ಬೆಂಚ್ ನಲ್ಲೇ ಬಂಧಿಯಾದ ಅಭಿಮನ್ಯು – ಡೆಬ್ಯೂ ಚಕ್ರವ್ಯೂಹ ಭೇದಿಸೋದೇ ಕಷ್ಟನಾ?
ಟ್ಯಾಲೆಂಟ್ ಇದ್ರೂ ಈಶ್ವರನ್ ಗಿಲ್ಲ ಚಾನ್ಸ್!

ದೇಶಿ ಕ್ರಿಕೆಟ್ ಹೀರೋ, ಬೆಂಗಾಗ್ ಬ್ಯಾಟರ್ ಅಭಿಮನ್ಯು ಈಶ್ವರನ್ ತಮ್ಮ ತಂದೆಗೆ ಹೇಳಿರೋ ಮಾತು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಕ್ರಿಕೆಟ್ ಲೋಕದಲ್ಲಿ ಹಾಟ್ ಟಾಪಿಕ್ ಅಂದ್ರೂ ತಪ್ಪಾಗಲ್ಲ. ಯಾಕಂದ್ರೆ ತಮಗೆ ಆಗ್ತಿರೋ ನೋವು, ನಿರಾಸೆ, ಹತಾಶೆ, ಅನ್ಯಾಯ ಎಲ್ಲವನ್ನೂ ತಮ್ಮ ತಂದೆ ಮುಂದೆ ಬಾಯಿ ಬಿಟ್ಟಿದ್ದಾರೆ. ತಂಡಕ್ಕೆ ಆಯ್ಕೆಯಾದ್ರೂ ಮೈದಾನಕ್ಕೆ ಇಳಿಯೋ ಭಾಗ್ಯ ಸಿಕ್ಕಿಲ್ಲ.
ಇದನ್ನೂ ಓದಿ : IND Vs PAK ಮ್ಯಾಚ್ ನಡೀಬೇಕಾ? – ಏಷ್ಯಾಕಪ್ ಗೂ ಬ್ಯಾನ್ ಬಿಸಿ ತಟ್ಟುತ್ತಾ?
ಅಭಿಮನ್ಯು ಈಶ್ವರನ್ ಕಳೆದ ಮೂರು ವರ್ಷಗಳಿಂದ ಟೀಮ್ ಇಂಡಿಯಾದಲ್ಲಿ ವಾಟರ್ ಭಾಯ್ ಗಷ್ಟೇ ಸೀಮಿತರಾಗಿದ್ದಾರೆ. ಓನ್ಲಿ ಗೆಸ್ಟ್ ಅಪಿರಿಯನ್ಸ್ ಪ್ಲೇಯರ್ ಆಗಿದ್ದಾರೆ. 2021ರಲ್ಲಿ ಹೆಚ್ಚುವರಿ ಆಟಗಾರನಾಗಿ ಇಂಗ್ಲೆಂಡ್ ಪ್ರವಾಸದಲ್ಲಿ ಸ್ಥಾನ ಪಡೆದಿದ್ದ ಈಶ್ವರನ್, 2022ರ ಬಾಂಗ್ಲಾ ಪ್ರವಾಸದಿಂದ ಆಲ್ಮೋಸ್ಟ್ ಟೆಸ್ಟ್ ಸರಣಿಗಳಲ್ಲಿ ಸ್ಥಾನ ಪಡೆದುಕೊಳ್ತಿದ್ದಾರೆ. ಆದ್ರೆ, ಸ್ಥಾನ ಪಡೆದ್ರೂ, ಸರಣಿಯುದ್ದಕ್ಕೂ ಬೆಂಚ್ ಬಿಸಿ ಮಾಡಿದ್ದು ಬಿಟ್ರೆ ಮೈದಾನಕ್ಕೆ ಇಳಿಯೋಕೆ ಚಾನ್ಸ್ ಸಿಕ್ಕಿಲ್ಲ. 2022ರಲ್ಲಿ ಮೊದಲ ಬಾರಿಗೆ ಟೀಮ್ ಇಂಡಿಯಾ ಎಂಟ್ರಿ ನೀಡಿದ ಅಭಿಮನ್ಯು, ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲೇ ಡೆಬ್ಯು ಮಾಡೋ ನಿರೀಕ್ಷೆ ಇತ್ತು. ಆದ್ರೆ, ಅದು ಸಾಧ್ಯವಾಗಲಿಲ್ಲ. ಈಗ ಇಂಗ್ಲೆಂಡ್ ಸರಣಿಯಲ್ಲಾದ್ರೂ ಸಿಕ್ಕೇ ಸಿಗುತ್ತೆ ಅನ್ನೋ ಕನಸಿನಲ್ಲಿದ್ರು. ಆದ್ರೆ ಇಲ್ಲೂ ಕೂಡ ಪ್ಲೇಯಿಂಗ್ ಇಲೆವೆನ್ ಸೇರೋಕೆ ಸಾಧ್ಯವಾಗಲೇ ಇಲ್ಲ.
