ಅಭಿಷೇಕ್ ಬಚ್ಚನ್ ರಾಜಕೀಯಕ್ಕೆ ಎಂಟ್ರಿ ? – ಸಮಾಜವಾದಿ ಪಕ್ಷದಿಂದ ಕಣಕ್ಕಿಳಿಯುತ್ತಿದ್ದಾರಾ ಬಾಲಿವುಡ್ ಹೀರೋ?

ಅಭಿಷೇಕ್ ಬಚ್ಚನ್ ರಾಜಕೀಯಕ್ಕೆ ಎಂಟ್ರಿ ? – ಸಮಾಜವಾದಿ ಪಕ್ಷದಿಂದ ಕಣಕ್ಕಿಳಿಯುತ್ತಿದ್ದಾರಾ ಬಾಲಿವುಡ್ ಹೀರೋ?

ಬಾಲಿವುಡ್‌ನ ಜ್ಯೂನಿಯರ್ ಬಚ್ಚನ್ ರಾಜಕೀಯಕ್ಕೆ ಎಂಟ್ರಿ ಕೊಡ್ತಿದ್ದಾರಾ.. ಹೀಗೊಂದು ಮಾತು ಈಗ ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಹಿಂದಿ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ತಮ್ಮದೇ ಆದ ರೀತಿಯಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಅಭಿಷೇಕ್ ಬಚ್ಚನ್ ಈಗ ರಾಜಕೀಯದತ್ತ ಮುಖ ಮಾಡಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ: ‘ಜವಾನ್’ ಸಿನಿಮಾದ ಮತ್ತೊಂದು ಪೋಸ್ಟರ್ ರಿಲೀಸ್ – ಬೋಳುತಲೆಯಲ್ಲಿ ಕಾಣಿಸಿಕೊಂಡ ಶಾರುಖ್‌ಖಾನ್..!..!

ಬಚ್ಚನ್ ಕುಟುಂಬಕ್ಕೆ ರಾಜಕೀಯ ಹೊಸದಲ್ಲ. ಅಭಿಷೇಕ್ ತಾಯಿ ಜಯಾ ಅವರು ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಸಮಾಜವಾದಿ ಪಕ್ಷದ ಸದಸ್ಯೆ ಆಗಿದ್ದಾರೆ. ಅಮಿತಾಭ್ ಬಚ್ಚನ್ ಕೂಡ ಒಮ್ಮೆ ರಾಜಕೀಯಕ್ಕೆ ಹೋಗಿ ಬಂದಿದ್ದರು. ಈಗ ಅಭಿಷೇಕ್ ಬಚ್ಚನ್ ಕೂಡ ರಾಜಕೀಯಕ್ಕೆ ಎಂಟ್ರಿ ನೀಡಲಿದ್ದಾರೆ ಎಂಬ ಸುದ್ದಿ ಇದೆ. ಬರುವ ಲೋಕಸಭಾ ಚುನಾವಣೆಗೆ ಅಭಿಷೇಕ್ ಬಚ್ಚನ್ ಅವರನ್ನು ಕಣಕ್ಕೆ ಇಳಿಸುವ ನಿಟ್ಟಿನಲ್ಲಿ ಸಮಾಜವಾದಿ ಪಕ್ಷ ಮುಂದಾಗಿದೆ ಎನ್ನಲಾಗುತ್ತಿದೆ. ಆದರೆ, ಬಚ್ಚನ್ ಕುಟುಂಬದಲ್ಲಿ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ನಟನೆಯ ಜೊತೆಗೆ ಅಭಿಷೇಕ್ ಬಚ್ಚನ್‌ಗೆ ಕ್ರೀಡೆಯ ಬಗ್ಗೆ ಹೆಚ್ಚಿನ ಆಸಕ್ತಿ ಇದೆ. ಅನೇಕ ಬಾರಿ ಅವರು ಐಪಿಎಲ್ ಮ್ಯಾಚ್ ನೋಡಲು ಬಂದಿದ್ದರು. ಪ್ರೋ ಕಬ್ಬಡಿ ಲೀಗ್‌ನಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡದ ಮಾಲೀಕತ್ವವನ್ನು ಅಭಿಷೇಕ್ ಹೊಂದಿದ್ದಾರೆ.

suddiyaana