ಡಿಸೆಂಬರ್ 11ರಂದು ನೆರವೇರಲಿದೆ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ?

ಡಿಸೆಂಬರ್ 11ರಂದು ನೆರವೇರಲಿದೆ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ?

ಬೆಂಗಳೂರು : ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಡಿಸೆಂಬರ್ 11 ರಂದು ಎಂಗೇಜ್‌ಮೆಂಟ್ ಮಾಡಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಬಲವಾಗಿ ಕೇಳಿಬರುತ್ತಿದೆ. ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥದ ಬಗ್ಗೆ ಹಲವು ದಿನಗಳಿಂದ ಸುದ್ದಿ ಹರಿದಾಡುತ್ತಲೇ ಇತ್ತು. ಇದಕ್ಕೆ ಸರಿಯಾಗಿ ಹಾಗೇನೂ ಇಲ್ಲ ಅನ್ನೋ ರೀತಿ ಅಭಿಷೇಕ್ ನಗುತ್ತಲೇ ಜಾರಿಕೊಳ್ಳುತ್ತಿದ್ದರು. ಮಾಧ್ಯಮದವರು ಕೇಳಿದ್ರೆ ನೀವೇ ಹುಡುಗಿಯನ್ನು ಹುಡುಕಿಕೊಡಿ ಎಂದು ತಮಾಷೆಯಾಗಿ ಮಾತಾಡಿದ್ದರು. ಇದೆಲ್ಲದರ ಮಧ್ಯೆ, ಅಭಿಷೇಕ್ ಮನೆಯಲ್ಲಿ ಮದುವೆ ಮಾತುಕತೆ ನಡೆದಿದ್ದು, ತಾಂಬೂಲ ಬದಲಿಸಿಕೊಳ್ಳುವ ಶಾಸ್ತ್ರ ಕೂಡ ಮುಗಿದಿದೆ ಎಂಬ ವಿಚಾರ ತಿಳಿದುಬಂದಿದೆ.

ಇದನ್ನೂ ಓದಿ :  ನಟಿ ಸಮಂತಾಗೆ ಮತ್ತೆ ಮತ್ತೆ ಕಾಡುತ್ತಿದೆ ಅನಾರೋಗ್ಯದ ಸಮಸ್ಯೆ, ವಿದೇಶದಲ್ಲಿ ಚಿಕಿತ್ಸೆ ?

ಡಿಸೆಂಬರ್ 11 ರಂದು ಅಭಿಷೇಕ್ , ತಮ್ಮ ಗೆಳತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ.  ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರಿ ಜೊತೆ ಅಭಿಷೇಕ್ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಅವಿದಾ ಬಿದ್ದಪ್ಪ ಅಭಿಷೇಕ್ ಅವರ  ಬಹುಕಾಲದ ಗೆಳತಿಯಾಗಿದ್ದು, ಇವರೇ ಸಂಗಾತಿಯಾಗಿ ಬರಲಿದ್ದಾರೆ ಎನ್ನಲಾಗುತ್ತಿದೆ. ಎಂಗೇಜ್ ಮೆಂಟ್ ಬೆಂಗಳೂರಿನ ಪ್ರತಿಷ್ಠಿತ ಸ್ಟಾರ್ ಹೋಟೆಲ್ ನಲ್ಲಿ ನಡೆಯಲಿದ್ದು, ಈಗಾಗಲೇ ರಜನಿಕಾಂತ್ ಸೇರಿದಂತೆ ದಕ್ಷಿಣದ ಹಲವು ದಿಗ್ಗಜರಿಗೆ ಆಹ್ವಾನ ನೀಡಲಾಗಿದೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.

suddiyaana