ಅಷ್ಟಕ್ಕೂ ಇಲ್ಲಿ ಅಭಿಮನ್ಯುಗೆ ಯಾಕೆ ಚಾನ್ಸ್ ಸಿಗ್ಬೇಕು ಅಂತಾ ನಾವಿಲ್ಲಿ ಹೇಳೋಕೆ ಕಾರಣವೂ ಇದೆ. ಇದುವರೆಗೆ 103 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಅಭಿಮನ್ಯು ಈಶ್ವರನ್, 48.70 ಸರಾಸರಿಯಲ್ಲಿ 7841 ರನ್ ಗಳಿಸಿದ್ದಾರೆ. ಈ ಪೈಕಿ 27 ಶತಕ, 31 ಅರ್ಧ ಶತಕ ದಾಖಲಿಸಿದ್ದಾರೆ.
ಅವಕಾಶಕ್ಕಾಗಿ ಇನ್ನೇನು ಮಾಡ್ಬೇಕು?
ದೇಶಿ ಕ್ರಿಕೆಟ್ನಲ್ಲಿ ಅಭಿಮನ್ಯು ಈಶ್ವರನ್ 103 ಪಂದ್ಯಗಳನ್ನಾಡಿದ್ದಾರೆ
ಅಭಿಮನ್ಯು ಬಳಿಕ ಭಾರತ ತಂಡಕ್ಕೆ ಕಾಲಿಟ್ಟವರಿಗೆ ಮೈದಾನಕ್ಕಿಳಿಯೋ ಅವಕಾಶ
ಈಶ್ವರನ್ ಆಗಮನದ ಬಳಿಕ ಬಂದ ಇತರರಿಗೆ ಡೆಬ್ಯೂ ಭಾಗ್ಯ ಸಿಕ್ಕಿದೆ
15 ಮಂದಿಯಲ್ಲಿ 10 ಆಟಗಾರರು ಬ್ಯಾಟ್ಸ್ ಮನ್ ಗಳೇ ಆಗಿದ್ದಾರೆ
ಕೆ.ಎಸ್.ಭರತ್, ಇಶಾನ್ ಕಿಶನ್, ರಜತ್ ಪಾಟಿದಾರ್, ಸೂರ್ಯಕುಮಾರ್
ಯಶಸ್ವಿ ಜೈಸ್ವಾಲ್, ಸರ್ಫರಾಜ್, ಧೃವ್ ಜುರೇಲ್, ದೇವದತ್ ಪಡಿಕ್ಕಲ್
ನಿತೀಶ್ ರೆಡ್ಡಿ, ಸಾಯಿ ಸುರ್ದಶನ್, ಮುಖೇಶ್ ಕುಮಾರ್, ಪ್ರಸಿದ್ಧ್ ಕೃಷ್ಣ
ಆಕಾಶ್ ದೀಪ್, ಹರ್ಷಿತ್ ರಾಣಾ, ಅನ್ಶುಲ್ ಕಾಂಬೋಜ್ ಪದಾರ್ಪಣೆ
8 ವರ್ಷಗಳ ಬಳಿಕ ಕಮ್ಬ್ಯಾಕ್ ಮಾಡಿದ್ದ ಕರುಣ್ ನಾಯರ್ ಕನಸು ನನಸು
ವಿರಾಟ್ ಕೊಹ್ಲಿಯ ನಾಯಕತ್ವದಿಂದಲೂ ತಂಡದಲ್ಲಿದ್ರೂ ಈಶ್ವರನ್ ಗೆ ಅನ್ಯಾಯ
ಇನ್ನು ದೇಶೀಯ ಪಂದ್ಯಗಳಲ್ಲಿ ಸಾಲಿಡ್ ಪ್ರದರ್ಶನ ನೀಡಿದ ಹೊರತಾಗಿಯೂ ಅಭಿಮನ್ಯು ಈಶ್ವರನ್ ಅವರಿಗೆ ಅವಕಾಶ ಸಿಗದಿರುವ ಬಗ್ಗೆ ಇದೀಗ ಅವರ ತಂದೆ ರಂಗನಾಥನ್ ಪರಮೇಶ್ವರನ್ ಈಶ್ವರ್ ಅವರ ತಂದೆ ಭಾವನಾತ್ಮಕವಾಗಿ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪ್ಲೇಯಿಂಗ್ 11ನಲ್ಲಿ ಅವನಿಗೆ ಅವಕಾಶ ಸಿಗದಿದ್ದಕ್ಕೆ ತುಂಬಾ ಬೇಸರವಾಗಿತ್ತು. ನಾನು ಅವನಿಗೆ ಕರೆ ಮಾಡಿದಾಗ, ‘ಅಪ್ಪಾ, ನನಗೆ ಇನ್ನೂ ಆಡಲು ಅವಕಾಶ ಸಿಗಲಿಲ್ಲ’ ಎಂದನು. ಆದ್ರೆ ನನಗೆ ಭರವಸೆ ಇದೆ. ಖಂಡಿತವಾಗಿಯೂ ಈಶ್ವರನ್ಗೆ ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕೇ ಸಿಗುತ್ತೆ ಎಂದಿದ್ದಾರೆ. ಸದ್ಯಕ್ಕೆ ಅಭಿಮನ್ಯು ಪ್ಲೇಯಿಂಗ್ 11 ಎನ್ನುವ ಚಕ್ರವ್ಯೂಹ ಭೇದಿಸೋದು ಕಷ್ಟವಾಗಿರಬಹುದು.

ನೋಡಿರಿ

