ಐಶ್ವರ್ಯ ರೈ ಬೆನ್ನಲ್ಲೇ ಕೋರ್ಟ್ ಮೆಟ್ಟಿಲೇರಿದ ಅಭಿಷೇಕ್ ಬಚ್ಚನ್! – ಕಾರಣವೇನು ಗೊತ್ತಾ?

ಬಾಲಿವುಡ್ ನಟಿ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಐಶ್ವರ್ಯ ರೈ ಕೋರ್ಟ್ ಮೆಟ್ಟಿಲು ಹತ್ತಿದ್ರು. ತನ್ನ ಹಕ್ಕುಗಳ ರಕ್ಷಣೆಗಾಗಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ರು. ಇದೀಗ ಐಶ್ವರ್ಯ ರೈ ಪತಿ ಅಭಿಷೇಕ್ ಬಚ್ಚನ್ ಕೂಡ ನ್ಯಾಯಾಲಯ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: ಹಳದಿ ಮಾರ್ಗದಲ್ಲಿ ಇಂದಿನಿಂದ ನಾಲ್ಕನೇ ರೈಲು ಸಂಚಾರ – ಹಳದಿ ಮಾರ್ಗದ ವೇಳಾಪಟ್ಟಿಯಲ್ಲಿ ಬದಲಾವಣೆ
ನಟಿ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಬಗ್ಗೆ ಕಳೆದ ಕೆಲ ತಿಂಗಳಿಂದ ಸಾಕಷ್ಟು ವದಂತಿಗಳು ಹಬ್ಬಿದ್ದವು. ಈ ದಂಪತಿ ಮಧ್ಯೆ ಎಲ್ಲವೂ ಸರಿಯಿಲ್ಲ. ಡಿವೋರ್ಸ್ ಪಡೆಯುತ್ತಿದ್ದಾರೆ ಎಂಬ ಗಾಸಿಪ್ ಹರಿದಾಡಿತ್ತು. ಆದ್ರೆ ಈ ದಂಪತಿ ಇದ್ರ ಬಗ್ಗೆ ತೆಲೆಕೆಡಿಸಿಕೊಂಡಿರಲಿಲ್ಲ. ಮೊನ್ನೆ ಮೊನ್ನೆಷ್ಟೇ ಐಶ್ವರ್ಯ ತಮ್ಮ ಹಕ್ಕುಗಳ ರಕ್ಷಣೆಗಾಗಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಐಶ್ವರ್ಯಾರೈ ವರ್ಲ್ಡ್ ಎಂಬ ವೆಬ್ಸೈಟ್ ವಿರುದ್ಧ ದೂರು ಸಲ್ಲಿಸಿದ್ದರು. ತಮ್ಮ ವ್ಯಕ್ತಿತ್ವ ಹಕ್ಕಿನ ಉಲ್ಲಂಘನೆ ಆಗಿದೆ ಎಂದು ಐಶ್ವರ್ಯಾ ಆರೋಪಿಸಿದ್ದರು. ಅದರಂತೆ ಈಗ ಅಭಿಷೇಕ್ ಬಚ್ಚನ್ ಸಹ ವ್ಯಕ್ತಿತ್ವ ರಕ್ಷಣೆಗಾಗಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಖ್ಯಾತ ನಟ, ನಟಿಯರ ಫೋಟೋ, ಅವರ ಧ್ವನಿ, ವ್ಯಕ್ತಿತ್ವವನ್ನು ಪ್ರಚಾರಕ್ಕಾಗಿ, ಜಾಹೀರಾತಿಗಾಗಿ ಇನ್ನೂ ಕೆಲವು ಕಾರಣಗಳಿಗಾಗಿ ಬಳಸಲಾಗುತ್ತದೆ. ಇದೀಗ ಅಭಿಷೇಕ್ ಬಚ್ಚನ್ ಅವರ ಫೋಟೋ, ಧ್ವನಿಯನ್ನ ಅನುಮತಿ ಇಲ್ಲದೆ ಬಳಸಿಕೊಳ್ಳಲಾಗಿದೆ. ಬಾಲಿವುಡ್ ಟಿ-ಶಾಪ್ ಎಂಬ ಹೆಸರಿನ ವೆಬ್ಸೈಟ್ ಒಂದರ ಮೇಲೆ ಅಭಿಷೇಕ್ ದೂರು ನೀಡಿದ್ದಾರೆ. ತಮ್ಮ ಅನುಮತಿ ಇಲ್ಲದೆ, ತಮ್ಮ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ಟಿ-ಶರ್ಟ್ಗಳ ಮೇಲೆ, ಕಾಫಿ ಕಪ್ಗಳ ಮೇಲೆ ಇನ್ನೂ ಹಲವೆಡೆ ತಮ್ಮ ಚಿತ್ರಗಳನ್ನು ಅನುಮತಿ ಇಲ್ಲದೆ ಬಳಸಲಾಗಿರುವುದಾಗಿ ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.ತಮ್ಮ ಅನುಮತಿ ರಹಿತವಾಗಿ ತಮ್ಮ ಹೆಸರು, ರೂಪ, ವ್ಯಕ್ತಿತ್ವ, ಕಂಠಗಳನ್ನು ಬಳಸಿರುವ ವೆಬ್ಸೈಟ್ಗಳನ್ನು, ಯೂಟ್ಯೂಬ್ ವಿಡಿಯೋಗಳನ್ನು ತೆಗೆಯುವಂತೆ ಆದೇಶ ನೀಡುವಂತೆ ಅವರು ನ್ಯಾಯಾಲಯದ ಬಳಿ ಮನವಿ ಮಾಡಿದ್ದಾರೆ.
ಇನ್ನು ನಟ ಅಮಿತಾಬ್ ಬಚ್ಚನ್ ಅವರ ಧ್ವನಿಯ ನಕಲನ್ನು ಅನುಮತಿ ಇಲ್ಲದೆ ಜಾಹೀರಾತುಗಳಿಗೆ ಬಳಸಲಾಗುತ್ತಿತ್ತು. ಅಮಿತಾಬ್ ಬಚ್ಚನ್ರಂತೆ ಉಡುಗೆ, ಮೇಕಪ್ ಧರಿಸಿ ಶೋ ಮಾಡುವುದು ಇವೆಲ್ಲವೂ ವ್ಯಕ್ತಿತ್ವ ಹಕ್ಕಿನ ಉಲ್ಲಂಘನೆ ಆಗಿದ್ದು, ಇವುಗಳ ವಿರುದ್ಧ ಅಮಿತಾಬ್ ಬಚ್ಚನ್ ದೂರು ನೀಡಿದ್ರು. ಇದೀಗ ಬಚ್ಚನ್ ನ್ಯಾಯಾಲಯದ ಮೂಲಕ ರಕ್ಷಣೆ ಪಡೆದಿದ್ದಾರೆ.

ನೋಡಿರಿ

