ನಾನಿನ್ನೂ ವಿವಾಹಿತ.. ಡಿವೋರ್ಸ್ ವದಂತಿ ಬ್ರೇಕ್‌ ಹಾಕಿದ ಅಭಿಷೇಕ್ ಬಚ್ಚನ್!

ನಾನಿನ್ನೂ ವಿವಾಹಿತ.. ಡಿವೋರ್ಸ್ ವದಂತಿ ಬ್ರೇಕ್‌ ಹಾಕಿದ ಅಭಿಷೇಕ್ ಬಚ್ಚನ್!

ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ದಾಂಪತ್ಯದಲ್ಲಿ ಬಿರುಕು ಬಿದ್ದಿದೆ ಅನ್ನೋ ವಿಚಾರ ಬಿಟೌನ್‌ ನಲ್ಲಿ ಭಾರಿ ಸದ್ದು ಮಾಡ್ತಾ ಇದೆ. ಇದಕ್ಕೆ ಪುಷ್ಠಿ ನೀಡುವಂತಹ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಇತ್ತೀಚೆಗೆ ಅಭಿಷೇಕ್‌ ಬಚ್ಚನ್‌ ಐಶ್ವರ್ಯಗೆ ಡಿವೋರ್ಸ್‌ ನೀಡಿದ್ದೇನೆ ಎಂದು ಹೇಳಿರುವ ಫೇಕ್‌ ವಿಡಿಯೋ ವೈರಲ್‌ ಆಗಿತ್ತು. ಇದೀಗ ಅಭಿಷೇಕ್‌ ಬಚ್ಚನ್‌ ಹರಿದಾಡುತ್ತಿರುವ ಗಾಳಿ ಸುದ್ದಿಗೆ ಬ್ರೇಕ್‌ ಹಾಕಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ರಾಜ್ಯದ ನಿರುದ್ಯೋಗಿಗಳಿಗೆ ಸರ್ಕಾರದಿಂದ ಗುಡ್‌ನ್ಯೂಸ್‌ – ಇನ್ನುಮುಂದೆ ಭತ್ಯೆ ಜೊತೆ ಉದ್ಯೋಗ !

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ವಿಚ್ಛೇದನ ವದಂತಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಇವರಿಬ್ಬರ ದಾಂಪತ್ಯದ ಬಗ್ಗೆ ಸಾಕಷ್ಟು ಸುಳ್ಳು ಸುದ್ದಿ ಹರಿದಾಡುತ್ತಿದೆ. ಇಲ್ಲಿವರೆಗೂ ಬಚ್ಚನ್‌ ಫ್ಯಾಮಿಲಿ ಸ್ಪಷ್ಟನೆ ನೀಡಿರಲಿಲ್ಲ. ಇದೀಗ .ಮೊದಲ ಬಾರಿಗೆ ಅಭಿಷೇಕ್‌ ಈ ವಿಚಾರ ಬಗ್ಗೆ ಮಾತನಾಡಿದ್ದಾರೆ. ‘ನಾನಿನ್ನೂ ವಿವಾಹಿತ’ ಎಂದು ಅವರು ಹೇಳಿಕೆ ನೀಡಿದ್ದಾರೆ. ಇದರಿಂದ ಅಭಿಷೇಕ್ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ವದಂತಿಗಳ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ನೀವೆಲ್ಲರೂ ಬೇರೆ ರೀತಿಯಲ್ಲೇ ಸುದ್ದಿ ಪ್ರಕಟಿಸಿದ್ದೀರಿ. ನೀವು ಏನ್ನಾದರೂ ಒಂದು ಸುದ್ದಿ ಪ್ರಕಟಿಸಬೇಕು. ಅದು ನನಗೆ ಅರ್ಥವಾಗುತ್ತದೆ. ನಾವು ಸೆಲೆಬ್ರಿಟಿಗಳು ಅದನ್ನು. ‘ನಾನಿನ್ನೂ ವಿವಾಹಿತ’ ಎಂದು ಅವರು ಹೇಳಿದ್ದಾರೆ.

ಅಭಿಷೇಕ್ ಹಾಗೂ ಐಶ್ವರ್ಯಾ ಸಂಬಂಧಕ್ಕೆ 17 ವರ್ಷ. ಈ ದಂಪತಿಗೆ ಆರಾಧ್ಯಾ ಹೆಸರಿನ ಮಗಳು ಇದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಈ ದಂಪತಿ ಒಟ್ಟಾಗಿ ಫೋಟೋ ಶೇರ್ ಮಾಡಿಕೊಳ್ಳೋದು ಕಡಿಮೆ ಆಗಿದೆ. ಜನ್ಮದಿನ ಹಾಗೂ ವಿವಾಹ ವಾರ್ಷಿಕೋತ್ಸವ ಸಂದರ್ಭಗಳಲ್ಲಿ ಮಾತ್ರ ಇವರು ಫೋಟೋ ಅಪ್​ಲೋಡ್ ಮಾಡುತ್ತಾರೆ.

ಅನಂತ್ ಅಂಬಾನಿ ಮದುವೆ ಸಮಾರಂಭಕ್ಕೆ ಅಭಿಷೇಕ್‌ ಹಾಗೂ ಐಶ್ವರ್ಯ ಪ್ರತ್ಯೇಕವಾಗಿ ಬಂದಿದ್ದು ಚರ್ಚೆ ಹುಟ್ಟುಹಾಕಿತು. ಆ ಬಳಿಕ ಡಿವೋರ್ಸ್​ಗೆ ಸಂಬಂಧಿಸಿದ ಪೋಸ್ಟ್ ಲೈಕ್ ಮಾಡಿ ಅವರು ಸುದ್ದಿ ಆದರು. ಅಭಿಷೇಕ್ ಬಚ್ಚನ್ ಅವರು ಮಾಧ್ಯಮಗಳ ಕೈಗೆ ಸಿಗುತ್ತಿಲ್ಲ. ಪ್ರೆಸ್​​ಮೀಟ್​ಗಳಲ್ಲಿ ಭಾಗಿ ಆಗುತ್ತಿಲ್ಲ. ಹೀಗಿರುವಾಗಲೇ ಅವರು ವಿದೇಶಿ ಮಾಧ್ಯಮ ಒಂದಕ್ಕೆ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

Shwetha M