರತದ ಪರ ಅಭಿಷೇಕ್ ಶರ್ಮಾ ಈ ಕೆಲಸ ಮಾಡ್ತಾರೆ. ಅವ್ರು ಕ್ರೀಸ್​ನಲ್ಲಿ ಇರೋವರೆಗೂ ರನ್​ಗಳ ಮಳೆಯಾಗುತ್ತೆ. ಌಂಡ್ ಈಗ ಇಶಾನ್ ಕಿಶನ್ ಕೂಡ ಇರೋದು ಪ್ಲಸ್ ಪಾಯಿಂಟ್. ಌಂಡ್ ಅಭಿಷೇಕ್ 194.97 ರ ಅದ್ಭುತ ಸೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಅಭಿಷೇಕ್ ಅವರ ಫಿಯರ್ ಲೆಸ್ ಬ್ಯಾಟಿಂಗ್ ಬಿಗ್ ಅಡ್ವಾಂಟೇಜ್. 2025 ರಲ್ಲಿ ಅಭಿಷೇಕ್ ಅವರ ಭರ್ಜರಿ ಬ್ಯಾಟಿಂಗ್​ನಿಂದ  ಭಾರತ ಪವರ್​ ಪ್ಲೇನಲ್ಲಿ 10.86 ರ ಅತ್ಯುತ್ತಮ ರನ್-ರೇಟ್ ಹೊಂದಿತ್ತು. ಌಂಡ್ ಇಂಗ್ಲೆಂಡ್ ಕೂಡ ಚೆನ್ನಾಗಿ ಪರ್ಫಾಮ್ ಮಾಡ್ತಿದ್ದು 10.52 ರ ಅತ್ಯುತ್ತಮ ಪವರ್‌ಪ್ಲೇ ರನ್-ರೇಟ್ ಅನ್ನು ಹೊಂದಿದೆ. ಇನ್ನು ಅಭಿಷೇಕ್ ಅವ್ರ ಬ್ಯಾಟಿಂಗ್ ಎಷ್ಟು ಡೇಂಜರಸ್ ಅನ್ನೋದಕ್ಕೆ ಈ ನಂಬರ್ ಗಳೇ ಸಾಕ್ಷಿ.

ಟಾಪ್ 3 ಅರ್ಧಶತಕ!

ರನ್                ಬಾಲ್             ಸ್ಟ್ರೈಕ್ ರೇಟ್               ಎದುರಾಳಿ

68*                  20                  340                      ನ್ಯೂಜಿಲೆಂಡ್

84                   35                  240                        ನ್ಯೂಜಿಲೆಂಡ್

75                   37                   202.7                      ಬಾಂಗ್ಲಾದೇಶ

ಈ ನಂಬರ್​ಗಳನ್ನ ನೋಡಿದಾದ್ಲೇ ಅಭಿಷೇಕ್ ಎಂಥಾ ಬ್ಯಾಟರ್ ಅನ್ನೋದು ಗೊತ್ತಾಗ್ತಿದೆ. ಪ್ರಸ್ತುತ 929 ಅಂಕಗಳೊಂದಿಗೆ  T20 ಸ್ವರೂಪದಲ್ಲಿ ವಿಶ್ವದ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಿದ್ದಾರೆ. ಅಭಿಷೇಕ್ ಅವರನ್ನು ವೆಸ್ಟ್ ಇಂಡೀಸ್‌ನ ಸ್ಫೋಟಕ ಬಿಗ್ ಹಿಟ್ಟರ್ ಕ್ರಿಸ್ ಗೇಲ್‌ಗೆ ಕಂಪೇರ್ ಮಾಡ್ತಿದ್ದಾರೆ. ಹಾಗೇ ಕ್ರಿಕೆಟ್‌ನ ಶ್ರೇಷ್ಠ ಹೆಸರುಗಳಲ್ಲಿ ಒಬ್ಬರಾದ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್, ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅಭಿಷೇಕ್ ಅತಿ ಹೆಚ್ಚು ರನ್ ಗಳಿಸುವ ಆಟಗಾರನಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಸದ್ಯ 25 ವರ್ಷದ ಅಭಿಷೇಕ್ ಗೆ ಎಲ್ಲರಿಂದ್ಲೂ ಅಪ್ರಿಶಿಯೇಷನ್ ಸಿಗ್ತಿದೆ. ವಿಶ್ವಕಪ್​ನಲ್ಲೂ ವಾರಿಯರ್​ನಂತೆ ಹೋರಾಡೋಕೆ ರೆಡಿಯಾಗ್ತಿದ್ದಾರೆ. ಯುವರಾಜ್ ಸಿಂಗ್ ಗರಡಿಯಲ್ಲಿ ಪಳಗಿರೋ ಅಭಿಗೆ ಇದು ಮೊದಲ ಐಸಿಸಿ ಟೂರ್ನಿಯಾಗಿದ್ದು ಭಾರತಕ್ಕೆ ಕಪ್ ಗೆಲ್ಲಿಸೋ ಎಲ್ಲಾ ಸಾಮರ್ಥ್ಯವೂ ಅವ್ರಲ್ಲಿದೆ.

Shantha Kumari